BellaryCrimeLatestMain Post

ಹೆಂಡತಿ ಶೀಲ ಶಂಕಿಸಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ!

ಬಳ್ಳಾರಿ: ಹೆಂಡತಿ ಶೀಲ ಶಂಕಿಸಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನವಲಟ್ಟಿ ಗ್ರಾಮದ ನಾಗರಾಜ್ ಎಂಬಾತನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ಜೀವಾವಧಿ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ನ್ಯಾಯಾಲಯಕ್ಕೆ ತಲೆಬಾಗುತ್ತೇನೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ: ಬೈರತಿ ಬಸವರಾಜ್

jail

2016 ಡಿಸೆಂಬರ್ 7ರಂದು ಮನೆಯಲ್ಲಿದ್ದ ಪತ್ನಿ ಜಾನಕಿ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಳ್ಳುವಂತೆ ಒತ್ತಾಯ ಮಾಡಿದ್ದಲ್ಲದೆ, ತಾನೇ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿರುವುದು ಪೊಲೀಸ್ ವಿಚಾರಣೆಯಲ್ಲಿ ದೃಢಪಟ್ಟಿದೆ.

ಆರೋಪದ ಕುರಿತು ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿನಯ್ ಅವರು, ಅಪರಾಧಿಗೆ 3 ವರ್ಷಗಳ ಸಾದಾ ಸಜೆ, 25 ಸಾವಿರ ರೂ. ದಂಡ ಶಿಕ್ಷೆ ವಿಧಿಸಿದ್ದಾರೆ. ತಪ್ಪಿದ್ದಲ್ಲಿ ಮತ್ತೆ 6 ತಿಂಗಳ ಸಾದ ಸಜೆ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇದನ್ನೂ ಓದಿ: ಮಗುವಿನ ಸಮೇತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!

ಇದರ ಜತೆಗೆ ಮತ್ತೆ 75 ಸಾವಿರ ರೂ. ದಂಡ ವಿಧಿಸಿದ್ದು, ಸದರಿ ಹಣದಲ್ಲಿ ಶೇ.90 ಭಾಗವನ್ನು ಮಕ್ಕಳಿಗೆ ಕೊಡಬೇಕು. ಒಂದು ವೇಳೆ ಈ ದಂಡದ ಮೊತ್ತ ಪಾವತಿ ಮಾಡದಿದ್ದಲ್ಲಿ 6 ತಿಂಗಳ ಸಾದ ಸಜೆಯ ನೀಡಲಾಗುತ್ತದೆ ಎಂದು ಡಿ.14ರಂದು ತೀರ್ಪು ಪ್ರಕಟಿಸಿದ್ದಾರೆ.

Leave a Reply

Your email address will not be published.

Back to top button