ಭುವನೇಶ್ವರ: ಕಾಡು ಕರಡಿಗಳೆರಡು ಆಹಾರಕ್ಕಾಗಿ ನಾಡಿಗೆ ನುಗ್ಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿರುವ ಘಟನೆ ಒಡಿಶಾದ ನಬ್ರಂಗ್ಪುರ ಜಿಲ್ಲೆಯ ಉಮರ್ ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ನಡೆದಿದೆ. ಕರಡಿಗಳು ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಬಂದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ತಾಯಿ ಕರಡಿ ಹಾಗೂ ಅದರ ಮರಿ ಹಸಿವಿನಿಂದ ಆಹಾರ ಹುಡುಕಿಕೊಂಡು ಹಳ್ಳಿಯೆಡೆಗೆ ಬಂದಿರುವುದಾಗಿ ಶಂಕಿಸಲಾಗಿದೆ. ಕಾಡಿಗೆ ಬಹು ಸಮೀಪವಿರುವ ಬುರ್ಜಾ ಗ್ರಾಮಕ್ಕೆ ಕರಡಿಗಳು ನುಗ್ಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಲಾರ್ಡ್ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ
Advertisement
Sloth bears, Mother and baby duo intrudes human habitation in search of #food later being chased away by villagers in Umerkote block of #Odisha‘s Nabrangpur District @aajtak @IndiaToday pic.twitter.com/pnyMVTwS1r
— Suffian سفیان (@iamsuffian) January 19, 2022
Advertisement
ವೀಡಿಯೋದಲ್ಲಿ ಕರಡಿಗಳು ಮನೆಯೊಂದಕ್ಕೆ ನುಗ್ಗಲು ಪ್ರಯತ್ನಿಸಿರುವುದನ್ನು ನೋಡಬಹುದು. ಆದರೆ ಅಲ್ಲಿನ ನಾಯಿಗಳು ಜೋರಾಗಿ ಬೊಗಳಿ ಕರಡಿಗಳನ್ನೇ ಹೆದರಿಸಿವೆ. ನಂತರದಲ್ಲಿ ಗ್ರಾಮಸ್ಥರು ಬೆಂಕಿಯಿಂದ ಅವುಗಳನ್ನು ಹೆದರಿಸಿ ಸಮೀಪದ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಟೆಸ್ಟ್‌ಗೆ ಕಳುಹಿಸಿ 22 ದಿನದ ನಂತರ ಬಂತು ಓಮಿಕ್ರಾನ್ ವರದಿ – ಅಷ್ಟರಲ್ಲಿ ಗುಣಮುಖಳಾಗಿ ಡಿಸ್ಚಾರ್ಜ್ ಆಗಿದ್ಲು ಯುವತಿ!
Advertisement
ಅದೃಷ್ಟವಶಾತ್ ಕರಡಿಗಳು ಗ್ರಾಮದಲ್ಲಿ ಯಾವುದೇ ಪ್ರಾಣಿ ಅಥವಾ ಜನರ ಮೇಲೆ ದಾಳಿ ಮಾಡಿಲ್ಲ.