ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರ ‘ಪುಷ್ಪ 2’ ಸಿನಿಮಾ ಇದೇ ಡಿ.5ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಹೀಗಿರುವಾಗ ತಾವು ಹಿಂದಿ (Bollywood) ಸಿನಿಮಾ ಯಾಕೆ ಮಾಡಲಿಲ್ಲ ಎಂಬ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಹಿಂದಿ ಸಿನಿಮಾ ಮಾಡುವುದು ಒಂದು ದೊಡ್ಡ ವಿಚಾರ. ನಾವು ನಮ್ಮ ಇಡೀ ಬದುಕಿನಲ್ಲಿ ಅಬ್ಬಬ್ಬಾ ಎಂದರೆ ಒಂದು ಅಥವಾ ಎರಡು ಹಿಂದಿ ಸಿನಿಮಾಗಳನ್ನು ಮಾಡಬಹುದು. ನನಗೆ ಹಿಂದಿ ಸಿನಿಮಾ ಮಾಡುವುದು ಎಂದರೆ ತುಂಬಾನೇ ದೂರದ ವಿಷಯ ಎನಿಸುತ್ತದೆ. ಆ ಒಂದು ಮನಸ್ಥಿತಿಯಲ್ಲಿ ನಾನು ಇಲ್ಲ. ಸದ್ಯ ನಾನು ‘ಪುಷ್ಪ’ ನಟನೆಗೆ ನ್ಯಾಷನಲ್ ಅವಾರ್ಡ್ ಅನ್ನು ಗೆದ್ದಿದ್ದೇನೆ. ಅದೇ ಸಿನಿಮಾಗೆ ಸೂಪರ್ ಹಿಟ್ ಆಲ್ಬಂ ಅನ್ನು ಕೂಡ ಕೊಟ್ಟಿದ್ದೇವೆ. ಇಂತಹ ವಿಷಯಗಳು ನಮಗೆ ವಿಶೇಷ ಎನಿಸುತ್ತವೆ. ಹಿಂದಿ ಸಿನಿಮಾದಲ್ಲಿ ನಟನೆ ಮಾಡಲು ನನಗೆ ಅಷ್ಟು ಆಸಕ್ತಿ ಇಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ಅಂದಹಾಗೆ, ‘ಪುಷ್ಪ 2’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇದರ ನಡುವೆ ‘ಪುಷ್ಪ 3’ (Pushpa 3) ಬರೋದಾಗಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಿಂಟ್ ಕೊಟ್ಟಿದ್ದಾರೆ.
ಇನ್ನೂ ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ, ಅನಸೂಯ, ಫಹಾದ್ ಫಾಸಿಲ್, ಶ್ರೀಲೀಲಾ (Sreeleela) ಸೇರಿದಂತೆ ಅನೇಕರು ನಟಿಸಿದ್ದಾರೆ.

