ರಾಮನಗರ: ಟೆಂಟ್ ನಡೆಸುತ್ತಿದ್ದವರು ಇಂದು 1,450 ಕೋಟಿ ಒಡೆಯರು. ಅಧಿಕೃತ ಆಸ್ತಿಯೇ ಇಷ್ಟು. ಅನಧಿಕೃತ ಅದೆಷ್ಟಿದೆಯೋ ಎಂದು ಡಿಕೆ ಬ್ರದರ್ಸ್ (DK Brothers) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ಹೆಚ್‌ಡಿಕೆ ಅವಧಿಯಲ್ಲಿ ರಾಮನಗರ (Ramanagara) ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ (Congress) ಕೊಡುಗೆ ನೀಡಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ರಾಮನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆ ಬ್ರದರ್ಸ್ ದೊಡ್ಡಾಲಹಳ್ಳಿ ಹಾಗೂ ಸಾತನೂರಿನಲ್ಲಿ ಟೆಂಟ್ ನಡೆಸುತ್ತಿದ್ದರು. ಈಗ 1,450 ಕೋಟಿ ಅಧಿಕೃತ ಆಸ್ತಿ. ಅನಧಿಕೃತ ಎಷ್ಟಿದೆಯೋ? ಇದೇ ಅವರ ಅಭಿವೃದ್ಧಿ. ಇಂತಹ ಅಭಿವೃದ್ಧಿ ನಾನು ಮಾಡಬೇಕಿತ್ತಾ? ಈ ತಾಲೂಕು ಹಾಗೂ ಜಿಲ್ಲೆಯ ಜನ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಆರೋಪಿ ಸಚಿವರಿಗೆ ಸಿಐಡಿ ಅಧಿಕಾರಿಗಳು ತನಿಖೆ ಮಾಹಿತಿ ನೀಡುತ್ತಿದ್ದಾರೆ: ಹೆಚ್‌ಡಿಕೆ
Advertisement
Advertisement
ದೇವೇಗೌಡರ (HD Deve Gowda) ಕಾಲದಲ್ಲೇ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಕುಡಿಯುವ ನೀರು ತರಲಾಯಿತು. ರಾಮನಗರ ಬೆಳೆಯುತ್ತಿರುವ ನಿಟ್ಟಿನಲ್ಲಿ ನಾನು ಹಣಕಾಸು ಮಂತ್ರಿಯಾದಾಗ ಹೆಚ್ಚುವರಿ ಯೋಜನೆ ಮಾಡಿದ್ದೇವೆ. ಆದರೆ 2013ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕುಡಿಯುವ ನೀರಿನ ಯೋಜನೆಗೆ ಇವರ ಕೊಡುಗೆ ಏನು? ಆಗ ಯಾಕೆ ನೀರು ತರಲಿಲ್ಲ? ಆ ಸಮಯದಲ್ಲಿ ಬಂಡೆ ಒಡೆದುಕೊಂಡು ಕೂತಿದ್ರಾ? ಅಥವಾ ಸಾಕ್ಷಿ ಗುಡ್ಡೆಗಳನ್ನು ರೆಡಿ ಮಾಡಿಕೊಂಡು ಕೂತಿದ್ದರಾ? ಅಭಿವೃದ್ಧಿ ಮಾಡಿರೋದರ ಬಗ್ಗೆ ಸಾಕ್ಷಿ ಗುಡ್ಡೆ ಕೇಳುತ್ತಿರಲಿಲ್ಲ. ಕುಮಾರಸ್ವಾಮಿಯ ಅಭಿವೃದ್ಧಿ ಸಾಕ್ಷಿಗುಡ್ಡೆ ಎಲ್ಲಾ ಕಡೆ ಇದೆ. ನಿಮ್ಮದು ಏನಿದೆ? ಕಲ್ಲು ಬಂಡೆಗಳನ್ನು ಒಡೆದು ಚೀನಾಗೆ ಸಾಗಿಸಿದ್ದೇ ಇವರ ಸಾಕ್ಷಿಗುಡ್ಡೆ. ಮೊದಲು ಲಘುವಾಗಿ ಮಾತನಾಡುವುದನ್ನು ಬಿಡಲಿ. ಅನಿತಾ ಕುಮಾರಸ್ವಾಮಿ ತಂದಿರೋ ಅನುದಾನದಲ್ಲಿ ಕೆಲಸ ಮಾಡುತ್ತಿರುವವರು ಇವರು. ಒಂದು ರೂಪಾಯಿ ಬಿಡುಗಡೆ ಮಾಡಿಸಿ ಕೆಲಸ ಮಾಡಿದ್ದಾರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಧಿಕೃತವಾಗಿ ಪಾರ್ಟಿ ಬಿಟ್ಟು ಹೊಗ್ತೇನೆಂದು ಯಾರೂ ಹೇಳಿಲ್ಲ: ಉಮೇಶ್ ಜಾಧವ್
Advertisement
ಹೆಚ್‌ಡಿಕೆ ಅಧಿಕಾರ ಇದ್ದಾಗ ಹೋಟೆಲ್‌ನಲ್ಲಿ ಕೂತು ಬ್ಯುಸಿನೆಸ್ ಮಾಡುತ್ತಿದ್ದರು ಎಂಬ ಸಂಸದ ಡಿಕೆ ಸುರೇಶ್ (DK Suresh) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊನ್ನೆ ವಿಪಕ್ಷಗಳ ಮೈತ್ರಿ ಸಭೆ ಮಾಡಿದ್ದರಲ್ಲಾ, ಅದನ್ನು ಇವರು ಎಲ್ಲಿ ಮಾಡಿದ್ರು? ಅದೇ ಖಾಸಗಿ ಹೋಟೆಲ್‌ನಲ್ಲಿ ತಾನೇ ಸಭೆ ಮಾಡಿದ್ದು. ನನ್ನಷ್ಟು ಜನರಿಗೆ ಹತ್ತಿರವಾಗಿ ಸಿಗುವವನು ಭೂಮಿ ಮೇಲೆ ಯಾರೂ ಇಲ್ಲ. ಬಡವರಿಗೆ ಹತ್ತಿರವಾಗಿ ಸಿಗುವವರು ನನ್ನನ್ನು ಬಿಟ್ಟರೆ ಯಾರಿದ್ದಾರೆ? ಇವರ ಹತ್ತಿರ ನಾನು ನಡವಳಿಕೆ ಕಲಿಯಬೇಕಾ? ಜನರ ಬಳಿ ಲೂಟಿ ಮಾಡಿಕೊಂಡು ತಿರಗಾಡುತ್ತಾ ಇದ್ದಾರೆ. ಇವನು ಎಂಪಿ ಆಗೋದಕ್ಕೂ ಮುಂಚೆ ಇವನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂಪಿ ಆಗಿ 8 ವರ್ಷದಲ್ಲಿ ಎಷ್ಟು ಆಸ್ತಿ ಮಾಡಿಕೊಂಡಿದ್ದಾನೆ? ನಾನು ಮಾಡಿದ್ದೀನಾ ಎಂದು ಏಕವಚನದಲ್ಲೇ ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ಅಂದ್ರೆ ನಮಗೆ ಭಯ – ಸತೀಶ್ ಜಾರಕಿಹೊಳಿ
Advertisement
ನಮ್ಮ ಬಗ್ಗೆ ಜಿಲ್ಲೆಯಲ್ಲಿ ಅಪಪ್ರಚಾರ ಮಾಡಲಾಗಿದೆ. ರಾಮನಗರ ತಾಲೂಕಿಗಾಗಲಿ, ಜಿಲ್ಲೆಗಾಗಲಿ ನನ್ನಿಂದ ಅನ್ಯಾಯ ಆಗಿಲ್ಲ. ನಮ್ಮವರೇ ಕೆಲವರು ದುಡುಕಿನ ನಿರ್ಧಾರ ಮಾಡಿದ್ದಾರೆ. ರಾಮನಗರಕ್ಕೆ ನಮ್ಮ ಕೊಡುಗೆ ಏನೆಂದು ಎಲ್ಲರಿಗೂ ಗೊತ್ತು. ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ರಾಮನಗರಕ್ಕೆ ತಂದಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಅವರು ರಾಮನಗರಕ್ಕೆ ಕೊಡುತ್ತಿರುವ ಬಳುವಳಿ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು. ಇದನ್ನೂ ಓದಿ: ನಿಖಿಲ್‌ಗೆ ಬದುಕಲು ಹಲವು ಮಾರ್ಗಗಳಿವೆ; ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ: ಹೆಚ್‌ಡಿಕೆ
Web Stories