ಬೆಂಗಳೂರು: ನ್ಯೂಸ್ ಆ್ಯಂಕರ್ ಆಗಿ ಕನ್ನಡಿಗರ ಮನ ಗೆದ್ದಿದ್ದ ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ `ಪತಿ ಬೇಕು ಡಾಟ್ ಕಾಮ್’ ಸಿನಿಮಾ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಶೀತಲ್ ಶೆಟ್ಟಿ ತಮ್ಮ ಸಿನಿ ಜರ್ನಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಜೀವನಕ್ಕೆ ನಾನೇ ಸಾರಥಿ
ಖಾಸಗಿ ವಾಹಿನಿಯ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರೂ ಜೀವನದಲ್ಲಿ ಭಿನ್ನ ಅನುಭವ ಪಡೆಯಲು ಹೊಸ ಆಯ್ಕೆ ಮಾಡಬೇಕಾಯ್ತು. ಮೊದಲು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಅವಕಾಶ ಲಭಿಸಿದ್ದು ನನ್ನ ಅದೃಷ್ಟ. ನಿರೂಪಕಿಯಾಗಿ ವೃತ್ತಿ ಜೀವನದಲ್ಲಿ ತಕ್ಕಮಟ್ಟಿಗೆ ಹೆಸರು ಪಡೆದು, ಬಳಿಕ ಸಿನಿಮಾ ರಂಗಕ್ಕೆ ಪ್ರವೇಶದ ಮಾಡಿದೆ. ಆದರೆ ಎರಡು ರಂಗಗಳು ಉತ್ತಮವಾಗಿದ್ದು, ಜನರು ತಮ್ಮನ್ನು ಸ್ವೀಕರಿಸಿ ನಡೆದರೆ ಮಾತ್ರ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ. ನನ್ನ ಜೀವನಕ್ಕೆ ನಾನೇ ಸಾರಥಿಯಾಗಿದ್ದು, ನನ್ನ ವೃತ್ತಿ ಜೀವನದ ಬದಲಾವಣೆಯಲ್ಲೂ ನನ್ನ ನಿರ್ಧಾರ ಅಂತಿಮವಾಗಿತ್ತು. ಇದಕ್ಕೆ ಕುಟುಂಬ ಬೆಂಬಲವೂ ಇದೆ. ಸದ್ಯ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದ್ರು.
Advertisement
Advertisement
Advertisement
ಟೈಟಲ್ ನಂದೇ ಐಡಿಯಾ
ಪತಿಬೇಕು ಡಾಟ್ ಕಾಮ್ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ. ಸಿನಿಮಾ ಕುರಿತು ಯೋಚನೆ ಮಾಡುವ ವೇಳೆ ಕೆಲ ಟೈಟಲ್‍ಗಳು ಹೊಳೆಯಿತು. ಇದನ್ನು ನಿರ್ದೇಶಕರಿಗೆ ತಿಳಿಸಿದೆ. ಅವ್ರು ಕೇಳಿದ ಕೂಡಲೇ ಒಪ್ಪಿಕೊಂಡ್ರು. ಉಳಿದಂತೆ ಎರಡು ಮೂರು ಸಿನಿಮಾಗಳಿಗೆ ಟೈಟಲ್ ನೀಡಿದ್ದು ಮುಂದಿನ ದಿನಗಳಲ್ಲಿ ಟೈಟಲ್ ಶೀತಲ್ ಅಂತಾನೇ ಕರೆಯಬಹುದು ಎಂದು ಹೇಳಿ ನಸುನಕ್ಕರು.
Advertisement
ಸಿನಿಮಾ ಕ್ಷೇತ್ರಕ್ಕೆ ಪ್ರವೇಶದ ಮಾಡಿದ ಬಳಿಕ ಕೆಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ ಇಷ್ಟು ಬೇಗ ಇಂತಹ ಮಹಿಳಾ ಪ್ರಧಾನ ಚಿತ್ರದಲ್ಲಿ ಅವಕಾಶ ಲಭಿಸುತ್ತದೆ ಎಂದುಕೊಂಡಿರಲಿಲ್ಲ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ಪತಿ ಬೇಕು ಡಾಟ್ ಕಾಮ್ ಸಿನಿಮಾ ಟೈಟಲ್ ಕೇಳುಗರಿಗೆ ನಗು ತಂದರೂ ಸಿನಿಮಾದಲ್ಲಿ ಒಂದು ಉತ್ತಮ ಸಂದೇಶ ಇದೆ. ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬ ಅಂಶ ಪ್ರಮುಖವಾದದ್ದು, ಇದರ ಹಿನ್ನೆಲೆಯಲ್ಲಿ ಕಥೆ ಸಿದ್ಧವಾಗಿದ್ದು, ಮದುವೆಯೇ ಅಂತಿಮ ಎಂಬ ಭಾವನೆ ಹೊಂದಿರುವ ಯುವಕ ಅಥವಾ ಯುವತಿಯರು ನೋಡಲೇಬೇಕು ಎಂದರು.
ಚಿತ್ರದ ‘ಯಾಕಪ್ಪ ದೇವ್ರೇ’ ಹಾಡು ಹಾಗೂ ನನ್ನ ಡೈಲಾಗ್ ಜನರಿಗಿಷ್ಟವಾಗಿ ಎಲ್ಲೆಡೆ ಹರಿದಾಡುತ್ತಿದೆ. ಚಿತ್ರದ ಈ ಅಂಶಗಳು ಭರಪೂರ ಪ್ರಚಾರ ನೀಡುತ್ತಿದ್ದು, ನಾನು ಸಹ ಸಿನಿಮಾ ನೋಡುವ ವೇಳೆ ಎಷ್ಟು ಮನರಂಜನೆಯಿದೆ? ಖುಷಿ ಕೊಡುತ್ತಾ ಎಂದು ನೋಡುತ್ತೇನೆ. ನಮ್ಮ ಸಿನಿಮಾದಲ್ಲೂ ಯಾವುದೇ ಬೋರ್ ಹೊಡೆಸುವ ಅಂಶಗಳಲಿಲ್ಲ. ಚಿತ್ರ ಕಥೆಯೇ ಅದ್ಭುತವಾಗಿದ್ದು, ಧೈರ್ಯದಿಂದ ಎಲ್ಲ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುತ್ತಿರುವ ಪ್ರತಿ ಹೆಣ್ಣು ಮಕ್ಕಳು ಸಿನಿಮಾದಲ್ಲಿದ್ದಾರೆ. ಅದ್ದರಿಂದ ಸಿನಿಮಾ ಬಂದು ನೋಡಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದು ಮನವಿ ಮಾಡಿದ್ರು.
ಬೆಳಗಾಗುವ ಮುನ್ನ ಟಿಫನ್ ಬಾಕ್ಸ್ ಕಟ್ಟಿ ಗಾರ್ಮೆಂಟ್ಸ್ ಹೊರಡುವ, ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು, ಮಾತು ಆಡದೇ ಸಮಾಜದಲ್ಲಿ ನಗುತ್ತಲೇ ಸಾಗುವ ಎಲ್ಲಾ ಹೆಣ್ಣುಮಕ್ಕಳಿಗೆ ಈ ಸಿನಿಮಾ ಖುಷಿ ನೀಡುತ್ತದೆ. ಖಂಡಿತ ನಮ್ಮ ಸಿನಿಮಾದಲ್ಲಿ ಸಿನಿ ವೀಕ್ಷಕರು ಸ್ವೀಕರಿಸುವ ನಿರೀಕ್ಷೆ ಇದೆ. ಕಾಮಿಡಿ ಜೊತೆ ಕಮರ್ಷಿಲ್ ಅಂಶಗಳು ಮೂಡಿಬಂದಿದೆ. ಇದಕ್ಕೆ ನನ್ನ ಡೈಲಾಗ್ ಸಾಥ್ ನೀಡಿದ್ದು, ಆದ್ರೆ ಸಿನಿಮಾದಲ್ಲಿ ಯಾವುದೇ ಡೈಲಾಗ್ ಡಬಲ್ ಮಿನಿಂಗ್ ಅರ್ಥ ನೀಡುವುದಿಲ್ಲ. ಕುಟುಂದ ಎಲ್ಲಾ ಸದಸ್ಯರು ಕುಳಿತು ನೋಡುವ ಸಿನಿಮಾವಾಗಿದೆ. ಮುಂದೇ ಅಭಿಜ್ಞಾನ, ಚೇಸ್, ಗೂಢಾಚಾರಿ ಧರಮಣಿ, ಕಥಾ ಸಂಗಮ ಸೇರಿದಂತೆ ಸಾಲು ಸಾಲು ಸಿನಿಮಾಗಳು ಕೈಲಿದೆ. ಆದ್ರೆ ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಿದೆ ಎಂದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv