ವಿಜಯಪುರ: ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ 216 ರೈತಪರ ಯೋಜನೆಗಳ ಮೂಲಕ 1 ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ಜಾರಿಗೆ ತಂದಿದೆ. ಆದರೆ ರಾಹುಲ್ ಬಾಬಾ ನಾಲ್ಕು ವರ್ಷಗಳಲ್ಲಿ ಮೋದಿ ಅವರ ಕೊಡುಗೆ ಏನು ಎಂದು ಕೇಳ್ತಾರೆ, ನಾವು ರಾಹುಲ್ ಬಾಬಾಗೆ ಏಕೆ ಹೇಳ್ಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದ ತಿಕೋಟಾದಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿ ಅಲೆ ನಿರ್ಮಾಣವಾಗಿತ್ತು. ಈಗ ಅದು ಸುನಾಮಿಯಾಗಿದೆ. ಇದು ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೆಸೆಯಲಿದೆ. ರಾಹುಲ್ ಬಾಬಾ ಅವರು 1 ರಿಂದ ಅಂಕಿ ಎಣಿಸಿ ದೇಶದಲ್ಲಿ ಎಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಎಲ್ಲೆಡೆ ನಿದ್ರೆ ಮಾಡುವ ಕೆಲಸ ಮಾಡುತ್ತಾರೆ. ರಾಜ್ಯದ ಮುಖ್ಯ ಮಂತ್ರಿಗಳು ನಿದ್ರೆ ಮಾಡಿದರೆ ಎಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ರಾಹುಲ್ ಬಾಬಾರನ್ನು ಕೇಳಿ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.
Advertisement
Advertisement
2014 ನಂತರ 15 ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಿಮಗೆ ಕಮಿಟೆಡ್ ಸರ್ಕಾರ ಬೇಕಾ, ಕಮಿಷನ್ ಸರ್ಕಾರ ಬೇಕಾ. ಕಮಿಟೆಡ್ ಸರ್ಕಾರ ಬೇಕಿದ್ದರೆ ಬಿಜೆಪಿಯನ್ನು ಬೆಂಬಲಿಸಿ. ರಾಜ್ಯದಲ್ಲಿ ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಸರ್ಕಾರ ಅವಧಿಯಲ್ಲಿ 24 ಅಧಿಕಾರಿಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
Advertisement
ರಾಹುಲ್ ಬಾಬಾ ರೈತರ ಬಗ್ಗೆ ಟಿವಿಯಲ್ಲಿ ಕಾಳಜಿ ತೋರಿ ಮೋದಿ ಸರ್ಕಾರ ರೈತರಿಗೆ 4 ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಆದರೆ ಕೇಂದ್ರ ಸರ್ಕಾರ 37 ಸಾವಿರ ಕೋಟಿ ರೂ. ಮುದ್ರಾ ಯೋಜನೆ ಅಡಿ ಬ್ಯಾಂಕ್‍ನಿಂದ ರೈತರಿಗೆ ನೀಡಿದೆ ಅಂತಾ ತಿಳಿಸಿದ್ರು.