ಉಡುಪಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯಿಂದ ಭಾರತ-ಅಮೆರಿಕ ಸಂಬಂಧ ಗಟ್ಟಿಯಾಗಿದೆ. ಅಭಿವೃದ್ಧಿಗೆ ಈ ಭೇಟಿ ಪೂರಕ ಮತ್ತು ಮಹತ್ವದ್ದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಭಾರತೀಯ ಸಂಸ್ಕೃತಿ ಮೋದಿಯಿಂದ ಜಗತ್ತಿಗೆ ಪರಿಚಯ ಆಗುತ್ತಿದೆ. ಟ್ರಂಪ್ ಪ್ರವಾಸ ಗುಜರಾತ್‍ನಿಂದ ಆರಂಭವಾಗುತ್ತಿದ್ದು, ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿ ಆಗಲಿದೆ ಎಂದರು.
Advertisement
Advertisement
ಭಾರತಕ್ಕೆ ಎಲ್ಲಾ ನೆರವು ಅಮೆರಿಕದಿಂದ ಸಿಗಲಿದೆ. ವಿಪಕ್ಷಗಳು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದೆ. ಬಿಜೆಪಿಯನ್ನು ಟೀಕೆ ಮಾಡುವುದು ಕಾಂಗ್ರೆಸ್ ಜಾಯಮಾನ. ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ. ರಾಷ್ಟ್ರದ ಪರಿಕಲ್ಪನೆ ಕಾಂಗ್ರೆಸ್ಸಿಗೆ ಇಲ್ಲ. ಕಾಂಗ್ರೆಸ್ ಆಡಳಿತ ಇರುವಾಗ ಒಬಾಮಾ ಬಂದಿಲ್ವಾ? ಒಬಾಮಾ ಲೋಕಸಭೆಯಲ್ಲಿ ಭಾಷಣ ಮಾಡಿದ್ದಾಗ ಕಾಂಗ್ರೆಸ್ ಆವಾಗ ಕಣ್ಮುಚ್ಚಿ ಕೂತಿದ್ಯಾಕೆ ಎಂದು ಪ್ರಶ್ನೆ ಮಾಡಿದರು.