ಡೆಹಾಡ್ರೂನ್: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದ ಯೋಧನ ಪತ್ನಿಯೂ ಈಗ ದೇಶಸೇವೆಗೆ ಸೇರಿದ್ದಾರೆ.
ಸಂಗೀತಾ ಮಾಲ್ ಭಾರತೀಯ ಸೇನೆಗೆ ಸೇರಿದ ಯೋಧನ ಪತ್ನಿ. ಇವರು ಚೆನ್ನೈನಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಶನಿವಾರ ಭಾರತೀಯ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದಾರೆ.
Advertisement
ಸಂಗೀತಾ ಮಾಲ್ ಅವರು 2013ರಲ್ಲಿ ಗೂರ್ಖಾ ರೈಫಲ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಶಿಶಿರ್ ಮಾಲ್ ಅವರನ್ನು ಮದುವೆಯಾಗಿದ್ದರು. ಮೊದಲು ಸಂಗೀತಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜಮ್ಮು ಕಾಶ್ಮೀರದ ಬಾರಾಮುಲ್ಲಾ ಸೆಕ್ಟರ್ ನಲ್ಲಿ ಗೂರ್ಖಾ ರೈಫಲ್ಸ್ ನಲ್ಲಿ ಶಿಶಿರ್ ಸೇವೆ ಸಲ್ಲಿಸುತ್ತಿದ್ದರು. ಸೆಪ್ಟೆಂಬರ್ 2015ರಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಶಿಶಿರ್ ಹುತಾತ್ಮರಾಗಿದ್ದರು.
Advertisement
Advertisement
ಪತಿಯ ಮರಣದ ನಂತರ ಸಂಗೀತಾ ಅವರು ಶಿಕ್ಷಕಿ ವೃತ್ತಿಯನ್ನು ಬಿಟ್ಟಿದ್ದರು. ಅಷ್ಟೇ ಅಲ್ಲದೇ ಅದೇ ನೋವಿನಿಂದ ಸಂಗೀತಾಗೆ ಗರ್ಭಪಾತ ಕೂಡ ಆಗಿತ್ತು. ಬಳಿಕ ನಮ್ಮ ತಾಯಿ ಅವರಿಗೆ ವಿದ್ಯಾಭ್ಯಾಸ ಮಾಡಿ ಬ್ಯಾಂಕಿಂಗ್ ಕೆಲಸ ಮಾಡಲು ಪ್ರೋತ್ಸಾಹಿಸಿದರು ಎಂದು ಸಂಗೀತ ಮೈದುನಾ ಸುಶಾಂತ್ ಮಾಲ್ ತಿಳಿಸಿದ್ದಾರೆ.
Advertisement
2016ರಲ್ಲಿ ರಾನಿಖೇತ್ ನಲ್ಲಿ ಸೇನಾ ಪದಕವನ್ನು ನೀಡಿ ಶಿಶಿರ್ ಅವರನ್ನು ಗೌರವಿಸಲಾಗಿತ್ತು. ಈ ಕಾರ್ಯಕ್ರಮದ ನೋಡಿ ಪ್ರೇರಣೆಗೊಂಡು ಸಂಗೀತಾ ಅವರು ಸೇನೆ ಸೇರಲು ಮುಂದಾದರು. ಕೆಲಸ ಮಾಡಿಕೊಂಡು ಅಧಿಕಾರಿಗಳ ತರಬೇತಿ ಅಕಾಡೆಮಿ(ಒಟಿಎ) ಪರೀಕ್ಷೆಯನ್ನು ಬರೆದು ಸಂಗೀತಾ ಉತ್ತೀರ್ಣರಾದರು. ಅಕಾಡೆಮಿಯಲ್ಲಿನ ಕಠಿಣ ತರಬೇತಿಯ ನಂತರ ಸಂಗೀತಾ ಈಗ ಸೇನೆಯ ಶಾರ್ಟ್ ಸರ್ವೀಸ್ ಕಮಿಷನ್ ನಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆ ಆಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv