ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ದಿನದಂದು ಪತಿಗೆ, ನನ್ನ ಜೀವನ ಆಧಾರಸ್ತಂಭ, ನೀವು ಅದ್ಭುತ ವ್ಯಕ್ತಿ ಎಂದು ಪತ್ನಿ ಪ್ರಗತಿ (Pragathi Shetty) ಪ್ರೀತಿಯಿಂದ ಶುಭಕೋರಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಜೊತೆಗೆ ನಟನಿಗೆ ಅಭಿಮಾನಿಗಳಿಂದ ಹುಟ್ಟುಹಬ್ಬದ (Birthday) ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ.
ನಟನೆ, ನಿರ್ದೇಶನ, ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಇದೀಗ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಾಂತಾರ ಪ್ರೀಕ್ವೆಲ್ ಚಿತ್ರಕ್ಕಾಗಿ ಹುಟ್ಟೂರಿನಲ್ಲಿ ಸದ್ಯ ರಿಷಬ್ ಬೀಡು ಬಿಟ್ಟಿದ್ದಾರೆ. ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪ್ರಗತಿ ಶೆಟ್ಟಿ ಲವ್ಲಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಶಿವಣ್ಣ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್
- Advertisement -
- Advertisement -
“ನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮನ್ನು ನಿಜವಾಗಿಯೂ ತಿಳಿದಿರುವವರು ಅದೃಷ್ಟವಂತರು. ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ಪ್ರತಿದಿನ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಪ್ರಗತಿ ಶೆಟ್ಟಿ ಬಣ್ಣಿಸಿದ್ದಾರೆ. ನಾವು ಒಟ್ಟಿಗೆ ಇರುವುದಕ್ಕಾಗಿ ನಾನು ಪ್ರತಿದಿನ ದೇವರಿಗೆ ಕೃತಜ್ಞನಾಗಿದ್ದೇನೆ. ನಿಮಗೆ ಸಂತೋಷ, ಯಶಸ್ಸು ಮತ್ತು ಪ್ರಪಂಚದ ಎಲ್ಲಾ ಸಂತೋಷದಿಂದ ತುಂಬಿದ ವರ್ಷವಾಗಲಿ” ಎಂದು ಹಾರೈಸುತ್ತೇನೆ ಎಂದು ಪತ್ನಿ ಶುಭಕೋರಿದ್ದಾರೆ. ಈ ಪೋಸ್ಟ್ ನೋಡಿದ ಫ್ಯಾನ್ಸ್, ಜೋಡಿ ಅಂದರೆ ಹೀಗಿರಬೇಕು ಎಂದು ಹಾಡಿಹೊಗಳಿದ್ದಾರೆ.
- Advertisement -
View this post on Instagram
- Advertisement -
ಇನ್ನೂ ಪ್ರಗತಿ ಶೆಟ್ಟಿ ಮತ್ತು ರಿಷಬ್ ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಪಡೆದು 2017ರ ಫೆ.9ರಂದು ಕುಂದಾಪುರದಲ್ಲಿ ಮದುವೆಯಾದರು. ಪತಿ ರಿಷಬ್ ಯಶಸ್ಸಿಗೆ ಪ್ರಗತಿ ಶಕ್ತಿಯಾಗಿ ನಿಂತರು. ಅವರ ಕೆಲಸಗಳಿಗೆ ಸಾಥ್ ನೀಡುತ್ತಲೇ ಬಂದಿದ್ದಾರೆ.
ಅಂದಹಾಗೆ, ರಿಕ್ಕಿ, ಕಿರಿಕ್ ಪಾರ್ಟಿ, ಸೇರಿದಂತೆ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಬೆಲ್ ಬಾಟಂ’ ಚಿತ್ರದ ನಾಯಕ ನಟನಾಗಿ ಗೆದ್ದು ಬೀಗಿದ್ದರು. ಆದರೆ ‘ಕಾಂತಾರ’ (Kantara) ಸಿನಿಮಾದಲ್ಲಿ ನಟಸಿ, ನಿರ್ದೇಶನ ಮಾಡಿ ಸೆನ್ಸೇಷನ್ ಕ್ರಿಯೆಟ್ ಮಾಡಿದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಿಷಬ್ ಗುರುತಿಸಿಕೊಂಡರು. ಇದೀಗ ಕಾಂತಾರ ಪ್ರೀಕ್ವೆಲ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.