ಬೆಂಗಳೂರು: ಮದುವೆ ಆಗಿ ಮೂರು ತಿಂಗಳಲ್ಲಿ ಪತ್ನಿ ಮೂರು ನಾಮ ಹಾಕಿ ಎಸ್ಕೇಪ್ ಆಗಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ (Bengaluru) ಬೆಳಕಿಗೆ ಬಂದಿದೆ.
ಹೌದು. ಫೇಸ್‍ಬುಕ್‍ನಲ್ಲಿ ಯುವಕನಿಗೆ ಯುವತಿ ಪರಿಚಯವಾಗಿದ್ದಾಳೆ. ಪರಿಚಯ ಪ್ರೀತಿಗೆ ತಿರುಗಿ ಪ್ರೀತಿ, ಪ್ರೇಮ, ಮದುವೆ ಅನ್ನೋ ಹೆಸರಿನಲ್ಲಿ ಗಂಡನಿಗೆ ಪಂಗನಾಮ ಹಾಕಿದ್ದಾಳೆ. ಮದುವೆ ಬಳಿಕ ದುಬಾರಿ ಮೌಲ್ಯದ 2 ಮೊಬೈಲ್ ಹಾಗೂ 15 ರಿಂದ 20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‍ನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪ್ರಿಯತಮೆಗಾಗಿ ಪ್ರಾಣಕೊಡಲು ಸಿದ್ಧನಿದ್ದ ಗಂಡ ಪತ್ನಿಯ ಮೋಸದ ಬಲೆಗೆ ಬಿದ್ದು ಇಂಗು ತಿಂದ ಮಂಗನಂತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಕದತಟ್ಟಿದ್ದಾನೆ.
Advertisement
Advertisement
ಏನಿದು ಪ್ರಕರಣ..?: ಸಂತೋಷ್‍ಗೆ ಕೊರೊನಾ (Corona Virus) ಸಮಯದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಈಕೆ ಪರಿಚಯವಾಗುತ್ತಾಳೆ. ಸಂತೋಷ್ ಪರಿಚಯವಾಗುತ್ತಿದ್ದಂತೆ ಕೆಲಸ ಕೊಡಿಸುವಂತೆ ಕೇಳುತ್ತಾಳೆ. ಸಂತೋಷ್ ಅಖಿಲಾಗೆ ತಾನು ಕೆಲಸ ಮಾಡುತ್ತಿದ್ದ ನೋಬ್ರೋಕರ್ ಡಾಟ್‍ಕಾಂನಲ್ಲಿ ಕೆಲಸ ಕೊಡಿಸಿದ್ದ. ಆಗ ಇಬ್ಬರು ಒಂದೇ ಬೈಕ್‍ನಲ್ಲಿ ಹೋಗೋದು ಬರುವುದು ಮಾಡುತ್ತಿದ್ದರು. ಹಾಗೆಯೇ ಇಬ್ಬರಿಗೆ ಲವ್ ಆಗುತ್ತೆ. ಈ ವೇಳೆ ದುಬಾರಿ ಬೆಲೆಯ ಐಫೋನ್‍ಗೆ ಡಿಮಾಂಡ್ ಮಾಡುತ್ತಾಳೆ. ಪ್ರಿಯತಮೆ ಅಖಿಲಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಕಾರಣ ಸಂತೋಷ್ ಒಂದು ಲಕ್ಷದ 30 ಸಾವಿರದ ಐಫೋನ್ ಕೊಡಿಸುತ್ತಾನೆ. ಐಫೋನ್ ಕೈಗೆ ಸಿಗುತ್ತಿದ್ದಂತೆಯೇ ಬ್ಯಾಂಕಾಕ್‍ಗೆ ಹೋಗಬೇಕು ಅಂತ 6 ಲಕ್ಷ ಪೀಕಿದ್ದಾಳೆ. ವಿದೇಶಿ ಪ್ರವಾಸದಿಂದ ಬಂದ ಕೂಡಲೇ ಮತ್ತೊಂದು ದುಬಾರಿ ಬೆಲೆಯ ಐಫೋನ್ ಅನ್ನು ಸಂತೋಷ್ ಗಿಫ್ಟ್ ಮಾಡುತ್ತಾನೆ.
Advertisement
Advertisement
ಇಷ್ಟೆಲ್ಲ ಅಖಿಲಾ ಪೀಕಿದ್ಮೇಲೆ ಪ್ರಿಯತಮೆಯ ಬಾವ ಅರುಣ್ ಹಾಗೂ ಅಶ್ವಿನಿ ಎಂಟ್ರಿಯಾಗಿದ್ದಾರೆ. ಪ್ರಿಯತಮೆ ಅಕ್ಕ ಅಶ್ವಿನಿ 15 ಲಕ್ಷದ ಒಡವೆ ಕೊಡಿಸಿದರೆ ಇಬ್ಬರದ್ದು ಮದುವೆ ಮಾಡಿಸೋದಾಗಿ ಡಿಮಾಂಡ್ ಮಾಡುತ್ತಾಳೆ. ನಾದಿನಿಯ ಡಿಮಾಂಡ್‍ನಂತೆ 15 ಲಕ್ಷದ ಒಡವೆ ಕೂಡ ಕೊಡಿಸಿದ್ದಾನೆ. ನಾದಿನಿ ಗಂಡ ಅರುಣ್ ಮದುವೆ ಹೆಸರಲ್ಲಿ ಐದು ಲಕ್ಷ ಸಂತೋಷ್ ಬಳಿ ವಸೂಲಿ ಮಾಡಿದ್ದಾನೆ. ಬಳಿಕ ಚಂದ್ರಲೇಔಟ್‍ನಲ್ಲಿರೋ ಮದ್ದೂರಮ್ಮ ದೇವಸ್ಥಾನದಲ್ಲಿ ಯುವಕನ ಸಂಬಂಧಿಕರ ಅನುಪಸ್ಥಿತಿಯಲ್ಲಿ ಅಕ್ಕ-ಬಾವ ನಿಂತು ಇಬ್ಬರ ಮದುವೆ ಮಾಡಿಸಿ ಮುಗಿಸುತ್ತಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ
ಮದುವೆ ಆಗಿ ಮೂರು ತಿಂಗಳಲ್ಲಿ ಗಂಡ ಸಂತೋಷ್ ಜೊತೆಗಿದ್ದ ಅಖಿಲಾ ಮೂರು ತಿಂಗಳ ಸಮಯವೂ ಜೊತೆಗೆ ಬಾಳಿಲ್ಲ. ಮದುವೆ ಆದ ಬಳಿಕ ಅಖಿಲಾಗೆ ಮದುವೆ ಆಗಿ ವಿಚ್ಛೇದನವಾಗಿರೊದು ಬೆಳಕಿಗೆ ಬರುತ್ತೆ. ಅಷ್ಟೆಲ್ಲಾ ಆದರೂ ಪತ್ನಿಯನ್ನೇ ದೇವರು ಎಂದುಕೊಂಡು ಹೋಗುತ್ತಿದ್ದ ಯುವಕನಿಗೆ ಮೋಸ ಮಾಡಿ ಗಂಡನ ಸಂಪರ್ಕ ಸಿಗದೇ ಅಖಿಲಾ ನಾಪತ್ತೆ ಆಗಿದ್ದಾಳೆ. ಇತ್ತ ಪತ್ನಿಯ ನೌಟಂಕಿ ನಾಟಕಕ್ಕೆ ಮಾರುಹೋಗಿ ಮೋಸಹೋದ ಪತ್ನಿ ಹಾಗೂ ಆಕೆಯ ಅಕ್ಕ ಬಾವನ ವಿರುದ್ಧ ಕೇಸ್ ದಾಖಲಾಗಿದೆ.
Web Stories