– ಗಂಡನ ಮನೆಗೆ ಬೆಂಕಿ ಇಟ್ಟು ಮೃತ ಮಹಿಳೆ ಸಂಬಂಧಿಕರು ಆಕ್ರೋಶ
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗದ್ದೆಹೊಸೂರು ಗ್ರಾಮದಲ್ಲಿ ಪತಿ, ಪತ್ನಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
Advertisement
ಸ್ವಾತಿ (21), ಮೋಹನ್ ಮೃತ ದುರ್ದೈವಿಗಳು. ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾತಿ ಮೃತದೇಹ ಪತ್ತೆಯಾಗಿದೆ. ಮಹಿಳೆ ಸಾವಿನ ಬೆನ್ನಲ್ಲೇ ಸ್ವಾತಿ ಪತಿ ಹಾಗೂ ಆತನ ಪೋಷಕರು ಪರಾರಿಯಾಗಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮಹಿಳೆ ಸಾವಿನಿಂದ ಆಕ್ರೋಶಿತರಾದರ ಸಂಬಂಧಿಗಳು ಮನೆಗೆ ಬೆಂಕಿ ಇಟ್ಟು, ಪೀಠೋಪಕರಣ ಧ್ವಂಸ ಮಾಡಿ ದಾಂಧಲೆ ಸೃಷ್ಟಿಸಿದ್ದಾರೆ.
Advertisement
Advertisement
ಮರಣೋತ್ತರ ಪರೀಕ್ಷೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಪೊಲೀಸರು ನಾಪತ್ತೆಯಾಗಿರುವ ಗಂಡ ಹಾಗೂ ಅವನ ಮನೆಯವರಿಗಾಗಿ ಶೋಧಕ್ಕೆ ಮುಂದಾದರು.
Advertisement
ಪತ್ನಿ ಸಾವಿನ ಬೆನ್ನಲ್ಲೇ ಮೋಹನ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆರೆಯಿಂದ ಮೋಹನ್ ಶವ ಹೊರತೆಗೆಯಲಾಗಿದೆ. ಗ್ರಾಮಸ್ಥರ ಸಹಾಯದೊಂದಿಗೆ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪತಿ, ಪತ್ನಿ ಸಾವಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೃತ ಸ್ವಾತಿ ಗಂಡನ ಮನೆ, ಕೊಬ್ಬರಿ ಗೋಡೌನ್‌ಗೆ ಬೆಂಕಿ ಬಿದ್ದಿದೆ. ಗೋಡೌನ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಕೊಬ್ಬರಿ ಸುಟ್ಟು ಕರಕಲಾಗಿದೆ.
ಎರಡು ವರ್ಷದ ಹಿಂದೆಯಷ್ಟೆ ಸ್ವಾತಿ-ಮೋಹನ್ ಇಬ್ಬರೂ ಮದುವೆಯಾಗಿದ್ದರು. ಮೃತ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ತಂದೆ, ತಾಯಿ, ಪತ್ನಿ ಜೊತೆ ತೋಟದ ಮನೆಯಲ್ಲಿಯೇ ಮೋಹನ್ ವಾಸವಿದ್ದ. ಸಣ್ಣ-ಪುಟ್ಟ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ನಿನ್ನೆ ಸಂಜೆ ತವರು ಮನೆಯಿಂದ ಪತ್ನಿ ಸ್ವಾತಿಯನ್ನ ತನ್ನ ಮನೆಗೆ ಕರೆತಂದಿದ್ದ. ಮಗುವನ್ನ ಅತ್ತೆ ಮನೆಯಲ್ಲಿಯೇ ಬಿಟ್ಟು ಬಂದಿದ್ದ. ಮನೆಗೆ ಬಂದ ಕೆಲ ಹೊತ್ತಲ್ಲೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಒಂದು ಗಂಟೆ ಬಳಿಕ ಬಾವನ ಮನೆಗೆ ಮಗು ಕರೆದುಕೊಂಡು ಬಂದಿದ್ದ ಸ್ವಾತಿ ಸಹೋದರನಿಗೆ ಶಾಕ್ ಕಾದಿತ್ತು.
ಈ ವೇಳೆ ನೇಣುಬಿಗಿದ ಸ್ಥಿತಿಯಲ್ಲಿ ಸ್ವಾತಿ ಮೃತದೇಹವಿತ್ತು. ಅತ್ತ ಪತಿ ಮೋಹನ್ ಪರಾರಿಯಾಗಿದ್ದ. ಮನೆ ಬಳಿಗ ಬಂದ ಸ್ವಾತಿ ಕುಟುಂಸ್ಥರು ದಾಂಧಲೆ ನಡೆಸಿದ್ದಾರೆ. ಮನೆಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಮನೆಯ ಕಿಟಕಿ ಗಾಜು ಹೊಡೆದು ಆಕ್ರೋಶ ಹೊರಹಾಕಿದ್ದಾರೆ. ಆಕ್ರೋಶಿತ ಗುಂಪಿನಿಂದ ಕೊಬ್ಬರಿ ಶೇಖರಿಸಿದ್ದ ಮನೆಗೆ ಬೆಂಕಿ ಹಚ್ಚಲಾಗಿದೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ಕೊಬ್ಬರಿ ಸುಟ್ಟು ಕರಕಲಾಗಿದೆ. ಈ ನಡುವೆ ಬೆಳಗ್ಗೆ ಮನೆ ಸಮೀಪದ ಕೆರೆಯಲ್ಲಿಯೇ ಮೋಹನ್ ಶವ ಪತ್ತೆಯಾಗಿದೆ.