ಎಲ್ಲೇ ಹೋದರೂ ಕೈಗೆ ಸಿಗುವ ಹಣ್ಣುಗಳಲ್ಲೊಂದು ಆಪಲ್. ಫ್ರೂಟ್ ಸಲಾಡ್ ಮಾಡಲು ಹೆಚ್ಚಾಗಿ ಆಪಲ್‌ಗಳನ್ನು ಬಳಸಿರುತ್ತೇವೆ. ಆದರೆ ಆಪಲ್‌ನಿಂದಲೂ ಹಲ್ವಾ ಮಾಡಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಎಷ್ಟು ಕುತೂಹಲಕಾರಿ ರೆಸಿಪಿಯೋ ಅಷ್ಟೇ ಟೇಸ್ಟಿಯಾಗಿರುವ ಆಪಲ್ ಹಲ್ವಾವನ್ನು ನೀವು ಕೂಡಾ ಒಮ್ಮೆ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
* ಆಪಲ್ – 4
* ತುಪ್ಪ – 2 ಟೀಸ್ಪೂನ್
* ಗೋಡಂಬಿ – 8
* ಸಕ್ಕರೆ – 4 ಕಪ್
* ಕೇಸರಿ – 4 ಟೀಸ್ಪೂನ್
* ವೆನಿಲ್ಲಾ ಸಾರ – 1 ಟೀಸ್ಪೂನ್
* ದಾಲ್ಚಿನಿ ಪೌಡರ್ – 4 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
Advertisement
* ಮೊದಲಿಗೆ ಆಪಲ್‌ಗಳನ್ನು ಕತ್ತರಿಸಿಕೊಂಡು ನಂತರ ತುರಿಯಿರಿ. ಬೇಕೆಂದರೆ ಮೆದುವಾಗಿ ಪೇಸ್ಟ್ನಂತೆ ರುಬ್ಬಿಕೊಳ್ಳಬಹುದು.
* ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಹುರಿದುಕೊಳ್ಳಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಗೋಡಂಬಿಯನ್ನು ಮಾತ್ರವೇ ತೆಗೆದು ಪಕ್ಕಕ್ಕೆ ಇರಿಸಿ.
* ಕಡಾಯಿಯಲ್ಲಿ ಉಳಿದ ತುಪ್ಪಕ್ಕೆ ತುರಿದ ಆಪಲ್‌ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ರಸ ಬಿಡುಗಡೆಯಾಗುವವರೆಗೂ ಕೈಯಾಡಿಸುತ್ತಿರಿ.
* ಆಪಲ್ ಮೃದುವಾದ ಬಳಿಕ ಅದಕ್ಕೆ ಸಕ್ಕರೆ, ಕೇಸರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೈ ಆಡಿಸಿ ಸಕ್ಕರೆಯನ್ನು ಕರಗಿಸಿ.
* ಮಿಶ್ರಣ ದಪ್ಪವಾದ ಬಳಿಕ ವೆನಿಲ್ಲಾ ಸಾರ, ದಾಲ್ಚಿನಿ ಪೌಡರ್ ಹಾಗೂ ಹುರಿದ ಗೋಡಂಬಿ ಸೇರಿಸಿ ಬೇಯಿಸಿ.
* ಆಪಲ್ ಹಲ್ವಾ ಇದೀಗ ತಯಾರಾಗಿದ್ದು, ಗೋಡಂಬಿಯಿಂದ ಅಲಂಕರಿಸಿ ಸವಿಯಿರಿ.