ಬೆಂಗಳೂರು: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಮತ್ತು ರೈಲ್ವೇ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡುವಾಗ ಮುಸ್ಲಿಮರು ಗಲಾಟೆ ಮಾಡಿದ್ದಾರಾ ಎಂದು ಮುಸ್ಲಿಮ್ ಕೌನ್ಸಿಲ್ ಬೋರ್ಡ್ ಅಧ್ಯಕ್ಷ ಮುಸ್ತಾಫ್ ಪ್ರಶ್ನೆ ಮಾಡಿದ್ದಾರೆ.
ಹಜ್ ಭವನ ಮುಸ್ಲಿಮರಿಗೆ ಸೇರಿದ್ದು, ಅದಕ್ಕೆ ನಮ್ಮ ನಾಯಕರ ಹೆಸರಿಡೋದು ನಮ್ಮಿಷ್ಟ. ನಾವು ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ, ದೀನದಯಾಳ್ ಉಪಾಧ್ಯಾಯ ಹೆಸರಿಡೋವಾಗ ಏನಾದ್ರೂ ವಿರೋಧ ಮಾಡಿದ್ವಾ? ಮುಸ್ಲಿಮರ ಭವನಕ್ಕೆ ಟಿಪ್ಪು ಹೆಸರಿಟ್ರೆ ಗಲಾಟೆ ಯಾಕೆ? ಈ ಹಿಂದೆ ದೇವನಹಳ್ಳಿ ಏರ್ಪೋರ್ಟ್ ಗೆ ಟಿಪ್ಪು ಹೆಸರಿಡಬೇಕು ಎನ್ನುವಾಗ ದೊಡ್ಡ ಗಲಾಟೆ ಮಾಡಿದ್ರು. ನಮ್ಮ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋಕೆ ಯಾಕೆ ತಕರಾರು ಎಂದು ಮುಸ್ತಾಫ್ ಪ್ರಶ್ನೆ ಮಾಡಿದರು.
Advertisement
Advertisement
ಮೌಲ್ವಿಗಳು ಮತ್ತು ಮುಸ್ಲಿಂ ಬೋರ್ಡ್ ಸದಸ್ಯರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಹಜ್ ಭವನಕ್ಕೆ ಟಿಪ್ಪು ಹೆಸರು ಬೇಕೆ ಬೇಕು ಎಂದು ಒತ್ತಾಯಿಸಿದರು.
Advertisement
ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್, ಮುಸ್ಲಿಂ ಧರ್ಮಗುರುಗಳು ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಮನವಿ ಸಲ್ಲಿಸಿದ್ದು, ಸಿಎಂ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Advertisement