ಟಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಜೋಡಿ ಕೂಡ ಒಂದು. ಈ ಮದುವೆ ಆಗಿ ಹತ್ತು ವರ್ಷಗಳು ಕಳೆದಿದ್ದರು ಮಗು ಹೊಂದಿರದ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಬಂದಿದ್ದಾರೆ. ಇದೀಗ ರಾಮ್ ಚರಣ್ ದಂಪತಿ ಮಕ್ಕಳನ್ನು ಹೊಂದುವ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್‌ಚರಣ್ ಕೂಡ ತಮ್ಮ ಸ್ವಂತ ಪ್ರತಿಭೆಯಿಂದ ಟಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡವರು. ಆರ್‌ಆರ್‌ಆರ್ ಸೂಪರ್ ಸಕ್ಸಸ್‌ನಲ್ಲಿರುವ ನಟ ರಾಮ್ ಚರಣ್ ಸದ್ಯ ಎದುರಾಗುತ್ತಿರುವ ಏಕೈಕ ಪ್ರಶ್ನೆ ಮಕ್ಕಳನ್ನ ಹೊಂದುವ ಕುರಿತು ಸಾಕಷ್ಟು ಕಡೆ ಕೇಳಲಾಗುತ್ತಿದೆ. ಇನ್ನು ಉಪಾಸನಾ ಅವರನ್ನ ಕೂಡ ಇದೇ ರೀತಿ ಪ್ರಶ್ನೀಸಲಾಗುತ್ತಿದೆ. ಇದನ್ನೂ ಓದಿ:ಕರಣ್ ಜೋಹರ್ ನಿರ್ಮಾಣದಲ್ಲಿ ಈ ಸ್ಟಾರ್ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ
ರಾಮ್‌ಚರಣ್ ಈಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತ್ನಿ ಉಪಾಸನಾ ಕೂಡ ಸಾಮಾಜಿಕ ಕಾರ್ಯಗಳ ಮೂಲಕ ಜನಸೇವೆ ಮಾಡ್ತಿದ್ದಾರೆ. ಮೆಗಾಸ್ಟಾರ್ ಪುತ್ರನಾಗಿ ನನ್ನ ಮೇಲು ಸಾಕಷ್ಟು ಜವಾಬ್ದಾರಿಯಿದೆ. ತನ್ನ ಅಭಿಮಾನಿಗಳಿಗೆ ನನ್ನ ಸಿನಿಮಾಗಳಿಂದ ರಂಜಿಸೋದೇ ನನ್ನ ಸದ್ಯದ ಗುರಿ ಅಂತಾ ತಿಳಿಸಿದ್ದಾರೆ. ಪತ್ನಿ ಉಪಾಸನಾ ಇತ್ತೀಚೆಗಷ್ಟೇ ಸದ್ಗುರು ಅವರನ್ನ ಭೇಟಿ ಮಾಡಿದ್ದ ವೇಳೆ ಜನಸಂಖ್ಯೆ ನಿಯಂತ್ರಣಕ್ಕೆ ಮಕ್ಕಳು ಬೇಡ ಅಂದಿದ್ದರು. ಈ ಮೂಲಕ ದಂಪತಿಗಳಿಬ್ಬರು ಸದ್ಯಕ್ಕೆ ಮಕ್ಕಳನ್ನ ಹೊಂದುವ ಕುರಿತು ನಮಗೆ ಯೋಚನೆ ಇಲ್ಲ ಎಂಬುದನ್ನ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]