ಲಂಡನ್: ಹಲಸಿನ ಹಣ್ಣು ಎಂದರೆ ಹಲವು ಜನರಿಗೆ ಬಾಯಲ್ಲಿ ನೀರು ಬರುತ್ತೆ. ಈ ಹಣ್ಣಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಹೆಚ್ಚು ಬೇಡಿಕೆ ಇದೆ ಎಂಬುದಕ್ಕೆ ಇದೇ ಒಂದು ದೊಡ್ಡ ಉದಾಹರಣೆಯಾಗಿದೆ.
Advertisement
ಗ್ರಾಹಕರೊಬ್ಬರು ಟ್ವಿಟ್ಟರ್ ನಲ್ಲಿ ಹಲಸಿನ ಹಣ್ಣಿಗೆ ಲಂಡನ್ ನಲ್ಲಿ ಎಷ್ಟು ಬೆಲೆ ಇದೆ ಎಂಬ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಸಖತ್ ವೈರಲ್ ಆಗಿದೆ. ಈ ಫೋಟೋವನ್ನು ಹಲವು ಜನರು ಶೇರ್ ಮಾಡಿಕೊಂಡಿದ್ದಾರೆ. ಲಂಡನ್‍ನ ಅತಿ ದೊಡ್ಡ ಮತ್ತು ಹಳೆಯ ಮಾರುಕಟ್ಟೆಯಾದ ಬರೋ ಮಾರುಕಟ್ಟೆಯಲ್ಲಿ, ಒಂದು ಹಲಸು ಸುಮಾರು 16,000 ರೂಪಾಯಿಗಳಿಗೆ(160 ಪೌಂಡ್‍ಗಳು) ಮಾರಾಟವಾಗುತ್ತಿತ್ತು. ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ
Advertisement
1000 reais a jaca pic.twitter.com/oYDnOUKMvR
— Ricardo Senra (@ricksenra) February 12, 2022
Advertisement
ಟ್ವಿಟ್ಟರ್ ನಲ್ಲಿ, ಹಲಸು ಮಾರುವವರು ಬ್ರಿಟನ್‍ಗೆ ಬಂದ್ರೆ ‘ಮಿಲಿಯನೇರ್’ ಆಗುತ್ತಾನೆ ಎಂದು ಕೆಲವರು ಲೇವಡಿ ಮಾಡಿದರು. ಅಂದಹಾಗೆ, ಬ್ರೆಜಿಲ್‍ನ ಹಲವು ಪ್ರದೇಶಗಳಲ್ಲಿ ತಾಜಾ ಹಲಸು 82 ರೂಪಾಯಿಗೆ ಲಭ್ಯವಿದೆ. ಕೆಲವೊಮ್ಮೆ ಹಲಸು ರಸ್ತೆಯಲ್ಲೇ ಕೊಳೆತು ನಾರುತ್ತಿರುವ ದೃಶ್ಯವೂ ಕಂಡುಬರುತ್ತೆ. ಅಲ್ಲದೆ ಹಲಸಿನ ಬೆಲೆ ಇತರ ದೇಶಗಳಿಯೂ ಕಡಿಮೆ ಇದೆ. ಆದರೆ ಇಂದು ಹಲಸಿನ ಬೆಲೆ ಕೇಳಿದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
Advertisement
ಹೀಗಿರುವಾಗ ಹಲಸಿನ ಹಣ್ಣಿನ ಬೆಲೆ ಇಷ್ಟೊಂದು ಏರಿಕೆಯಾಗಿದ್ದು ಹೇಗೆ? ಎಂಬ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸರಳವಾಗಿ ಹೇಳಬೇಕಾದರೆ, ಸರಕುಗಳ ಬೇಡಿಕೆಯು ಅದರ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಬೇಡಿಕೆ ಹೆಚ್ಚು ಇದ್ರೆ ಹಣ ಸಹ ಹೆಚ್ಚಿರುತ್ತೆ. ಅದೇ ರೀತಿ ಇಲ್ಲಿ ಹಲಸಿನ ಬೇಡಿಕೆ ಹೆಚ್ಚಿದೆ. ಪರಿಣಾಮ ಈ ಬೆಲೆ ಇದೆ. ಇದನ್ನೂ ಓದಿ: ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!
ಅದರಲ್ಲಿಯೂ ಬ್ರಿಟನ್ ನಂತಹ ಶೀತ ದೇಶಗಳಲ್ಲಿ ಹಲಸಿನ ಹಣ್ಣನ್ನು ಬೆಳೆಯುವಂತಿಲ್ಲ. ಹಲಸಿನ ಹಣ್ಣಿನ ಅಂತರಾಷ್ಟ್ರೀಯ ವ್ಯಾಪಾರವು ತುಂಬಾ ಸಂಕೀರ್ಣ ಮತ್ತು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆ ಲಂಡನ್ ನಲ್ಲಿ ಹಲಸಿಗೆ ಬೇಡಿಕೆ ಹೆಚ್ಚು. ಈ ಹಣ್ಣನ್ನು ಹೆಚ್ಚು ದಿನ ಇಟ್ಟುಕೊಳ್ಳುವಂತಿಲ್ಲ ಎಂದು ಸಹ ಇಲ್ಲಿ ನಿಯಮವಿದೆ.