ನವದೆಹಲಿ: ಜಪಾನ್ ಪ್ರಧಾನಿ ಅಬೆ ಜೊತೆಗಿನ ಎರಡು ದಿನಗಳ ಭಾರತದ ಭೇಟಿಯನ್ನು ಮೋದಿ ಸರ್ಕಾರವು ತನ್ನ ರಾಜಕೀಯ ಲಾಭವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪಕ್ಷದ ಮುಖಂಡ ಮನೀಷ್ ತಿವಾರಿ ಪ್ರತಿಕ್ರಿಯಿಸಿ, ಯಾವುದೇ ಪ್ರತಿಷ್ಟಿತ ದೇಶದ ಪ್ರಧಾನಿಗಳು ದೇಶಕ್ಕೆ ಆಗಮಿಸಿದರೆ ಅವರಿಗೆ ದೆಹಲಿಯಲ್ಲಿ ಅತಿಥ್ಯವನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಗುಜರಾತ್ ನಲ್ಲಿ ರಾಜಾತಿಥ್ಯ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
Advertisement
ಜಪಾನ್ ಪ್ರಧಾನಿ ಅವರು ಗುಜರಾತ್‍ಗೆ ಭೇಟಿ ನೀಡಿದ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಅದರೆ ಮುಂದಿನ ದಿನಗಳಲ್ಲಿ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ದೇಶದ ಪ್ರಧಾನಿಗಳ ಜೊತೆ ರೋಡ್ ಶೋ ನಡೆಸುವ ಅಗತ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದರು.
Advertisement
ಬಿಜೆಪಿಯ ಈ ನಡೆಯು ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶವನ್ನು ಹೊಂದಿರುವುದಿಲ್ಲ ಎಂದು ಆಶಿಸುತ್ತೇವೆ. ಜಪಾನ್ ಹಾಗೂ ಭಾರತದ ನಡುವೆ ಹಲವು ವರ್ಷಗಳಿಂದಲೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದು, ಹಲವು ಬಾರಿ ಜಪಾನ್ ನಮಗೇ ಸಹಾಯದ ಹಸ್ತವನ್ನು ಚಾಚಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವೇಳೆಯಲ್ಲೂ ಉತ್ತಮ ಸಂಬಂಧಗಳನ್ನು ಏರ್ಪಡಿಸಲಾಗಿತ್ತು ಎಂದು ಮನೀಷ್ ತಿವಾರಿ ತಿಳಿಸಿದರು.
Advertisement
ರೋಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ವಿಚಾರದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಟೀಕೆ ಭಾರತ ಒಳಗಾಗಬೇಕಾಯಿತು. ಸರ್ಕಾರದ ಈ ನಡೆಯು ಭಾರತೀಯ ಸಂಸ್ಕೃತಿಗೆ ಸಂಪೂರ್ಣ ವಿರುದ್ಧವಾಗಿದ್ದು. ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಏರ್ಪಡಿಸಲು ಈ ಕ್ರಮಗಳು ಋಣಾತ್ಮಾಕ ಪರಿಣಾಮಗಳನ್ನು ಬೀರುತ್ತದೆ. ಭಾರತವು ಎಂದು ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದರು.
Advertisement
ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ತಮ್ಮ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಭಾರತ-ಜಪಾನ್ ಸಹಕಾರದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಅಹಮದಾಬಾದ್ ನಲ್ಲಿ ಶಂಕುಸ್ಥಾಪನೆ ಮಾಡಿದರು.
The people of Ahmedabad extended a very warm welcome to PM @AbeShinzo. pic.twitter.com/00nBEyV34l
— Narendra Modi (@narendramodi) September 13, 2017
With PM @AbeShinzo at the 'Sidi Saiyyid Ni Jaali’ in Ahmedabad. pic.twitter.com/np0F5KTUdm
— Narendra Modi (@narendramodi) September 13, 2017
Had the honour of taking Mrs. Abe and PM @AbeShinzo to the Sabarmati Ashram & showing them this iconic place. pic.twitter.com/RFsFA8KpHg
— Narendra Modi (@narendramodi) September 13, 2017
The India Cultural Road Show gave PM @AbeShinzo glimpses of the rich and diverse Indian culture that we are all extremely proud of. pic.twitter.com/IN7Z34zZXQ
— Narendra Modi (@narendramodi) September 13, 2017
Welcomed Mrs. Abe and PM @AbeShinzo to India. #SwagatShinzoSan pic.twitter.com/FsxEGwp01V
— Narendra Modi (@narendramodi) September 13, 2017
As India welcomes PM @AbeShinzo, I thank him for his kind words on the robust India-Japan partnership and the strong potential of our ties. pic.twitter.com/TdnISF8E62
— Narendra Modi (@narendramodi) September 13, 2017