ಹಾಸನ: ರೈಲಿಗೆ (Train) ಇಟ್ಟಿದ್ದ ಟಿಪ್ಪು (Tippu Express) ಹೆಸರನ್ನು ಏಕೆ ತೆಗೆಯಬೇಕಿತ್ತು, ಟಿಪ್ಪು ಕೂಡ ಈ ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಬೇರೆ ರೈಲುಗಳಿಗೆ ಒಡೆಯರ್ ( Wodeyar Express) ಹೆಸರಿಡಲಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D. Revanna) ಹೇಳಿದ್ದಾರೆ.
ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎರಡು ಕೆಲಸ ಮಾಡುತ್ತಿದೆ. ಒಂದು ದುಡ್ಡು ಹೊಡೆಯೋದು, ಇನ್ನೊಂದು ಒಂದು ಸಮಾಜವನ್ನು ಗುರಿಯಾಗಿಟ್ಟಿಕೊಂಡು ಕೆಲಸ ಮಾಡುತ್ತಿದೆ. ಇಷ್ಟು ವರ್ಷ ಟಿಪ್ಪು ಹೆಸರಿತ್ತಲ್ಲ, ಯಾರಾದರೂ ಹೆಸರು ಬದಲಿಸಬೇಡಿ ಅಂತ ಹಿಡಿದುಕೊಂಡಿದ್ವಾ? ಇದೆಲ್ಲ ಚುನಾವಣೆ ಗಿಮಿಕ್ ಅಷ್ಟೇ, ಯಾರೋ ಹಿಂದೆ ಪುಣ್ಯತ್ಮರು ಟಿಪ್ಪು ಹೆಸರು ಇಟ್ಟಿದ್ದರು. ಒಡೆಯರ್ ಅವರ ಹೆಸರು ಇಡಲಿ, ಬೇಡ ಅನ್ನಲ್ಲ, ಈ ರಾಜ್ಯಕ್ಕೆ ಅವರದ್ದೇ ಆದ ಕೊಡುಗೆ ಇದೆ, ಮೈಸೂರಿಗೆ ಎಷ್ಟು ಟ್ರೈನ್ ಓಡಾಡುತ್ತವೆ, ಬೇರೆ ಯಾವುದಾದರೂ ಎರಡು, ಮೂರು ರೈಲಿಗೆ ಒಡೆಯರ್ ಹೆಸರು ಇಡಲಿ ಎಂದಿದ್ದಾರೆ.
ಮೂರು ವರ್ಷದ ಹಿಂದೆನೇ ಒಡೆಯರ್ ಹೆಸರು ಇಡಬೇಕಿತ್ತು, ಏನು ಮಾಡುತ್ತಿದ್ದರು. ಈಗ ಕುವೆಂಪು, ಒಡೆಯರ್, ಎಸ್‍ಸಿ, ಎಸ್‍ಟಿ ಸಮಾಜ ನೆನಪಾಗಿದೆ. ದೇವೇಗೌಡರು (H.D.Devegowda) ಒಳಮೀಸಲಾತಿ ಕೊಡಬೇಕೆಂದು ಎಷ್ಟು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಗೆ (BJP) ಸಾಬ್ರು ಓಟು ಹಾಕಲ್ಲ ಎಂದು ಗುರಿಯಾಗಿಟ್ಟು ಕೊಂಡಿದ್ದಾರೆ. ಯಾವ್ಯಾವ ಸಾಬ್ರಿಗೆ ಏನೇನು ತೊಂದರೆ ಕೊಡಬೇಕು ಎಲ್ಲಾ ಕೊಡುತ್ತಿದ್ದಾರೆ. ವೋಟಿಗೋಸ್ಕರ ಈ ಕೆಳಮಟ್ಟದ, ದ್ವೇಷದ ರಾಜಕಾರಣ ಮಾಡಬಾರದು. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಐವತ್ತು ವರ್ಷದಲ್ಲಿ ನೋಡಿರಲಿಲ್ಲ. ಯಾವ ಮುಖ ಇಟ್ಟುಕೊಂಡು ವೋಟು ಕೇಳುತ್ತಾರೆ, ಯಾವ ನೈತಿಕತೆ ಇವರಿಗಿದೆ, ರಾಜ್ಯ, ಜಿಲ್ಲೆಗಳಲ್ಲಿ ಬಿಜೆಪಿಯವರು ಲೂಟಿ ಮಾಡಿದ್ದಾರೆ. ಒಂದಲ್ಲ ಒಂದು ದಿನ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ, ನಾವ್ಯಾರು ಕೊಡಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ (Yediyurappa) ನಂಬರ್ ಒನ್ ಡಿನೋಟಿಫಿಕೇಷನ್ ಮುಖ್ಯಮಂತ್ರಿ, ಇಂತಹ ಭ್ರಷ್ಟ ಸರ್ಕಾರವನ್ನು ನಮ್ಮ ಜೀವಮಾನದಲ್ಲಿ ನೋಡಿರಲಿಲ್ಲ. ಕುಮಾರಸ್ವಾಮಿ (H.D.Kumarswamy) ಜೀವನದಲ್ಲಿ ಒಂದು ತಪ್ಪು ಮಾಡಿ ಇವತ್ತು ನಾವು ಅನುಭವಿಸುತ್ತಿದ್ದೇವೆ. ಬಿಜೆಪಿಯವರು ಶಾಶ್ವತವಾಗಿ ಅವರ ಮನೆಯಲ್ಲಿ ಕುಮಾರಸ್ವಾಮಿ ಫೋಟೋ ಇಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದು ಆ ದೇವರಿಗೆ ಕೈಮುಗಿಯುವ ಬದಲು ಕುಮಾರಸ್ವಾಮಿಗೆ ಕೈಮುಗಿಬೇಕು, ಯಡಿಯೂರಪ್ಪ ಈ ಜಿಲ್ಲೆಗೆ ಏನೇನು ಅನ್ಯಾಯ ಮಾಡಿದ್ದಾರೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಶಾಸಕ ಪ್ರೀತಂಗೌಡ (Preetham Gowda) ಹಾಕಿರುವ ಸವಾಲಿಗೆ ಪ್ರತಿ ಸವಾಲು ಹಾಕಿದ ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಬೇಕು, ಆ ಸವಾಲನ್ನು ನಮ್ಮ ಪಕ್ಷ ಸ್ವೀಕಾರ ಮಾಡಿದ್ದು, ಯಾರನ್ನು ನಿಲ್ಲಿಸಬೇಕೆಂದು ಪಕ್ಷ ತೀರ್ಮಾನಿಸಲಿದೆ. ಹಾಸನ ಜಿಲ್ಲೆಯಲ್ಲಿ ಇಪ್ಪತ್ತೈದು ವರ್ಷ ಎಂಎಲ್‍ಎ ಆಗಿ ಕೆಲಸ ಮಾಡಿದ್ದು, ಅವರ ಸವಾಲು ಸ್ವೀಕರಿಸುತ್ತೇನೆ. ನಾನು ನಿಂತರೆ ಐವತ್ತು ಸಾವಿರ ಮತಗಳಿಂದ ಗೆಲ್ಲುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕಲ್ಯಾಣ ಪರ್ವ ಕಾರ್ಯಕ್ರಮ ಇಬ್ಭಾಗ – ಬಸವ ಭಕ್ತರು ಅಸಮಾಧಾನ
ಒಬ್ಬ ಸಾಮಾನ್ಯನನ್ನು ನಿಲ್ಲಿಸುತ್ತೇನೆ, ಅವನು ಗೆದ್ದರೆ ಅವಾಗ ಏನುಮಾಡುತ್ತಾರೆ? ಲೀಡರ್ ರೇವಣ್ಣಂಗೆ ಐವತ್ತು ಸಾವಿರ ಅಂದರೆ, ಸಾಮಾನ್ಯನಿಗೆ ಎಪ್ಪತ್ತೈದು ಸಾವಿರ ಲೀಡ್ ಇಡುತ್ತಾರಾ, ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇವೆ, ಆಗ ಎಪ್ಪತ್ತೈದು ಸಾವಿರ ಅಂತರದಲ್ಲಿ ಅವರು ಗೆಲ್ಲಬೇಕು, ಎಪ್ಪತ್ತೈದು ಸಾವಿರ ಬೇಡ, ಐವತ್ತೈದು ಸಾವಿರದಿಂದ ಗೆಲ್ಲಲ್ಲಿ ಎಂದು ಸವಾಲೊಡ್ಡಿದ್ದಾರೆ.
&
nbsp;ಈ ಜಿಲ್ಲೆಗೆ ಬಿಜೆಪಿ ಏನೇನು ಅನ್ಯಾಯ ಮಾಡಿದೆ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಅನೌನ್ಸ್ ಮಾಡಿದ್ದಾರಾ, ಎರಡು ರಾಷ್ಟ್ರೀಯ ಪಕ್ಷಗಳೇ ಒದ್ದಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಅನೌನ್ಸ್ ಮಾಡಲಿ, ಅದನ್ನು ನೋಡಿಕೊಂಡು ನಮ್ಮ ಸಣ್ಣ ಪಕ್ಷದ ಅಭ್ಯರ್ಥಿಗಳನ್ನು ಅನೌನ್ಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು, ಸಾವರ್ಕರ್ ಸ್ಟೈಫಂಡ್ ಪಡೆಯುತ್ತಿದ್ದರು: ರಾಗಾ