Connect with us

ಸನ್ನಿ ಲಿಯೋನ್‍ಗೆ ಸೆಡ್ಡು ಹೊಡೆಯಲು ಬರ್ತಿದ್ದಾಳೆ ನೀಲಿ ಕೆಂಡ ಮಿಯಾ ಮಲ್ಕೊವಾ

ಸನ್ನಿ ಲಿಯೋನ್‍ಗೆ ಸೆಡ್ಡು ಹೊಡೆಯಲು ಬರ್ತಿದ್ದಾಳೆ ನೀಲಿ ಕೆಂಡ ಮಿಯಾ ಮಲ್ಕೊವಾ

ಬೆಂಗಳೂರು: ಬಾಲಿವುಡ್‍ನಲ್ಲಿ ತನ್ನ ಮೈಮಾಟದಿಂದಲೇ ಹೆಸರು ಮಾಡಿದ್ದ ನಟಿ ಸನ್ನಿ ಲಿಯೋನ್. ಜಿಸ್ಮ್-2 ಚಿತ್ರದಿಂದ ಭಾರತೀಯ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಸನ್ನಿ ಕಡಿಮೆ ಸಮಯದಲ್ಲಿ ಎಲ್ಲ ಪಡ್ಡೆ ಹುಡುಗರಿಗೆ ಹಾಟ್ ಫೇವೆರೇಟ್ ಆಗಿದ್ದಾರೆ. ಆದ್ರೆ ಇದೀಗ ಸನ್ನಿಗೆ ಟಕ್ಕರ್ ಕೊಡುವಂತಹ ನಟಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಕ್ಯಾಲಿಫೋರ್ನಿಯಾದಿಂದ ಪಾರ್ನ್ ಸ್ಟಾರ್ ಮಿಯಾ ಮಲ್ಕೊವಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ ವರ್ಮಾ (ಆರ್ ಜಿವಿ) ‘ಗಾಡ್, ಸೆಕ್ಸ್ ಆ್ಯಂಡ್ ಟ್ರುಥ್’ ಎಂಬ ಸಿನಿಮಾಗಾಗಿ ನೀಲಿ ತಾರೆ ಮಿಯಾ ಮಲ್ಕೊವಾಳನ್ನು ಕರೆತಂದಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ತೆರೆಕಾಣಲು ರೆಡಿ ಆಗುತ್ತಿದೆ. ಆರ್‍ಜಿವಿ ನಿರ್ದೇಶನದಲ್ಲಿ ನಟಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ಸನ್ನಿ ನಂತರ ನಾನೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ ನೀಲಿ ತಾರೆ ಎಂದು ಮಿಯಾ ಟ್ವೀಟ್ ಮಾಡಿದ್ದಾರೆ.

ಮಿಯಾ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಆರ್ ಜಿವಿ ನಾನು ಇದೂವರೆಗೂ ಸನ್ನಿ ಜತೆ ಸಿನಿಮಾ ಮಾಡಿಲ್ಲ. ಆದರೆ ನಿನ್ನ ಜೊತೆ ಸಿನಿಮಾ ಮಾಡಿದ ಮೇಲೆ, ಸನ್ನಿ ಜೊತೆಯೂ ಒಂದು ಚಿತ್ರ ಮಾಡುವಾಸೆಯಾಗಿದೆ ಅಂತಾ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಈಗಾಗಲೇ ನೀಲಿ ಸಿನಿಮಾಗಳಿಗೆ ಟಾಟಾ ಹೇಳಿ ಬಾಲಿವುಡ್, ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಬೈನಲ್ಲಿ ಗಂಡನ ಜೊತೆ ನೆಲೆಸಿರುವ ಸನ್ನಿ ಲಿಯೋನ್ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

Advertisement
Advertisement