ದುಬೈ: ಏಷ್ಯಾಕಪ್ ಆರಂಭವಾದ ಚೊಚ್ಚಲ ಆವೃತ್ತಿಯಲ್ಲೇ ಭಾರತ ಕಪ್ ಗೆದ್ದು ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿತ್ತು. ಆದರೆ ಶ್ರೀಲಂಕಾದಲ್ಲಿ ನಡೆದ ಎರಡನೇ ಆವೃತ್ತಿ ಏಷ್ಯಾಕಪ್‍ನಿಂದ ಭಾರತ ಹಿಂದೆ ಸರಿದಿತ್ತು. ಇದಕ್ಕೆ ಬಲವಾದ ಕಾರಣವಿತ್ತು.
Advertisement
ಹೌದು ಏಷ್ಯಾದ ತಂಡಗಳಿಗಾಗಿ ಏಷ್ಯಾಕಪ್ ಆಯೋಜನೆ ಮಾಡಲು ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿತ್ತು. 1984ರಲ್ಲಿ ಮೊದಲ ಆವೃತ್ತಿ ಆರಂಭಿಸಲಾಯಿತು. ಮೊದಲ ಆವೃತ್ತಿಯಲ್ಲಿ ಒಟ್ಟು ಮೂರು ತಂಡಗಳು ಭಾಗವಹಿಸಿದ್ದವು. ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ರನ್ನರ್ ಅಪ್ ಆಯಿತು. 1986ರಲ್ಲಿ ಎರಡನೇ ಆವೃತ್ತಿ ಏಷ್ಯಾಕಪ್ ಆಯೋಜನೆಗೆ ಶ್ರೀಲಂಕಾ ಮುಂದಾಯಿತು. ಈ ವೇಳೆ ಶ್ರೀಲಂಕಾದಲ್ಲಿ ಎಲ್‍ಟಿಟಿ ಸಂಘಟನೆಯ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿತ್ತು. ಭಾರತ ದೇಶ ಕೂಡ ಈ ಬಗ್ಗೆ ಧ್ವನಿ ಎತ್ತಿತ್ತು. ಹಾಗಾಗಿ ಶ್ರೀಲಂಕಾದಲ್ಲಿ ನಡೆದ ಎರಡನೇ ಆವೃತ್ತಿ ಏಷ್ಯಾಕಪ್‍ನಿಂದ ಭಾರತ ಹಿಂದೆ ಸರಿಯಲು ತೀರ್ಮಾನಿಸಿತ್ತು. ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನಡುವಿನ ಮಾತುಕತೆ ಮುರಿದು ಬಿದ್ದು ಕೊನೆಗೆ ಭಾರತ ಏಷ್ಯಾಕಪ್ ಆಡದಿರಲು ತೀರ್ಮಾನಿಸಿತ್ತು. ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್ ಪುತ್ರಿಯ ಜೊತೆ ಶುಭಮನ್ ಗಿಲ್ ಲವ್ ಬ್ರೇಕ್ ಅಪ್
Advertisement
Advertisement
ಆ ಬಳಿಕ ನಡೆದ 1988, 1990/91, 1995 ಹೀಗೆ ಮೂರು ವರ್ಷ ಸತತ ಏಷ್ಯಾಕಪ್‍ನಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತ ಮತ್ತೆ ಹ್ಯಾಟ್ರಿಕ್ ಮಾಡಿತು. ಆ ಬಳಿಕ 2016 ಮತ್ತು 2018 ರಲ್ಲಿ ಚಾಂಪಿಯನ್ ಆಗಿರುವ ಭಾರತ ಇದೀಗ 15ನೇ ಆವೃತ್ತಿಯಲ್ಲಿ ಮತ್ತೆ ಕಪ್ ಗೆದ್ದರೆ, ಮತ್ತೊಮ್ಮೆ ಹ್ಯಾಟ್ರಿಕ್ ಸಾಧನೆ ಮಾಡಲಿದೆ. ಇದನ್ನೂ ಓದಿ: ಏಷ್ಯಾಕಪ್‍ನಲ್ಲಿ ಬದ್ಧ ವೈರಿಗಳ ಕಾದಾಟ – 14 ಬಾರಿ ಮುಖಾಮುಖಿ, ಯಾರಿಗೆ ಮೇಲುಗೈ?
Advertisement
ಪ್ರಶಸ್ತಿ ಪಟ್ಟಿ:
1984ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ರನ್ನರ್ ಅಪ್ ಆಯಿತು.
1986ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಶ್ರೀಲಂಕಾ ಚಾಂಪಿಯನ್, ಪಾಕಿಸ್ತಾನ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
ಆ ಬಳಿಕ 1988, 1990/91 ಮತ್ತು 1995ರಲ್ಲಿ ಸತತ ಮೂರು ವರ್ಷ ಭಾರತ ಚಾಂಪಿಯನ್ ಆಗಿ ಕಪ್ ಗೆದ್ದರೆ, ಶ್ರೀಲಂಕಾ ರನ್ನರ್ ಅಪ್ ಸ್ಥಾನ ಪಡೆದು ಮಿಂಚಿತು.
1997ರಲ್ಲಿ ಶ್ರೀಲಂಕಾ ಏಷ್ಯಾಕಪ್ ಗೆದ್ದರೆ, ಭಾರತ ರನ್ನರ್ ಅಪ್ ಆಯಿತು.
2000ದಲ್ಲಿ ಪಾಕಿಸ್ತಾನ ಕಪ್ ಗೆದ್ದರೆ, ಶ್ರೀಲಂಕಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
2004ರಲ್ಲಿ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಭಾರತ ರನ್ನರ್ ಅಪ್ ಆಗಿತ್ತು.
2008ರಲ್ಲಿ ಮತ್ತೆ ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್
2010 ಇದು ಬದಲಾಯಿತು. ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ರನ್ನರ್ ಅಪ್ ಸ್ಥಾನ ಪಡೆಯಿತು.
2012ರಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದರೆ, ಬಾಂಗ್ಲಾದೇಶ ರನ್ನರ್ ಅಪ್ ಆಗಿ ಹೊರಹೊಮ್ಮಿತು.
2014ರಲ್ಲಿ ಶ್ರೀಲಂಕಾ ಚಾಂಪಿಯನ್, ಪಾಕಿಸ್ತಾನ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
2016 ಮತ್ತು 2018ರಲ್ಲಿ ಭಾರತ ಪ್ರಶಸ್ತಿಗೆ ಮುತ್ತಿಕ್ಕಿದರೆ, ಬಾಂಗ್ಲಾದೇಶ ರನ್ನರ್ ಅಪ್ ಆಯಿತು.
ಇದೀಗ 15ನೇ ಆವೃತ್ತಿ ಏಷ್ಯಾಕಪ್‍ಗಾಗಿ ಯನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವೇದಿಕೆ ಸಜ್ಜಾಗಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಈಗಾಗಲೇ ನೇರ ಅವಕಾಶ ಪಡೆದಿದೆ. ಹಾಂಕಾಂಗ್, ಸಿಂಗಾಪುರ್, ಕುವೈತ್ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿನಲ್ಲಿ ತೇರ್ಗಡೆಗೊಂಡು 6ನೇ ತಂಡವಾಗಿ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಬೇಕಾಗಿದೆ. ಟೂರ್ನಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರ ವರೆಗೆ ನಡೆಯಲಿದೆ. ಆಗಸ್ಟ್ 28 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ.