ಚಾಮರಾಜನಗರ: ಅಂಟಿರುವ ಮೌಢ್ಯವನ್ನು ಹೋಗಲಾಡಿಸಲು ನಾನು ಪದೇ ಪದೇ ಚಾಮರಾಜನಗರಕ್ಕೆ ಬರುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ತಾಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ, ನಾನು ಇಲ್ಲಿ 7 ಬಾರಿ ಬಂದಿರುವುದು ಇಲ್ಲಿನ ಮೌಢ್ಯವನ್ನು ತಡೆಯಲು ಎಂದು ಹೇಳಿದರು.
Advertisement
ನಾನು ಇಲ್ಲಿಗೆ ಬರುತ್ತಿರುವುದರಿಂದ ಈ ಜಿಲ್ಲೆಯ ನಗರದ ಮೌಢ್ಯ ಅಳಿಸಿ ಹೋಗಿದೆ. ಅಷ್ಟೇ ಅಲ್ಲದೇ ನನ್ನ ಕುರ್ಚಿಯೂ ಸಹ ಗಟ್ಟಿಯಾಗಿದೆ ಎಂದು ಚಾಮರಾಜನಗರಕ್ಕಿರುವ ಅಪನಂಬಿಕೆ ವಿರುದ್ಧ ಸಿಎಂ ಧ್ವನಿ ಎತ್ತಿದರು.
Advertisement
ವೀರಶೈವ ಲಿಂಗಾಯಿತ ಧರ್ಮದ ವಿಚಾರದಲ್ಲಿ ಸರ್ಕಾರದ ನಿಲುವು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ವೀರಶೈವ ಲಿಂಗಾಯಿತ ಧರ್ಮದ ವಿಚಾರದಲ್ಲಿ ಸರ್ಕಾರದ ಯಾವುದೇ ನಿಲುವು ಇಲ್ಲ. ಆದರೆ ಇದನ್ನು ನಾನೂ ಹುಟ್ಟಿ ಹಾಕಿದ್ದು ಎಂದು ಬಿಂಬಿಸಲಾಗುತ್ತಿದೆ. ಆದರೆ ಈ ವಿಚಾರವನ್ನ ನಾನೂ ಹುಟ್ಟಾಕಿದ್ದಲ್ಲ. ಇದರಲ್ಲಿ ನನ್ನ ಪಾತ್ರ ಮತ್ತು ನಿಲುವು ಏನು ಇಲ್ಲ. ಮಾತೇ ಮಹದೇವಿ ಮತ್ತು ಶಾಮನೂರು ಶಿವಶಂಕರಪ್ಪ ಪತ್ರ ಬರೆದಿದ್ದರು ಅಷ್ಟೆ ಎಂದರು.
Advertisement
ತಮಿಳುನಾಡಿಗೆ ಕಬಿನಿ ನೀರು ಬಿಟ್ಟಿರುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ನಾಲ್ಕು ಜಲಾಶಯಗಳಲ್ಲಿ 40 ಟಿ ಎಂಸಿ ಯಷ್ಟು ನೀರಿದೆ. ನೀರು ಬಿಡದೇ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಹಾಗಾಗಿ ಕಾವೇರಿ ನ್ಯಾಯಾಧಿಕರಣದ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಅದೇ ರೀತಿ ನಮ್ಮ ರೈತರಿಗೂ ಇಂದಿನಿಂದ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.
Advertisement
ಚಾಮರಾಜನಗರ ಪಟ್ಟಣದಲ್ಲಿ ರೂ.35 ಕೋಟಿ ವೆಚ್ಚದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ pic.twitter.com/qVIM2Urzvf
— CM of Karnataka (@CMofKarnataka) August 10, 2017
ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದೆ pic.twitter.com/n9T6aOiox2
— CM of Karnataka (@CMofKarnataka) August 10, 2017