ಮಂಡ್ಯ: ಎಲ್ಲ ರೀತಿಯ ಧರ್ಮ ಆಚರಿಸಲು ನಮ್ಮ ಭಾರತದಲ್ಲಿ ಸ್ವಾತಂತ್ರ್ಯವಿದೆ. ನಮ್ಮ ಧರ್ಮವನ್ನ ಆಚರಿಸಲು ಬಿಡಿ ಎಂದು ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಪ್ರತಿಕ್ರಿಯೆ ನೀಡಿದರು.
ಮಂಡ್ಯದಲ್ಲಿ ಹುಡುಗರ ಮುಂದೆ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ನಾನು ಅಸೈನ್ಮೆಂಟ್ ಕೊಡಲು ಕಾಲೇಜಿಗೆ ಹೋಗಿದ್ದು. ಆಗ ಕೆಲವು ಹುಡುಗರ ಗುಂಪು ನನ್ನನ್ನು ನೋಡಿ ನೀನು ಕಾಲೇಜಿಗೆ ಬರಬೇಡ ಎಂದು ಜಗಳವಾಡಲು ಪ್ರಾರಂಭಿಸಿದರು. ಕಾಲೇಜಿಗೆ ನೀನು ಹೋಗಬೇಕಾದರೆ ಬುರ್ಕಾ ತೆಗೆದುಹೋಗು. ಅಲ್ಲ, ನೀನು ಬುರ್ಕಾದಲ್ಲಿ ಇರಬೇಕು ಎಂದರೆ ಮನೆಗೆ ಹೋಗು ಎಂದರು. ಆದರೂ ನಾನು ಕಾಲೇಜ್ ಒಳಗೆ ಹೋದೆ. ಆದರೆ ಅವರು ನನ್ನ ಕಿವಿ ಹತ್ತಿರ ಬಂದು ‘ಜೈ ಶ್ರೀರಾಮ್’ ಅಂತ ಘೋಷಣೆ ಕೂಗುತ್ತಿದ್ರು. ಅದಕ್ಕೆ ನಾನು ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಈ ವೇಳೆ ನನ್ನ ಕಾಲೇಜಿನ ಪ್ರತಿಯೊಬ್ಬರು ನನ್ನನ್ನು ಬೆಂಬಲಿಸಿದ್ದು, ರಕ್ಷಿಸಿದ್ರು ಎಂದು ವಿವರಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ
Advertisement
Advertisement
ನಾನು ಹೋಗುವುದಕ್ಕೂ ಮುನ್ನ ನನ್ನ ನಾಲ್ಕು ಸ್ನೇಹಿತರು ಆಳುತ್ತ ಮನೆಗೆ ಹೋದರು. ಅವರು ಕೂಗಿದ್ದು ತಪ್ಪಿಲ್ಲ, ನಾನು ಕೂಗಿದ್ದು ತಪ್ಪಿಲ್ಲ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ಕಿವಿ ಹತ್ತಿರ ಬಂದು ಘೋಷಣೆ ಕೂಗಿದ್ರು. ಆ ಕ್ಷಣದಲ್ಲಿ ನನಗೆ ಯಾವ ಭಯವಾಗಿಲ್ಲ. ಭಯ ಏಕೆ ಪಡಬೇಕು ಎಂದು ಪ್ರಶ್ನಿಸಿದರು.
Advertisement
ಹಿಜಬ್ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅವರು, ಎಲ್ಲ ಧರ್ಮಕ್ಕೂ ಸ್ವಾತಂತ್ರ್ಯವಿದೆ. ನಮ್ಮ ಭಾರತದಲ್ಲಿ ಎಲ್ಲ ರೀತಿಯ ಧರ್ಮಗಳಿವೆ. ಎಲ್ಲರೂ ಅವರವರ ಧರ್ಮವನ್ನು ಪಾಲನೆ ಮಾಡುತ್ತಾರೆ. ನಾವು ನಮ್ಮ ಧರ್ಮವನ್ನು ಪಾಲಿಸುತ್ತೇವೆ. ನಮ್ಮ ಧರ್ಮವನ್ನು ನಾವು ಆಚರಿಸಲು ಅವರೂ ಬಿಡಬೇಕು. ನಾವು ಅವರನ್ನು ಪ್ರಶ್ನೆ ಮಾಡುತ್ತಿಲ್ಲ. ಅದೇ ರೀತಿ ಅವರು ನಮ್ಮನ್ನು ಪ್ರಶ್ನೆ ಮಾಡಬಾದರು ಎಂದು ಮನವಿ ಮಾಡಿದರು.
Advertisement
ಹೈಕೋರ್ಟ್ ತೀರ್ಪುನ್ನು ಕೊಟ್ಟ ಮೇಲೆ ಮುಂದೆ ಏನು ಮಾಡಬೇಕು ಎಂದು ನೋಡಬೇಕು. ಕೋರ್ಟ್ ತೀರ್ಪುನ್ನು ಕೊಟ್ಟ ಮೇಲೆ ನಾವು ಅದನ್ನು ಪಾಲಿಸುತ್ತೇವೆ. ಆದರೆ ಹಿಜಬ್ ನಮಗೆ ತುಂಬಾ ಮುಖ್ಯ. ಇದನ್ನು ತೆಗೆಯುವುದಕ್ಕೆ ಆಗುವುದಿಲ್ಲ ಎಂದರು. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
5 ಲಕ್ಷ ರೂ. ಬಹುಮಾನ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿಯಿಲ್ಲ ಎಂದರು.