ಮಂಡ್ಯ: ಮನೆಯ ಒಳಗೆ ಬರಬೇಡ ಎಂದಿದ್ದಕ್ಕೆ ಪತಿಯನ್ನು ಆತನ ಪತ್ನಿ (Wife) ಹಾಗೂ ಮಗ ಸೇರಿಕೊಂಡು ಹತ್ಯೆಗೈದ ಘಟನೆ ಮದ್ದೂರಿನ (Maddur) ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಉಮೇಶ್ (45) ಎಂದು ಗುರುತಿಸಲಾಗಿದೆ. ಮೃತನ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಹತ್ಯೆಗೈದ ಆರೋಪಿಗಳಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಸವಿತಾ ಪತಿಯನ್ನು ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದಳು. ಗುರುವಾರ ರಾತ್ರಿ ಪಿತೃಪಕ್ಷ ಹಬ್ಬಕ್ಕೆಂದು ಊರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಪರಶುರಾಮ ಮೂರ್ತಿ ಫೈಬರ್ ಅಲ್ಲ ಕಂಚು- ಬಿಜೆಪಿಯಿಂದ ವೀಡಿಯೋ ಬಿಡುಗಡೆ
ಪತ್ನಿ ಮನೆಗೆ ಮರಳಿ ಬಂದಾಗ ಉಮೇಶ್ ಮನೆಯ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ಸವಿತಾ ಮಗನನ್ನು ಬೆಂಗಳೂರಿನಿಂದ ಕರೆಸಿಕೊಂಡಿದ್ದಾಳೆ. ಇಬ್ಬರು ಸೇರಿಕೊಂಡು ರೀಪ್‍ನಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಉಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೇಲೂರು ಚೆನ್ನಕೇಶವ ದೇವಾಲಯ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ – ಮಹಿಳೆ ಮೇಲೆ ಹಲ್ಲೆಗೈದ ಸಿಬ್ಬಂದಿ
Web Stories