ಮಂಗಳೂರು: ಕರಾವಳಿಯಲ್ಲಿ ಪದೇ ಪದೇ ಶಾಂತಿ ಕದಡಲು ಪೊಲೀಸ್ ಇಲಾಖೆಯಲ್ಲಿನ ಹಸ್ತಕ್ಷೇಪವೇ ಮುಖ್ಯ ಕಾರಣ ಎನ್ನುವ ಸ್ಫೋಟಕ ಮಾಹಿತಿ ಈಗ ಲಭ್ಯವಾಗಿದೆ.
ಆಗಾಗ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿರುವುದಿಂದ ದಕ್ಷಿಣ ಕನ್ನಡದಲ್ಲಿ ಶಾಂತಿ ಕಾಪಾಡಲು ಅಡ್ಡಿಯಾಗುತ್ತಿದೆ ಎಂದು ಪೊಲೀಸ್ ಇಲಾಖೆಯಲ್ಲಿನ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಖಡಕ್ ಅಧಿಕಾರಿಗಳ ಎತ್ತಂಗಡಿಗೆ ರೈ ಅವರು ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿ ವರ್ಗಾವಣೆ ಮಾಡಿಸುತ್ತಿದ್ದಾರೆ. ಇದರಿಂದಾಗಿ ಕರಾವಳಿಯಲ್ಲಿ ಗೃಹ ಇಲಾಖೆ ಪದೇ ಪದೇ ವೈಫಲ್ಯಗೊಳ್ಳುತ್ತಿದೆ. ಇದನ್ನು ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ
Advertisement
ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಅವರ ವರ್ಗಾವಣೆ ಹಿಂದೆಯೂ ರಮಾನಾಥ ರೈ ಅವರ ಹಸ್ತಕ್ಷೇಪ ಇದೆ ಎಂಬ ಆರೋಪ ಕೇಳಿ ಬಂದಿದೆ. 2017ರ ಜೂನ್ 22 ರಂದು ಅಧಿಕಾರ ಸ್ವೀಕರಿಸಿದ್ದ ಸುಧೀರ್ ಅವರು ಗುರುವಾರ(ಇಂದು) ಮಂಗಳೂರಿನಿಂದ ವರ್ಗಾವಣೆಯಾಗಿ ದಾವಣಗೆರೆ ಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕಾಗಿತ್ತು. ಆದರೆ ಜಿಲ್ಲೆಯಲ್ಲಿ ಈಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವುದರಿಂದ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಅವರು ಎಸ್‍ಪಿಯಾಗಿ ಮುಂದುವರಿಯುತ್ತಿದ್ದಾರೆ. ಇದನ್ನು ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್
Advertisement
Advertisement
ಈ ಹಿಂದೆ ಶರತ್ ಮಡಿವಾಳ ಪ್ರಕರಣದ ವೇಳೆ ದಕ್ಷಿಣ ಕನ್ನಡ ಎಸ್‍ಪಿ ಆಗಿದ್ದ ಭೂಷಣ್ ರಾವ್ ಬೋರಸೆ ಅವರಿಗೆ ರಮಾನಾಥ ರೈ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಕೆಲ ದಿನಗಳಲ್ಲಿ ಭೂಷಣ್ ಅವರು ವರ್ಗಾಣೆಯಾಗಿದ್ದು ರಮಾನಾಥ ರೈ ಮೇಲಿನ ಈ ಆರೋಪಗಳಿಗೆ ಪುಷ್ಠಿ ನೀಡುವಂತಿದೆ. ಇದನ್ನು ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ
ಇದನ್ನು ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ
https://www.youtube.com/watch?v=vgcT2xFaQgU