ಶಿವಮೊಗ್ಗ: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಊಟ-ತಿಂಡಿ ಬಿಟ್ಟು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಾಗಿನೆಲೆಯಲ್ಲಿ ನಡೆದಿದೆ.
ಚೈತ್ರಾ ಮೃತಪಟ್ಟ ಮಹಿಳೆ. ಚೈತ್ರಾಗೆ ಹಾಲಿ ಬೆಂಗಳೂರು ವಾಸಿ ರಾಜು ಜೊತೆ 3 ವರ್ಷದ ಹಿಂದೆ ಮದುವೆ ಆಗಿತ್ತು. ಬೆಂಗಳೂರು ಚಂದಾಪುರದಲ್ಲಿ ಮನೆ ಮಾಡಿದ್ದ ರಾಜು ತನ್ನ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಮತ್ತಷ್ಟು ಹಣ ತರುವಂತೆ ಪೀಡಿಸುತ್ತಿದ್ದನು.
Advertisement
Advertisement
ಚೈತ್ರಾ ತಂದೆ ದೊಡ್ಡಬಳ್ಳಾಪುರದಲ್ಲಿ ಇದ್ದು, ಪತಿ- ಪತ್ನಿ ಚೆನ್ನಾಗಿರಲಿ ಎಂದು ರಾಜಿ ಪಂಚಾಯ್ತಿ ಮಾಡಿಸಿದ್ದರು. ಆದರೆ ಇದು ಯಾವುದು ಸರಿ ಆಗದ ಕಾರಣ ಬೇಸರಗೊಂಡ ಚೈತ್ರಾ ಕಳೆದ ವಾರ ಊಟ-ತಿಂಡಿ ಬಿಟ್ಟು ಅಸ್ವಸ್ಥಗೊಂಡಿದ್ದರು.
Advertisement
ಚೈತ್ರಾರನ್ನು ಮೊದಲು ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸದ್ಯ ಚೈತ್ರಾ ಪೋಷಕರು ಪತಿ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement
ಈ ಬಗ್ಗೆ ಚಂದಾಪುರದ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.