ಮುಂಬೈ: 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ (WTC) ಭಾರತದ ಸೋಲು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ನಡುವೆ ಕೃತಕ ಬುದ್ಧಿಮತ್ತೆ ಚಾಚ್‌ಜಿಪಿಟಿ (ChatGPT) ಐಸಿಸಿ ಟೂರ್ನಿಗಳಲ್ಲಿ (ICC Tournament) ಟೀಂ ಇಂಡಿಯಾ ಏಕೆ ವಿಫಲವಾಗುತ್ತಿದೆ ಎಂಬ ಅಂಶಗಳನ್ನ ಪಟ್ಟಿಮಾಡಿದೆ.
ಹೌದು. 2023ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ (Australia) ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಭಾರತದ ವಿರುದ್ಧ 209 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, T20 ವಿಶ್ವಕಪ್, ಚಾಂಪಿಯನ್ ಟ್ರೋಫಿ ಹಾಗೂ ಟೆಸ್ಟ್ ಚಾಂಪಿಯನ್ ಶಿಪ್ ಮೂರು ಫಾರ್ಮ್ಯಾಟ್‌ನಲ್ಲೂ ಚಾಂಪಿಯನ್ ಪಟ್ಟ ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ. ಭಾರತ ಸತತ 2ನೇ ಬಾರಿಯೂ ಸೋಲನುಭವಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದ್ರೆ ಭಾರತ ಐಸಿಸಿ ಟೂರ್ನಿಗಳಲ್ಲಿ ಏಕೆ ವಿಫಲವಾಗುತ್ತಿದೆ? ಹೋರಾಟದ ಹೊರತಾಗಿಯೂ ಏಕೆ ಇಷ್ಟೊಂದು ಸಮಸ್ಯೆ ಅನುಭವಿಸುತ್ತಿದೆ? ಎಂಬುದಕ್ಕೆ ಕೆಲವು ಅಂಶಗಳನ್ನ ಕೃತಕ ಬುದ್ಧಿಮತ್ತೆ ಚಾಚ್‌ಜಿಪಿಟಿ ಗುರುತಿಸಿದೆ.
Advertisement
Advertisement
ಹೆಚ್ಚಿನ ನಿರೀಕ್ಷೆ ಮತ್ತು ಒತ್ತಡ:
ದೇಶದಲ್ಲಿ ಕ್ರಿಕೆಟ್ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವುದರಿಂದ ತಂಡವು ಹೆಚ್ಚಿನ ನಿರೀಕ್ಷೆಯೊಂದಿಗೆ ಆಟವಾಡಲು ಕಣಕ್ಕಿಳಿಯುತ್ತದೆ. ಐಸಿಸಿ ಈವೆಂಟ್‌ಗಳಲ್ಲಿ ಉನ್ನತಮಟ್ಟದಲ್ಲಿ ಪ್ರದರ್ಶನ ನೀಡಬೇಕೆಂಬ ನಿರೀಕ್ಷೆಯೂ ಆಟಗಾರರ ಮನಸ್ಥಿತಿ ಮತ್ತು ಪ್ರರ್ದಶನದ ಮೇಲೆ ಪರಿಣಾಮ ಬೀರಬಹುದು. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್
Advertisement
Advertisement
ಸವಾಲಿನ ಪರಿಸ್ಥಿತಿಗಳು:
ಐಸಿಸಿ ಈವೆಂಟ್‌ಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಆದ್ದರಿಂದ ಪರಿಚಯವಿಲ್ಲದ ಪಿಚ್‌ಗಳು, ಬದಲಾದ ಹವಾಮಾನ ಪರಿಸ್ಥಿತಿಗೆ ಹೊಂದಿಕೊಂಡು ಆಡವಾಡುವುದು ಭಾರತ ತಂಡಕ್ಕೆ ಸವಾಲನ್ನು ಉಂಟುಮಾಡುತ್ತದೆ. ಇದನ್ನೂ ಓದಿ: WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ
ಅನುಭವದ ಕೊರತೆ:
ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಇತರ ತಂಡಗಳಿಗೆ ಹೋಲಿಸಿದರೆ ಯುವ ಅಥವಾ ಅನುಭವಿ ತಂಡವನ್ನು ಭಾರತ ಹೊಂದಿರುತ್ತದೆ. ಹೆಚ್ಚಿನ ಒತ್ತಡಗಳು ಇದ್ದಂತಹ ಸಂದರ್ಭದಲ್ಲಿ ಅನುಭವದ ಕೊರತೆಯೂ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.
ನಿರ್ಧಾರ ತಂತ್ರಗಾರಿಕೆ:
ಭಾರತ ತಂಡದ ಕಾರ್ಯತಂತ್ರಗಳು, ತಂಡದ ಆಯ್ಕೆ, ಕೋಚಿಂಗ್ ಸಿಬ್ಬಂದಿ ಹಾಗೂ ತಂಡದ ನಿರ್ವಹಣೆಯಿಂದ ರೂಪಿಸಲಾದ ನಿರ್ಧಾರಗಳೂ ಸಹ ಐಸಿಸಿ ಪ್ರಾಯೋಜಿತ ಟೂರ್ನಿ ಮೇಲೆ ಪರಿಣಾಮ ಉಂಟಾಗುತ್ತದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್
ಫಾರ್ಮ್ ಹಾಗೂ ಗಾಯದ ಸಮಸ್ಯೆ:
ಇತರ ತಂಡಗಳಂತೆ ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವು ಆಟಗಾರರ ಫಾರ್ಮ್ ಹಾಗೂ ಗಾಯದ ಸಮಸ್ಯೆಗಳ ಆಧಾರದ ಮೇಲೆ ಪ್ರಭಾವಿತವಾಗಿರುತ್ತೆ. ಪ್ರಮುಖ ಆಟಗಾರರು ಗಾಯದ ಸಮಸ್ಯೆಗಳಿಗೆ ತುತ್ತಾಗಿ ಹೊರಗುಳಿಯುವುದು ಹಾಗೂ ಫಾರ್ಮ್ ಕಳೆದುಕೊಳ್ಳುವುದು ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.
ಪ್ರಬಲ ಪೈಪೋಟಿ:
ಐಸಿಸಿ ಈವೆಂಟ್‌ಗಳಲ್ಲಿ ತಂಡಗಳು ಉತ್ತಮವಾಗಿರುವುದರಿಂದ ಪೈಪೋಟಿ ಸಹ ಪ್ರಬಲವಾಗಿಯೇ ಇರುತ್ತದೆ. ಭಾರತ ಸಹ ಕಠಿಣ ಸವಾಲುಗಳನ್ನು ಎದುರಿಸುತ್ತದೆ. ಉನ್ನತ ಮಟ್ಟದ ಸ್ಪರ್ಧೆಯು ಭಾರತ ಸೇರಿದಂತೆ ಯಾವುದೇ ತಂಡಕ್ಕೆ ಈ ಟೂರ್ನಿಗಲ್ಲಿ ಸತತವಾಗಿ ಮಿಂಚುವುದು (ಗೆಲುವು ಸಾಧಿಸುವುದು) ಸವಾಲಾಗಬಹುದು.