ಬೆಂಗಳೂರು: ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಊರು ಬಾಗಿಲು ಹಾಕಿದಂತೆ ತಮಿಳುನಾಡಿಗೆ (Tamil Nadu) ನೀರು ಬಿಟ್ಟು ಈಗ ಸಭೆ ಮಾಡಿದರೆ ಏನು ಪ್ರಯೋಜನ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸರ್ವ ಪಕ್ಷಗಳ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಡಿನ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಅನುಕೂಲ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ (Bengaluru) ಅನೇಕ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಒಂದು ಟ್ಯಾಂಕ್‌ಗೆ 500 ರೂ. ಆಗಿದೆ. ಒಂದು ಕಡೆ ಗ್ಯಾರಂಟಿ ಸ್ಕೀಂ ಎನ್ನುತ್ತಾರೆ. ಇನ್ನೊಂದು ಕಡೆ ಹಾಲಿನ ದರ, ನೀರಿನ ದರ ಏರಿಕೆ ಆಗಿದೆ. ಈಗ ವಿದ್ಯುತ್ ಕಣ್ಣಾ ಮುಚ್ಚಾಲೆ ಮಾಡುತ್ತಿದ್ದಾರೆ. ನಾಡಿನ ರೈತರ ಹಿತರಕ್ಷಣೆ ಮಾಡುವುದಕ್ಕಿಂತ ಮುಖ್ಯವಾಗಿ ಈ ಸರ್ಕಾರ ತಮಿಳುನಾಡಿನ ಹಿತರಕ್ಷಣೆ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ವರ್ಗಾವಣೆ ದಂಧೆ, ಕಮಿಷನ್ ಆರೋಪ ಮರೆಮಾಚಲು ಘರ್ ವಾಪ್ಸಿ ಪ್ರಸ್ತಾಪ: ಹೆಚ್‌ಡಿಕೆ
Advertisement
Advertisement
ಸುಪ್ರೀಂ ಕೋರ್ಟ್ (Supreme Court) ಮುಂದೆ ನಮ್ಮ ಸರ್ಕಾರ ವಾದ ಮಾಡಬೇಕಿತ್ತು. ಆದರೆ ನೀರು ಬಿಟ್ಟಿದ್ದಾರೆ. ನಾವು ಹೇಳಿದ ಮೇಲೆ ನಾಳೆ ಸುಪ್ರೀಂಕೋರ್ಟ್‌ಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಬೇರೆ ಸರ್ಕಾರ ಇದ್ದಾಗಲೂ ಇಂತಹ ಪರಿಸ್ಥಿತಿ ಬಂದಿದೆ. ಆಗಲೂ ಕೊನೆ ಹಂತದವರೆಗೂ ಜನರಿಗೆ ನೀರು ಕೊಡುವ ಪ್ರಯತ್ನ ಆಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಪ್ರಯತ್ನವೇ ಪಡದೇ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿತು ಎಂದು ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಕುರುವೈ ಬೆಳೆಯನ್ನು ನಾಲ್ಕು ಪಟ್ಟು ಹೆಚ್ಚಳ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ವಿರೋಧ ಮಾಡಿಲ್ಲ. ಕೇಂದ್ರ ಸರ್ಕಾರ ಕೂಡಾ ಅದನ್ನು ನಿಲ್ಲಿಸಿಲ್ಲ.ನಮ್ಮ ನಾಡಿನ ಜನರ ಬದುಕಿನ ಜೊತೆ ನಮ್ಮ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಚೆಲ್ಲಾಟ ಆಡುತ್ತಿದೆ. ರಾಷ್ಟ್ರೀಯ ಪಕ್ಷಗಳು ಇದಕ್ಕೆ ಕೈ ಜೋಡಿಸುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿಯವರು ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ: ಪರಮೇಶ್ವರ್
Advertisement
Advertisement
ಬುಧವಾರ ಸರ್ವ ಪಕ್ಷಗಳ ಸಭೆಗೆ ಇನ್ನೂ ನಮಗೆ ಆಹ್ವಾನವೇ ಬಂದಿಲ್ಲ. ಬಂದ ನಂತರ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಎಲ್ಲಾ ಮುಗಿದ ಮೇಲೆ ಈಗ ಸಭೆ ಮಾಡುತ್ತಿದ್ದಾರೆ. ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಊರು ಬಾಗಿಲು ಹಾಕಿದ್ರು ಎಂಬಂತೆ ನೀರು ಬಿಟ್ಟ ಮೇಲೆ ಸಭೆ ಮಾಡುತ್ತಿದ್ದಾರೆ. ಎಲ್ಲಾ ಮುಗಿದ ಬಳಿಕ ನಮ್ಮನ್ನು ಕರೆದು ಏನು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಟೆಂಟ್ ನಡೆಸ್ತಿದ್ದವರು ಇಂದು 1,450 ಕೋಟಿ ಒಡೆಯರು, ಅನಧಿಕೃತ ಎಷ್ಟಿದೆಯೋ? – ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ಕಿಡಿ
ಕೆಆರ್‌ಎಸ್‌ನಲ್ಲಿ (KRS) ಈಗ ನೀರಿನ ಮಟ್ಟ 112 ರಿಂದ 105 ಅಡಿಗೆ ಇಳಿದಿದೆ. ಮಳೆ ಆಗದೇ ಇದ್ದರೆ ಪರಿಸ್ಥಿತಿ ಏನಾಗುತ್ತೆ? ನಾವು ಅತ್ತುಕರೆದ ಮೇಲೆ ಈಗ ಎಲ್ಲಾ ಮುಗಿಸಿ ಸಭೆ ಕರೆಯುತ್ತಿದ್ದಾರೆ. ಈಗ ಸಭೆ ಕರೆದು ಏನು ಸಾಧನೆ ಮಾಡುತ್ತಾರೆ? ಸರಿಯಾದ ರೀತಿ ಕಾನೂನು ವ್ಯಾಪ್ತಿಯಲ್ಲಿ ವಾದ ಮಾಡುವ ಕೆಲಸ ಮಾಡಬೇಕು. ನಮ್ಮದು ಚಿಕ್ಕ ಪಕ್ಷ. ನಮ್ಮನ್ನು ಅವರು ಸಭೆಗೆ ಕರೆಯುತ್ತಾರೋ ಇಲ್ಲವೋ ನೋಡೋಣ. ನಮಗೆ ಸಭೆಯ ಬಗ್ಗೆ ಮಾಹಿತಿ ಬಂದಿಲ್ಲ ಎಂದರು. ಇದನ್ನೂ ಓದಿ: ಆರೋಪಿ ಸಚಿವರಿಗೆ ಸಿಐಡಿ ಅಧಿಕಾರಿಗಳು ತನಿಖೆ ಮಾಹಿತಿ ನೀಡುತ್ತಿದ್ದಾರೆ: ಹೆಚ್‌ಡಿಕೆ
ಕಾಂಗ್ರೆಸ್ ಅವರು 135 ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ನವರಿಗೆ ಈಗ ಘರ್ ವಾಪ್ಸಿ ಚಿಂತೆ. ಘರ್ ವಾಪ್ಸಿ ಚಿಂತನೆಯಲ್ಲಿ ಇರೋರು ನಮ್ಮನ್ನು ಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ನಮ್ಮನ್ನು ಅವರು ಲೆಕ್ಕಕ್ಕೂ ಇಟ್ಟಿಲ್ಲ. ನಾವು ಜೆಡಿಎಸ್ (JDS) ಪಕ್ಷವನ್ನೇ ಮುಗಿಸಿಬಿಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆಯವರು (Priyank Kharge) ಹೇಳುತ್ತಾರೆ. ಝೀರೋ ಮಾಡುತ್ತೇವೆ ಎನ್ನುತ್ತಾರೆ. ನಮ್ಮನ್ನು ಮುಗಿಸೋಕೆ ಹೊರಟಿರುವವರು ನಮ್ಮಿಂದ ಏನು ಸಲಹೆ ಪಡೆಯುತ್ತಾರೆ ಎಂದು ಟೀಕೆ ಮಾಡಿದರು. ಅಲ್ಲದೇ ಸೋಮವಾರ ಮಂಡ್ಯದಲ್ಲಿ (Mandya) ನಡೆಯುವ ಪ್ರತಿಭಟನೆಗೆ ನಮ್ಮ ಬೆಂಬಲ ಇದೆ. ಯಾವುದೇ ಪಕ್ಷಗಳು ಪ್ರತಿಭಟನೆ ಮಾಡಿದರೂ ಬೆಂಬಲ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೇನೆಂದು ಯಾರೂ ಹೇಳಿಲ್ಲ: ಉಮೇಶ್ ಜಾಧವ್
Web Stories