ಬೆಂಗಳೂರು: ರಾಜಕೀಯದಲ್ಲಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅನ್ನೋದಿಕ್ಕೆ ಬಿಎಸ್ ಯಡಿಯೂರಪ್ಪ ತಾಜಾ ಉದಾಹರಣೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶನಿವಾರ ನಗರದ ಪುರಭವನದಲ್ಲಿ ಬಸವ ಕ್ರಾಂತಿ ವೇದಿಕೆ ವತಿಯಿಂದ ನಡೆದ ಬಸವಣ್ಣನವರ ಹಾದಿಯಲ್ಲಿ ಜನನಾಯಕರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಅವರ ಹಿಂದೆ ಇದ್ದೀವಿ ಅಂತಾ ಹೇಳಿದ್ರು.
Advertisement
Advertisement
ಇಂದ್ರಜಿತ್ ರಾಜಕೀಯಕ್ಕೆ ಎಂಟ್ರಿ?: ಪಿ.ಲಂಕೇಶ್ ಪುತ್ರ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ರಾಜಕೀಯ ಪ್ರವೇಶ ಮಾಡ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಶನಿವಾರ ಅವರಾಡಿದ ಮಾತುಗಳು ರಾಜಕೀಯ ಪ್ರವೇಶದ ಆಸೆಯನ್ನು ಬಹಿರಂಗೊಳಿಸಿದೆ.
Advertisement
ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಹಾಡಿಹೊಗಳಿದರು. ಇದೇ ಹೊತ್ತಲ್ಲಿ ನಿಮ್ಮ ಹಿಂಬಾಲಕನಾಗಿ ಇರುತ್ತೇನೆ, ನಿಮ್ಮ ಆರ್ಶೀವಾದ ಬೇಕು ಎಂದು ವೇದಿಕೆಯಲ್ಲಿ ಬಿಎಸ್‍ವೈ ಜೊತೆ ಮನವಿ ಮಾಡಿದರು.