ಮುಂಬೈ: 2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ಮುಂಬೈ ಗೆಲುವಿನ ಕೃಪೆಯಿಂದ ಪ್ಲೇ-ಆಫ್ ತಲುಪಿ, ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯ ಆಡುತ್ತಿದೆ.
ಆದರೆ ಇದುವರೆಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದ ಪಂದ್ಯಗಳಲ್ಲಿ ಫೈನಲ್ಸ್ ವರೆಗೆ ತಲುಪಿದರೂ ಒಂದು ಆವೃತ್ತಿಯಲ್ಲೂ ಆರ್‌ಸಿಬಿ ಏಕೆ ಕಪ್ ಗೆದ್ದಿಲ್ಲ? ಎಂಬುದನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗುರುತಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್
Advertisement
Advertisement
ಈ ಕುರಿತು ಮಾತನಾಡಿರುವ ಸೆಹ್ವಾಗ್, ನೂತನ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್ ಹಾಗೂ ಕೋಚ್ ಸಂಜಯ್ ಬಂಗಾರ್ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಈ ಹಿಂದೆ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ ಕೆಲ ಆಟಗಾರರನ್ನು ಕೈಬಿಡುತ್ತಿದ್ದರು. ಇದರಿಂದ ತಂಡದ ಸಮತೋಲನ ಅಡ್ಡಿಪಡಿಸುವ ಜೊತೆಗೆ ಆಟಗಾರರ ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತಿತ್ತು ಎಂದು ಹೇಳಿದ್ದಾರೆ.
Advertisement
Advertisement
2-3 ತಂಡಗಳಲ್ಲಿ ಯಾವುದೇ ಪ್ರದರ್ಶನವಿಲ್ಲದ ಮಾತ್ರಕ್ಕೆ ಆಟಗಾರರನ್ನು ಡ್ರಾಪ್ ಮಾಡುವ ವಿರಾಟ್ ಹೇಗೆ ಯೋಚಿಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ ಮುಖ್ಯ ಕೋಚ್ ಸಂಜಯ್ ಬಂಗಾರ್ ಹಾಗೂ ಹೊಸ ನಾಯಕನ ಆಗಮನವು ಆರ್‌ಸಿಬಿ ತಂಡದ ಆಲೋಚನೆಗಳನ್ನು ಬದಲಾಯಿಸಿದೆ. ಇವರಿಬ್ಬರು ತಂಡವನ್ನು ಸ್ಥಿರವಾಗಿ ಉಳಿಸಿಕೊಂಡಿದ್ದಾರೆ. ಯಾವುದೇ ಪ್ರದರ್ಶನವಿಲ್ಲದ ಆಟಗಾರರನ್ನು ಬದಲಾವಣೆ ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು
ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ ನಾಯಕರನ್ನಾಗಿ ಮಾಡಿದ್ದು ಮ್ಯಾನೇಜ್‌ಮೆಂಟ್ ಮಾಡಿದ ನಿರ್ಧಾರ. ಒಂದು ವೇಳೆ ಭಾರತದ ಕ್ರಿಕೆಟಿಗನನ್ನೇ ನಾಯಕನನ್ನಾಗಿ ಮಾಡಿದ್ದರೆ ಕೊಹ್ಲಿಯ ಸಲಹೆಯನ್ನೇ ಒಪ್ಪಿಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗುತ್ತಿದ್ದರೇನೋ? ಹಾಗಾಗಿ ಡು ಪ್ಲೆಸಿಸ್ ನಾಯಕನಾಗಿ ಬದಲಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.