ಬೆಂಗಳೂರು: ಕೇಂದ್ರದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದ ಸಂಸದರು ಮಹದಾಯಿ ವಿಚಾರದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ.
ಹೌದು, ಸಾಧಾರಣವಾಗಿ ಎರಡು ರಾಜ್ಯಗಳ ನಡುವೆ ವಿವಾದಗಳು ಜೋರಾದಾಗ ಆ ವಿಚಾರ ಸಂಸತ್ ನಲ್ಲಿ ಪ್ರತಿಧ್ವನಿಸುವುದು ಸಾಮಾನ್ಯ. ಆದರೆ ಮಹದಾಯಿ ವಿಚಾರದ ಬಗ್ಗೆ ರಾಜ್ಯದಲ್ಲಿ ದೊಡ್ಡದಾಗಿ ಮಾತನಾಡುವ ಸಂಸದರು ಅಧಿವೇಶನದಲ್ಲಿ ಮೌನ ವ್ರತಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ
Advertisement
ಡಿಸೆಂಬರ್ 15 ರಿಂದ ಜನವರಿ 5ರ ವರೆಗೆ ಸಂಸತ್ ಕಲಾಪ ನಡೆಯಲಿದೆ. ಆದರೆ ಇಬ್ಬರು ಲೋಕಸಭಾ ಸಂಸದರಿರುವ ಗೋವಾದ ಮುಂದೆ 28 ಮಂದಿ ಸಂಸದರಿರುವ ಕರ್ನಾಟಕ ಫುಲ್ ಸೈಲೆಂಟ್ ಆಗಿದ್ದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
Advertisement
ರಾಜ್ಯದ ಎಲ್ಲ ಸಂಸದರು ಒಗ್ಗಟಾಗಿ ಸಮನ್ವಯ ಮನಸ್ಸಿನಿಂದ ಪ್ರಧಾನಿ ಮೇಲೆ ಒತ್ತಡ ಹಾಕಲು ಸಾಧ್ಯವಿದೆ. ಆದರೆ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದರೆ ಆಯಾ ಪಕ್ಷಕ್ಕೆ ತಿರುಗುಬಾಣವಾಗುವ ಸಾಧ್ಯತೆ ಇರುವ ಕಾರಣ ಬಿಜೆಪಿ, ಕಾಂಗ್ರೆಸ್ ಸದಸ್ಯರು ಮಹದಾಯಿ ಬಗ್ಗೆ ಚಕಾರವೇ ಎತ್ತುತ್ತಿಲ್ಲ.
Advertisement
ರಾಜದ ಹಿತಾಸಕ್ತಿ ಮರೆತು ಅಧಿವೇಶನದಲ್ಲಿ ನೀವೂ ಮಾಡುತ್ತಿರುವುದು ಏನು? ಇನ್ನು ಉಳಿದಿರುವ ಅಧಿವೇಶನಲ್ಲಾದರೂ ಪಕ್ಷ ಬೇಧ ಮರೆತು ಚರ್ಚೆ ಮಾಡ್ತಿರಾ ಮಾನ್ಯ ಸಂಸದರೇ ಎಂದು ಜನರು ಈಗ ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಈ ವಿಚಾರದವಾಗಿ ಪಬ್ಲಿಕ್ ಟಿವಿಗೆ ಕರೆ ಮಾಡಿದ ಹುಬ್ಬಳ್ಳಿಯ ಜಯಪ್ರಕಾಶ್, ಪ್ರಧಾನಿ ಮೋದಿ ಅವರಿಗೆ ಶೌಚಾಲಯ ಇಲ್ಲ ಅಥವಾ ಇನ್ಯಾವುದೋ ಸಮಸ್ಯೆಯ ಬಗ್ಗೆ ಪತ್ರ ಬರೆದರೆ ಕೂಡಲೇ ಸ್ಪಂದನೆ ಮಾಡಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ಕೊಡುತ್ತಾರೆ. ಆದರೆ ಮಹದಾಯಿಗಾಗಿ ರೈತರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರೂ ಯಾಕೆ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.