ನಾಳೆ ನಾಡಿನಾದ್ಯಂತ ಸ್ವರ್ಣ ಗೌರಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶ ಹಬ್ಬಕ್ಕೂ ಮುನ್ನ ಗೌರಿಯನ್ನು ಯಾಕೆ ಪೂಜಿಸಬೇಕು? ಇದರ ಐತಿಹಾಸಿಕ ಕಥೆಯೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು.
ಭಾದ್ರಪದ ತೃತಿಯಾದಂದು ಗೌರಿಯನ್ನು ಆಚರಿಸಬೇಕು. ಅಂದರೆ ಆಗಸ್ಟ್ 30(ನಾಳೆ) ಬೆಳಗ್ಗೆ ಪ್ರಾತಃಕಾಲದಲ್ಲಿ ಗೌರಿಯನ್ನು ಆಹ್ವಾನಿಸಿ ಪೂಜಿಸಬೇಕು. ನಂತರ ಹಬ್ಬದುಟ ಮಾಡಲಾಗುತ್ತದೆ. ಚತುರ್ಥಿಯ ದಿನ ಕೂಡ ಗೌರಿಯನ್ನು ಪೂಜಿಸಿಯೇ ವಿನಾಯಕನನ್ನು ಪೂಜೆ ಮಾಡಬೇಕು. ಹೀಗೆ ತೃತೀಯಾ ಹಗೂ ಚೌತಿ ಹೀಗೆ 2 ದಿನವೂ ಪೂಜೆಯನ್ನು ಮಾಡುವುದು ಪ್ರತೀತಿ.
Advertisement
Advertisement
ಹಿನ್ನೆಲೆ ಏನು..?: ಗೌರಿ ಆಚರಣೆ ಎಂಬುದು ಭಾರತೀಯ ಸಂಸ್ಕೃತಿ ಹಿಂದೂ ಸನಾತನ ಧರ್ಮದಲ್ಲಿ ಸಾಕಷ್ಟು ವಿಶೇಷತೆಗಳಿವೆ. ನಾವು ಆಚರಿಸುವ ಪ್ರತೀ ಹಬ್ಬಗಳಲ್ಲಿಯೂ ಒಂದೊಂದು ವಿಶೇಷತೆ ಇದೆ. ಇದನ್ನೂ ಓದಿ: ಎಷ್ಟೊಂದು ರುಚಿಕರ ಕಡಲೆ ಹಿಟ್ಟಿನ ಲಡ್ಡು – ನೀವೂ ಟ್ರೈ ಮಾಡಿ
Advertisement
ಒಬ್ಬ ಹೆಣ್ಣು ಮಗಳು ತವರಿಗೆ ಬರುವ ಹಬ್ಬವೇ ಗೌರಿ ಹಬ್ಬ. ಹೆಣ್ಣು ತನ್ನ ತವರಿಗೆ ಬಂದಾಗ ಅವಳನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳುವುದು. ಮನೆ ಮಕ್ಕಳೆಲ್ಲ ಒಟ್ಟಿಗೆ ಊಟ ಮಾಡಿ ಸಂಭ್ರಮಿಸುವುದಾಗಿದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಮಗಳನ್ನು ಮದುವೆ ಮಾಡಿಕೊಟ್ಟರೆ ನಂತರ ಅವಳು ತವರಿಗೆ ಬರುವುದು ಮುಂದಿನ ಗೌರಿ ಹಬ್ಬಕ್ಕೆ ಆಗಿತ್ತು.
Advertisement
ಇತಿಹಾಸ ನೋಡುವುದಾದರೆ ಕೈಲಾಸದಲ್ಲಿರುವ ಭಗವಂತ ಶಿವನ ತಾಯಿ ಗೌರಿ ಇಬ್ಬರು ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುತ್ತಿದ್ದಾಗ ಭಗವಂತ, ನಿನ್ನ ಸಾನಿಧ್ಯದಲ್ಲಿ ನನಗೆ ಬಹಳ ತೃಪ್ತಿ ಇದೆ. ನನಗೆ ಬೇಕಾದ ಎಲ್ಲವನ್ನೂ ದಯಪಾಲಿಸಿದ್ದಿ. ಜೊತೆಗೆ ಒಂದು ಸಾಮ್ರಾಜ್ಯವನ್ನೇ ನನಗಾಗಿ ಕಟ್ಟಿದ್ದೀಯಾ. ಇಷ್ಟೆಲ್ಲಾ ಇದ್ದರೂ ಒಮ್ಮೆ ನನ್ನ ತವರಿನ ಜನರನ್ನು ನೋಡಬೇಕು ಎಂಬ ಆಸೆ ಉಂಟಾಗಿದೆ ಎಂಬ ಅಭಿಪ್ರಾಯ ಮಂಡಿಸಿದ್ದಾಳೆ.
ಆಗ ಶಿವ, ನಿನಗೆ ಇಲ್ಲಿ ಏನು ಕಡಿಮೆ ಆಗಿದೆ. ಇಲ್ಲಿ ಎಲ್ಲವೂ ನಿನ್ನದೇ ರಾಜ್ಯ. ನಿನ್ನ ಮಾತಿನಂತೆಯೇ ನಡೆಯುತ್ತಿದೆ. ಇಷ್ಟೆಲ್ಲಾ ಇರುವಾಗ ನೀನು ಇಲ್ಲಿಂದ ತವರಿಗೆ ಯಾಕೆ ಹೋಗಬೇಕು. ಬೇಕಿದ್ರೆ ನಿನ್ನ ತವರು ಮನೆಯವರನ್ನೇ ಇಲ್ಲಿಗೆ ಕರೆಸುತ್ತೇನೆ ಎಂದು ಹೇಳುತ್ತಾನೆ. ಇದನ್ನೂ ಓದಿ: ಆಪಲ್‌ನಿಂದಲೂ ಮಾಡ್ಬೋದು ಹಲ್ವಾ
ಆಗ ಗೌರಿ, ಹಾಗಲ್ಲ ನಾನು ನನ್ನ ತವರಿಗೆ ತೆರಳಿ ಅಲ್ಲಿ ನನ್ನ ಬಾಲ್ಯ ದಿನಗಳನ್ನು ತವರಿನಲ್ಲಿರುವವರ ಜೊತೆ ಹಂಚಿಕೊಳ್ಳಬೇಕು. ಆಗ ನನಗೆ ಸಂತೋಷ ಎಂದು ಹೇಳುತ್ತಾಳೆ. ಆಗ ಶಿವ, ಎಷ್ಟು ದಿನಕ್ಕೆ ತವರಿಗೆ ಹೋಗ್ತಿಯಾ.. ಒಂದು ವೇಳೆ ಹೀಗೆ ಹೋದವಳು ಬರುವುದು ತಡವಾದರೆ ಎಂದು ಪ್ರಶ್ನಿಸುತ್ತಾನೆ. ಈ ವೇಳೆ ಗೌರಿ, ಇಲ್ಲ ಭಾದ್ರಪದ ಮಾಸದಲ್ಲಿ ಇಂತಹ ಒಂದು ದಿನ ನಾನು ನನ್ನ ತವರಿಗೆ ಹೋಗಿ ಬರುವುದಾಗಿ ಶಿವನ ಮುಂದೆ ಬೇಡಿಕೆ ಇಡುತ್ತಾಳೆ. ಹೀಗೆ ತಾಯಿ ತವರಿಗೆ ಬರುತ್ತಾಳೆ. ಇದೇ ದಿನವನ್ನು ನಾವಿಂದು ಸ್ವರ್ಣ ಗೌರಿ ಹಬ್ಬ ಎಂದು ಆಚರಿಸುತ್ತೇವೆ.