ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ನಡುವೆ ಪ್ರೀತಿ ಗೀತಿ ಇತ್ಯಾದಿ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಬ್ಬರೂ ಅದೆಷ್ಟೋ ಬಾರಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಗಳಿಗೆ ಆಹಾರವಾಗಿದ್ದಾರೆ. ಆದರೆ, ಸಾರಾ ಮತ್ತು ಶುಭಮನ್ ಬಾಂಧವ್ಯ ಚೆನ್ನಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.
Advertisement
ಟೀಮ್ ಇಂಡಿಯಾದ ಪ್ರಭಾವಿ ಕ್ರಿಕೆಟಿಗ, ಸ್ಟಾರ್ ಓಪನರ್ ಎಂದೇ ಖ್ಯಾತರಾಗಿರುವ ಶುಭಮನ್ ಗಿಲ್ ಮತ್ತು ತೆಂಡೂಲ್ಕರ್ ಪುತ್ರಿ ಸಾರಾ ಇಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದರು ಎನ್ನುವುದು ಜಗಜ್ಜಾಹೀರು. ಆದರೂ, ಇಬ್ಬರೂ ಈ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಂತ ಅದು ಕೇವಲ ಗಾಸಿಪ್ ಕೂಡ ಆಗಿರಲಿಲ್ಲ. ಇಬ್ಬರೂ ಪ್ರೀತಿಸುತ್ತಿರುವ ವಿಚಾರ ಕ್ರಿಕೆಟ್ ತಂಡದ ಬಹುತೇಕರಿಗೆ ಗೊತ್ತಿತ್ತು. ಇದೀಗ ಆ ಪ್ರೀತಿ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ
Advertisement
Advertisement
ಲವ್ ಬ್ರೇಕ್ ಅಪ್ ನಂತರ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಈ ಜೋಡಿ ಆಗಾಗ್ಗೆ ಅಭಿನಂದನೆಗಳನ್ನು ಮತ್ತು ಶುಭಾಶಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ವಿನಿಮಯ ಮಾಡಿಕೊಂಡಿದಿದೆ. ಇದೀಗ ಇಬ್ಬರೂ ಅನ್ ಫಾಲೋ ಮಾಡುವ ಮೂಲಕ ಅನುಮಾನ ಹುಟ್ಟು ಹಾಕಿದ್ದಾರೆ.