ಮುಂಬೈ: ಲೋಕಸಭಾ (Lok Sabha Election) ಟಿಕೆಟ್ ನೀಡಲು ಹೈಕಮಾಂಡ್ (High Command) ನಾಯಕರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಮಿಲಿಂದ್ ದಿಯೋರಾ (Milind Deora) ಅವರು ಕಾಂಗ್ರೆಸ್‌ಗೆ (Congress) ಗುಡ್‌ಬೈ ಹೇಳಿದ್ದರೆ ಎನ್ನಲಾಗುತ್ತಿದೆ.
ಮಿಲಿಂದ್ ದಿಯೋರಾ ಅವರ ತಂದೆ ಮುರಳಿ ದಿಯೋರಾ (Murli Deora) ಹಲವು ಬಾರಿ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 2004 ಮತ್ತು 2009 ರಲ್ಲಿ ಮಿಲಿಂದ್ ಜಯಗಳಿಸಿದ್ದರೆ 2014, 2019ರಲ್ಲಿ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್ ದಿಯೋರಾ
Advertisement
Advertisement
ಎರಡೂ ಚುನಾವಣೆಯಲ್ಲಿ ಮಿಲಿಂದ್ ಅವರನ್ನು ಸೋಲಿಸಿದ್ದ ಅವಿಭಜಿತ ಶಿವಸೇನೆಯ ಅರವಿಂದ್ ಸಾವಂತ್ ಹಾಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಈ ಬಾರಿಯೂ ತಾನೇ ಸ್ಪರ್ಧಿಸುವುದಾಗಿ ಉದ್ಧವ್ ಬಣ ಈಗಾಗಲೇ ಘೋಷಿಸಿದ್ದು ಇದನ್ನು ಮಹಾ ಅಘಾಡಿ ಮೈತ್ರಿಕೂಟದ ಸದಸ್ಯ ಪಕ್ಷ ಕಾಂಗ್ರೆಸ್ ಒಪ್ಪಿಕೊಂಡಿದೆ.
Advertisement
ಹಲವು ಬಾರಿ ರಾಹುಲ್ ಜೊತೆ ನೇರವಾಗಿ ಮಿಲಿಂದ್ ಈ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಕೇಳಿದ್ದರು. ಆದರೆ ರಾಹುಲ್ ಗಾಂಧಿಯಿಂದ ಸರಿಯಾದ ಪ್ರತಿಕ್ರಿಯೆ ಬಂದಿರಲಿಲ್ಲ. ತನಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಮಿಲಿಂದ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಕಾಂಗ್ರೆಸ್ ನಾಯಕರು ಮೋದಿ ನೇತೃತ್ವದ ಸರ್ಕಾರದ ನಿರ್ಧಾರಗಳನ್ನು ಟೀಕಿಸಿದ್ದರೂ ಮಿಲಿಂದ್ ಅವರು ಹಲವು ಮೋದಿ ಸರ್ಕಾರವನ್ನು ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: ಮೇಯರ್ ಚುನಾವಣೆ : ಮಾಲ್ಡೀವ್ಸ್ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ
Advertisement
I am honored and deeply grateful for my well-wishers and supporters.
As I begin a new political journey under the leadership of @mieknathshinde Ji in @Shivsenaofc, I remain committed to working diligently towards the development of Mumbai and Maharashtra, contributing to India’s… pic.twitter.com/ianU4LdBnt
— Milind Deora | मिलिंद देवरा ☮️ (@milinddeora) January 14, 2024
2019ರ ಚುನಾವಣೆಯಲ್ಲಿ ಮಿಲಿಂದ್ 1,00,067 ಮತಗಳ ಅಂತರದಿಂದ ಸೋತಿದ್ದರು. ಅರವಿಂದ್ ಸಾವಂತ್ ಅವರು 4,21,937 ಮತಗಳನ್ನು ಪಡೆದರೆ ಮಿಲಿಂದ್ 3,21,870 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಅಭ್ಯರ್ಥಿಯನ್ನು ಹಾಕಿರಲಿಲ್ಲ.