ಬೆಂಗಳೂರು: ಮದುವೆಯಾಗಿ ವರ್ಷವಾದರೂ ಶಾರೀರಿಕ ಸಂಪರ್ಕಕ್ಕೆ ನಿರಾಕರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ವಿಜಯನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮಿಳುನಾಡಿನ ವೇಲೂರು ಮೂಲದ ಬಾಲಾಜಿ ಎಂಬಾತನೊಂದಿಗೆ ಪೈಪ್‍ಲೈನ್ ನಿವಾಸಿಯಾಗಿರುವ ಮಹಿಳೆಯ ಜೊತೆ ಕಳೆದ ವರ್ಷ ಮದುವೆ ನಡೆದಿತ್ತು. ಪೋಷಕರು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಚಿನ್ನಾಭರಣ ಮತ್ತು ಬೆಳ್ಳಿಯನ್ನು ನೀಡಿ ಅದ್ಧೂರಿಯಾಗಿ ಮಗಳ ಮದುವೆಯನ್ನು ನೇರವೇರಿಸಿದ್ದರು.
Advertisement
ಇದನ್ನೂ ಓದಿ: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು
Advertisement
Advertisement
ಮದುವೆಯಾದ ನಂತರ ಫಸ್ಟ್ ನೈಟ್ ನೋ ಅಂದಿದ್ದ ಬಾಲಾಜಿ ಮತ್ಯಾವ ರಾತ್ರಿಗೂ ಒಪ್ಪಿರಲಿಲ್ಲ. ಪ್ರತಿದಿನ ಏನಾದ್ರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದಾಗಿ ಸಂಶಯಗೊಂಡ ಮಹಿಳೆ ಪತಿರಾಯನ ಪುರುಷತ್ವದ ಬಗ್ಗೆ ಪರೀಕ್ಷೆ ಮಾಡಿಸಿದಾಗ, ತನ್ನ ಪತಿಗೆ ಪುರುಷತ್ವ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
Advertisement
ಇದನ್ನೂ ಓದಿ: ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ
ಪುರುಷತ್ವ ಇಲ್ಲದ ವ್ಯಕ್ತಿಯೊಂದಿಗೆ ತನ್ನನ್ನು ಮೋಸದಿಂದ ಮದುವೆ ಮಾಡಿಸಲಾಗಿದೆ ಎಂದು ಸಂತ್ರಸ್ತೆ ಈಗ ಪತಿ ಹಾಗು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಲ್ಲಿ ತಮ್ಮ ಪೋಷಕರು ಖರ್ಚು ಮಾಡಿದ್ದ 15 ಲಕ್ಷ ರೂ. ಹಿಂದುರುಗಿಸಬೇಕೆಂಬ ಅಂಶವನ್ನು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!
ಇದನ್ನೂ ಓದಿ: ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು