ಮೈಸೂರು: ಮುಂದಿನ ವರ್ಷವೂ ನಾನೇ ಯಾಕೆ ಪುಷ್ಪಾರ್ಚನೆ ಮಾಡಬಾರದು? ಹೋಪ್ ಸೋ ನಾನು ಮಾಡಬಹುದು. ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪುನರಾಚ್ಚರಿಸಿದ್ದಾರೆ.
ನವೆಂಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂಬ ವಿಪಕ್ಷಗಳ ಮಾತಿಗೆ ಪ್ರತಿಕ್ರಿಯಿಸಿದ ಅವರು, ಎರಡನೇ ಬಾರಿ ಸಿಎಂ ಆಗಲ್ಲ ಅಂದಿದ್ದರು. ನಾನು ಸಿಎಂ ಆಗಲಿಲ್ವಾ? ಬಹಳ ಜನ ಬಹಳಷ್ಟು ಹೇಳುತ್ತಾರೆ, ಹೇಳಲಿ. ನವೆಂಬರ್‌ನಲ್ಲಿ ಸರ್ಕಾರಕ್ಕೆ ಎರಡು ವರ್ಷ ತುಂಬುವ ಕಾರಣ ಆ ರೀತಿ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರವಾಗಿದೆ: ಸಿದ್ದರಾಮಯ್ಯ
ಹೈಕಮಾಂಡ್ (High Command) ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಮತ್ತು ಅವರು ಹೇಳಿದಂತೆ ಕೇಳಬೇಕು. ಬಿಜೆಪಿಗೆ ವಸ್ತು ಸ್ಥಿತಿ ಗೊತ್ತಿಲ್ಲ. ಅವರು ಹೇಳಿದ ಏನು ನಡೆಯುವುದಿಲ್ಲ. ಬಿಜೆಪಿಯವರು ಬಿಜೆಪಿ ಹೇಳಿದ್ದೆಲ್ಲಾ ಸುಳ್ಳಾಗಿದೆ ಎಂದು ಹೇಳಿದರು.