ಫ್ಲೋರಿಡಾ : ಮೊದಲ ಟಿ 20 ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತ 4 ವಿಕೆಟ್ ಗಳಿಂದ ಗೆದ್ದರೂ ರಿಷಬ್ ಪಂತ್ ಅವರು ಟೀಂ ಇಂಡಿಯಾ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಇನ್ನಿಂಗ್ಸ್ ಕೊನೆಯ ಓವರ್ ನಲ್ಲಿ ಪೊಲಾರ್ಡ್ 49 ರನ್(49 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಸ್ಟ್ರೈಕ್ ನಲ್ಲಿದ್ದರು. ನವದೀಪ್ ಸೈನಿಯ ಮೂರನೇ ಫುಲ್ ಟಾಸ್ ಎಸೆತ ನೇರವಾಗಿ ಪೊಲಾರ್ಡ್ ತೊಡೆಗೆ ಬಡಿಯಿತು. ಸೈನಿ ಎಲ್‍ಬಿಗೆ ಮನವಿ ಮಾಡಿದ್ರೂ ಅಂಪೈರ್ ತಿರಸ್ಕರಿಸಿದರು.
ಅಂಪೈರ್ ಮನವಿ ತಿರಸ್ಕರಿಸಿದ್ದನ್ನು ನೋಡಿ ಕೀಪರ್ ರಿಷಬ್ ಪಂತ್ ಕೂಡಲೇ ಕೊಹ್ಲಿಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಪಂತ್ ಮಾತನ್ನು ಕೇಳಿ ಕೊಹ್ಲಿ ಡಿಆರ್‌ಎಸ್ ಮನವಿ ಮಾಡಿದರು. ಟಿವಿ ರಿಪ್ಲೇಯಲ್ಲಿ ಬಾಲ್ ಬ್ಯಾಟಿಗೆ ತಾಗದೇ ನೇರವಾಗಿ ತೊಡೆಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಾಣುತಿತ್ತು. ಕೊನೆಗೆ ರಿವ್ಯೂ ಪರಾಮರ್ಶಿಸಿ ಅಂಪೈರ್ ಔಟ್ ತೀರ್ಪು ನೀಡಿದರು.
Change the name from DRS to PRS
PRS – Pant Review System Era Begins ???????????? #WIvsIND#wivind
— Alexander Supertramp???? (@IntoTheWildGuy) August 3, 2019
ಈ ಹಿಂದೆ ಧೋನಿ ಕೀಪರ್ ಆಗಿದ್ದಾಗಲೂ ಹಲವು ಬಾರಿ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಕೊಹ್ಲಿ ಸಲಹೆ ನೀಡುತ್ತಿದ್ದರು. ವಿಶೇಷವಾಗಿ ಎಲ್‍ಬಿ ಬಂದಾಗ ಬಾಲ್ ಬ್ಯಾಟಿಗೆ ತಾಗಿದೆಯೋ ಇಲ್ಲವೋ ಎನ್ನುವುದು ಕೀಪರ್‌ಗೆ ಸಾಧಾರಣವಾಗಿ ಕೇಳಿಸುತ್ತದೆ. ಅದರಲ್ಲೂ ಸ್ಪಿನ್ ಬೌಲಿಂಗ್ ವೇಳೆ ಕೀಪರ್ ವಿಕೆಟ್ ಹತ್ತಿರದಲ್ಲೇ ಇರುವ ಕಾರಣ ಬಾಲ್ ಬ್ಯಾಟಿಗೆ ತಾಗಿದೆಯೋ? ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕೇಳುತ್ತದೆ. ವೇಗದ ಬೌಲಿಂಗ್ ವೇಳೆ ಕೀಪರ್ ದೂರದಲ್ಲಿ ಕೀಪಿಂಗ್ ಮಾಡುವ ಕಾರಣ ಅಷ್ಟು ನಿಖರವಾಗಿ ಧ್ವನಿಯನ್ನು ಗ್ರಹಿಸಲು ಆಗುವುದಿಲ್ಲ.
Today I see some reflation of Dhoni in Pant. ???? Good call on DRS pant.. #Dhoni #INDvsWI #Pollard #Saini #Navdeep #Pant
— Ravindra ???????? (@ImRavindra29) August 3, 2019
ಪಂತ್ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದನ್ನು ನೋಡಿದ ನೆಟ್ಟಿಗರು, ಇನ್ನು ಮುಂದೆ ಡಿಆರ್‌ಎಸ್ ಅನ್ನು ಪಿಆರ್‌ಎಸ್(ಪಂತ್ ರಿವ್ಯೂ ಸಿಸ್ಟಂ) ಎಂಬುದಾಗಿ ಬದಲಾಯಿಸಬೇಕು. ಪಿಆರ್‌ಎಸ್ ಯುಗ ಆರಂಭವಾಗಿದೆ ಎಂದು ಶ್ಲಾಘಿಸಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು, ಧೋನಿಯಿಂದ ಪಂತ್ ಉತ್ತಮ ಪಾಠವನ್ನು ಕಲಿತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಪರ ನವದೀಪ್ ಸೈನಿ ವಿಶೇಷ ದಾಖಲೆ ಬರೆದರು. ಟಿ 20 ಮಾದರಿಯ ಕ್ರಿಕೆಟಿನಲ್ಲಿ ಭಾರತದ ಪರ ತಾನು ಆಡಿದ ಮೊದಲ ಪಂದ್ಯದಲ್ಲೇ ಇನ್ನಿಂಗ್ಸಿನ 20ನೇ ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಮ್ಮ ಅಂತಿಮ ಓವರಿನಲ್ಲಿ ಸೈನಿ ಯಾವುದೇ ರನ್ ಬಿಟ್ಟುಕೊಡದೇ 1 ವಿಕೆಟ್ ಕಿತ್ತಿದ್ದರು. ಅಂತಿಮವಾಗಿ 4 ಓವರ್ ನಲ್ಲಿ 1 ಮೇಡನ್ ಹಾಕಿ 17 ರನ್ ನೀಡಿ 3 ವಿಕೆಟ್ ಕಿತ್ತ ಸೈನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿಂಡೀಸ್ 9 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದರೆ ಭಾರತ 17.6 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ 4 ವಿಕೆಟ್‍ಗಳ ಜಯ ಸಾಧಿಸಿತು. ಎರಡನೇ ಟಿ 20 ಪಂದ್ಯ ಇಂದು ನಡೆಯಲಿದೆ. ಮೂರನೇ ಪಂದ್ಯ ಮಂಗಳವಾರ ನಡೆಯಲಿದೆ.