
ತುಮಕೂರು: ಇತಿಹಾಸ ನೋಡಿದರೆ ಬಿಜೆಪಿ (BJP), ಆರ್‌ಎಸ್‌ಎಸ್ (RSS) ಎಲ್ಲಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯೇ ಆಗಿಲ್ಲ. ಆರ್‌ಎಸ್‌ಎಸ್ ಬ್ರಿಟಿಷರಿಗೆ (British) ಸಹಾಯ ಮಾಡ್ತಾ ಇತ್ತು. ಸಾವರ್ಕರ್ (Savarkar) ಸ್ಟೈಫಂಡ್ ಪಡೆದುಕೊಳ್ಳುತ್ತಿದ್ದರು. ಭಾರತವನ್ನು (India) ಒಡೆಯುತ್ತಿರುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ. ಲಕ್ಷಾಂತರ ಮಂದಿ ಭಾರತ್ ಜೋಡೋ ಯಾತ್ರೆ (Bharat Jodo Yatra) ಮಾಡ್ತಾ ಇದ್ದಾರೆ. ನಾವು ದ್ವೇಷ ಹರಡುವ ಎಲ್ಲರ ವಿರುದ್ಧವೂ ಹೋರಾಡುತ್ತೇವೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುರುವೇಕೆರೆಯ ಅರಳಿಕೆರೆ ಪಾಳ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ. ಪತ್ರಕರ್ತರು ಪ್ರಶ್ನೆ ಕೇಳಲು ಅವಕಾಶವೇ ಇಲ್ಲ. ಇಲ್ಲಿಯವರೆಗೆ ಒಂದೇ ಒಂದು ಸುದ್ದಿಗೋಷ್ಠಿ ಮೋದಿ (Narendra Modi) ಮಾಡಿಲ್ಲ. ಆದ್ರೆ ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಹಾಗಾಗಿ ಈ ಸುದ್ದಿಗೋಷ್ಠಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ
ಚುನಾವಣೆಯಲ್ಲಿ ಕಾಂಗ್ರೆಸ್‍ನವರು ಎಲ್ಲರೂ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಚುನಾವಣೆಗೆ ಕೆಲಸ ಮಾಡಲೇಬೇಕಾಗುತ್ತದೆ. ಮ್ಯಾಜಿಕ್ ನಂಬರ್ ಬರದಿದ್ದರೆ, ಜೆಡಿಎಸ್ ಜೊತೆಗಿನ ಒಪ್ಪಂದದ ಬಗ್ಗೆ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಅದರ ಅಗತ್ಯವೇ ಬೀಳುವುದಿಲ್ಲ. ಯಾರ ಸಹಾಯವೂ ಇಲ್ಲದೇ ನಾವು ಚುನಾವಣೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 60 ಸಾವಿರ ಹಸುಗಳನ್ನು ಬಲಿ ಪಡೆದ ಲಂಪಿ ವೈರಸ್ ಕರ್ನಾಟಕಕ್ಕೆ ಎಂಟ್ರಿ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಚುನಾವಣೆ ಕುರಿತಾಗಿ ಮಾತನಾಡಿ, ಗಾಂಧಿ ಕುಟುಂಬ ಹೊರತುಪಡಿಸಿ ಯಾರೇ ಅಧ್ಯಕ್ಷರಾದರೂ ಏನೂ ಸಮಸ್ಯೆ ಆಗುವುದಿಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದವರೇ. ಭಾರತ್ ಜೋಡೋ ಯಾತ್ರೆಗೆ ರಾಜಕೀಯ ಅಂಶವೂ ಸೇರಿದೆ ರಾಜಕೀಯ ಸ್ಪರ್ಶವೂ ಯಾತ್ರೆಗೆ ಇರಬಹುದು. ಯಾಕೆಂದರೆ ಬಹಳಷ್ಟು ಮಂದಿ ರಾಜಕಾರಣಿಗಳು ಯಾತ್ರೆಯಲ್ಲಿದ್ದಾರೆ. ಆದ್ರೆ ನನ್ನ ಮಟ್ಟಿಗೆ ಇದು ಭಾರತ ಜೋಡಿಸುವ ಉದ್ದೇಶದ ಯಾತ್ರೆ. ಜನರ ಬಳಿ ನಡೆದುಕೊಂಡು ಹೋಗುವುದು ಬೇರೆ, ಕಾರಿನಲ್ಲಿ ಹೋಗೋದು ಬೇರೆ. ನನಗೆ ನಡೆದುಕೊಂಡು ಹೋಗುವುದೇ ಇಷ್ಟ. ಯಾತ್ರೆ ಈಗ 31ನೇ ದಿನಕ್ಕೆ ಕಾಲಿಟ್ಟಿದೆ. ಎಷ್ಟು ದಿನ ಅನ್ನೋದು ಮುಖ್ಯ ಅಲ್ಲ. ಜನರ ಬಳಿ ನಡೆದು ಹೋದಾಗ ಅವರ ಮಾತುಗಳಿಗೆ ಕಿವಿಯಾಗಬಹುದು. ಅವರ ಸಮಸ್ಯೆ ಕೇಳಬಹುದು. ಯಾತ್ರೆಗೆ ಅದ್ಭುತ ಸಹಕಾರ, ಬೆಂಬಲ ಸಿಗುತ್ತಿದೆ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಬೆಂಬಲ ಕೊಡ್ತಿರೋದು ಗುಂಪು ಬೆಂಬಲಕ್ಕಿಂತ ದೊಡ್ಡದು ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ (Karnataka) ಮುಂದಿನ ಸಿಎಂ ಯಾರು ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಒಂದು ತಂಡವಾಗಿದ್ದೇವೆ. ಕರ್ನಾಟಕದಲ್ಲಿ ಉತ್ತಮ ನಾಯಕರಿದ್ದಾರೆ. ಚುನಾವಣೆ ಗೆದ್ದ ಮೇಲೆ ಮುಂದಿನ ಸಿಎಂ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಈ ಪ್ರಶ್ನೆ ಈಗಲೇ ಉದ್ಭವಿಸಲ್ಲ. ಈಗ ಈ ಪ್ರಶ್ನೆ ನಮ್ಮ ಪಕ್ಷದ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸಬಹುದು. ಹೀಗಾಗಿ ಪಕ್ಷದ ಪದ್ಧತಿಯಂತೆ ಪಕ್ಷ ಗೆದ್ದ ಬಳಿಕ ನಿರ್ಧಾರ ಮಾಡಲಾಗುತ್ತದೆ. ನಮ್ಮಲ್ಲಿ ನಾಯಕರ ಕೊರತೆ ಇಲ್ಲ. ಬುದ್ಧಿವಂತ ನಾಯಕರು ನಮ್ಮಲ್ಲಿ ಇದ್ದಾರೆ ಎಂದರು.
Live Tv