CricketLatestLeading NewsMain PostSports

ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್

ಕೋಲ್ಕತ್ತಾ: 15ನೇ ಆವೃತ್ತಿ ಐಪಿಎಲ್‍ನ ಮೊದಲ ಕ್ವಾಲಿಫೈಯರ್ ಪಂದ್ಯ ರೋಚಕವಾಗಿ ಸಾಗಿ ಕೊನೆಗೆ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸರ್ ಮೂಲಕ ಗುಜರಾತ್ ತಂಡವನ್ನು ಫೈನಲ್‍ಗೇರಿಸಿದರು. ಆ ಬಳಿಕ ತಮ್ಮ ಮಾಜಿ ಫ್ರಾಂಚೈಸ್ ರಾಜಸ್ಥಾನ ತಂಡಕ್ಕೆ Sorry ಎಂಬ ಸಂದೇಶ ಕಳುಹಿಸಿದ್ದಾರೆ.

ಗೆಲ್ಲಲು 189 ರನ್‍ಗಳ ಗುರಿಯನ್ನು ಪಡೆದ ಗುಜರಾತ್ ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಸಾಹಸದಿಂದ 19.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಹೊಡೆದು ಫೈನಲ್ ಪ್ರವೇಶಿಸಿತು. ಡೇವಿಡ್ ಮಿಲ್ಲರ್ ಅಜೇಯ 68 ರನ್ (3 ಬೌಂಡರಿ, 5 ಸಿಕ್ಸ್) ಚಚ್ಚಿ ತಮ್ಮ ಈ ಹಿಂದಿನ ಫ್ರಾಂಚೈಸ್ ರಾಜಸ್ಥಾನ ನೇರ ಫೈನಲ್‍ಗೆ ಎಂಟ್ರಿಕೊಡುವ ಕನಸಿಗೆ ಕೊಳ್ಳಿ ಇಟ್ಟರು. ಇದನ್ನೂ ಓದಿ: ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

ಪಂದ್ಯದ ಬಳಿಕ ಡೇವಿಡ್ ಮಿಲ್ಲರ್ ಸಾಮಾಜಿಕ ಜಾಲತಾಣದಲ್ಲಿ Sorry ರಾಯಲ್ಸ್ ಫ್ಯಾಮಿಲಿ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ರಾಜಸ್ಥಾನ ತಂಡ ರೀಟ್ವೀಟ್ ಮಾಡಿ ಮಿಲ್ಲರ್‌ಗೆ ಟಕ್ಕರ್ ನೀಡಿದೆ. ಈ ಹಿಂದೆ 2020 ಮತ್ತು 2021ರಲ್ಲಿ ರಾಜಸ್ಥಾನ ತಂಡದ ಪರ ಡೇವಿಡ್ ಮಿಲ್ಲರ್ ಆಡಿದ್ದರು. ಆದರೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡು ಕೆಲ ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಪಡೆದಿದ್ದರು. ಇದನ್ನೂ ಓದಿ: ಮಗ ಅರ್ಜುನ್‍ಗೆ ಐಪಿಎಲ್‍ನಲ್ಲಿ ಸಿಗದ ಅವಕಾಶ – ಕೊನೆಗೂ ಮೌನ ಮುರಿದ ತೆಂಡೂಲ್ಕರ್

ಆ ಬಳಿಕ 2022ರ ಮೆಗಾ ಹರಾಜಿನಲ್ಲಿ ನೂತನ ತಂಡ ಗುಜರಾತ್ ಟೈಟಾನ್ಸ್ ತಂಡ ಡೇವಿಡ್ ಮಿಲ್ಲರ್‌ರನ್ನು 3 ಕೋಟಿ ರೂ. ನೀಡಿ ಖರೀದಿಸಿತು. ಈ ಬಾರಿ ಬ್ಯಾಟಿಂಗ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಮಿಲ್ಲರ್ ಒಟ್ಟು 15 ಪಂದ್ಯಗಳಿಂದ 449 ರನ್ ಬಾರಿಸಿ ಟಾಪ್ 10 ಬ್ಯಾಟ್ಸ್‌ಮ್ಯಾನ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

 

Leave a Reply

Your email address will not be published.

Back to top button