ಬೆಂಗಳೂರು: ಕಿತ್ತೂರು ಕರ್ನಾಟಕದಲ್ಲಿ ಅಮಿತ್ ಶಾ (Amit Shah) ಫಸ್ಟ್ ರೌಂಡ್ ಬಳಿಕ ಸಿಡಿ ಕದನ ಮತ್ತೆ ಶುರುವಾಗಿದೆ. ಅಮಿತ್ ಶಾ ಬಂದು ಹೋಗುವ ತನಕ ಸುಮ್ಮನಿದ್ದು ಈಗ ಅಸಲಿ ಎಲೆಕ್ಷನ್ ಆಟ ಶುರು ಮಾಡಿದ್ದಾರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi).
ಜಾರಕಿಹೊಳಿ ಡಿಕೆಶಿ (DK Shivakumar) ವಿರುದ್ಧ ಸಮರ ಸಾರಲು ಬಿಜೆಪಿ (BJP) ಹೈಕಮಾಂಡ್ ಬಳಿ ಅನುಮತಿ ಕೇಳಿ ಪಡೆದಿದ್ದಾರೆ ಎನ್ನಲಾಗಿದೆ. ಪರ್ಸನಲ್ ಆಗಿ ನನ್ನ ದಾಳಿ ಇರುತ್ತದೆ. ನನಗೆ ಪರ್ಮಿಶನ್ ಕೊಡಿ ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದರು ಎನ್ನಲಾಗಿದೆ.
Advertisement
Advertisement
ನನ್ನ ಮರ್ಯಾದೆ ಹೋಗಿದೆ, ಅಧಿಕಾರ ಹೋಗಿದೆ, ಈಗ ನನ್ನ ಹಠ ಗೆಲ್ಲಬೇಕೆಂಬ ಅಸ್ತ್ರ ಮುಂದಿಟ್ಟು ರಮೇಶ್ ಜಾರಕಿಹೊಳಿ ಹೊಸ ಗೇಮ್ ಚಾಲೂ ಮಾಡಿರುವ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಪರ್ಸನಲ್ ಅಟ್ಯಾಕ್ ಏನಾದರೂ ಮಾಡಿಕೊಳ್ಳಿ. ಆದರೆ ಪಾರ್ಟಿಗೆ ಡ್ಯಾಮೇಜ್ ಆಗದ ರೀತಿ ನಡೆದುಕೊಳ್ಳಿ ಎಂದು ಬಿಜೆಪಿ ಹೈಕಮಾಂಡ್ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: 2+1 ಬೆಳಗಾವಿ ಜಿದ್ದು: ಎಲೆಕ್ಷನ್ ವೇಳೆ ಸಿಡಿ, ಆಡಿಯೋ ಬಾಂಬ್ ಸಮರ ಹೆಚ್ಚಾಗುತ್ತಾ?
Advertisement
Advertisement
ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಹಳೇ ಕೇಸ್ ಹೊಸ ನಶೆ ಎಂಬ ರೀತಿಯಲ್ಲಿ ರಾಜಕೀಯ ದಾಳಿ ನಡೆಸಿದ್ದಾರೆ. ಇದೇ ವೇಳೆ ಪೊಲಿಟಿಕಲ್ ಚಾರ್ಜ್ ಶೀಟ್ ಹಾಕಿರುವ ರಮೇಶ್ ಜಾರಕಿಹೊಳಿ, 10 ಸಾವಿರ ಕೋಟಿ ಫೈಲ್ ಕ್ಲಿಯರ್ ರಹಸ್ಯದ ಹೊಸ ಬಾಂಬ್ ಹಾಕಿದ್ದಾರೆ. ಹಾಗಾದರೆ ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿಕೆಶಿ ಪ್ರತಿ ಅಸ್ತ್ರ ರೆಡಿ ಇದೆಯಾ? ಎಂಬ ಕುತೂಹಲವಿದ್ದು, ಇಬ್ಬರ ಜಿದ್ದಾಜಿದ್ದಿನ ಗುದ್ದಾಟ ರೋಚಕ ಪಡೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k