ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ (WTC Final) ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದ್ದಾರೆ. ರವೀಂದ್ರ ಜಡೇಜಾ (Ravindra Jadeja), ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್ ಕಮಾಲ್‌ನಿಂದಾಗಿ ಆಸ್ಟ್ರೇಲಿಯಾದ (Australia) ಟಾಪ್ ಬ್ಯಾಟ್ಸ್‌ಮ್ಯಾನ್‌ಗಳು ನೆಲ ಕಚ್ಚಿದ್ದಾರೆ. ಇದರ ಹೊರತಾಗಿಯೂ ಭಾರತ 296 ರನ್‌ಗಳ ಹಿನ್ನಡೆಯಲ್ಲಿದೆ.
2ನೇ ದಿನದ ಅಂತ್ಯಕ್ಕೆ 38 ಓವರ್‌ಗಳಲ್ಲಿ 151 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ 3ನೇ ದಿನ ಅಜಿಂಕ್ಯಾ ರಹಾನೆ ಹಾಗೂ ಆಲ್‌ರೌಂಡರ್ ಶಾರ್ದೂಲ್ ಬ್ಯಾಟಿಂಗ್ ನೆರವಿನಿಂದ 296 ರನ್ ಗಳಿಸುಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಆಸೀಸ್ ಮಾರಕ ಬೌಲಿಂಗ್‌ಗೆ ಟಾಪ್ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ
Advertisement
Advertisement
3ನೇ ದಿನದ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯಾ ರಹಾನೆ (Ajinkya Rahane) ಹಾಗೂ ಶ್ರೀಕಾರ್ ಭರತ್ ಜೋಡಿ ಉತ್ತಮ ರನ್ ಕಲೆಹಾಕುವಲ್ಲಿ ವಿಫಲವಾಯಿತು. ಭರತ್ 5 ರನ್ ಗಳಿಸಿ ಔಟಾದರು. ನಂತರ ಜೊತೆಗೂಡಿದ ಶಾರ್ದೂಲ್ ಠಾಕೂರ್ (Shardul Thakur) ಹಾಗೂ ರಹಾನೆ ಜೋಡಿ 7ನೇ ವಿಕೆಟ್‌ಗೆ 145 ಎಸೆತಗಳಲ್ಲಿ 109 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ರಹಾನೆ 89 ರನ್ (129 ಎಸೆತ, 11 ಬೌಂಡರಿ, 1 ಸಿಕ್ಸರ್), ಶಾರ್ದೂಲ್ ಠಾಕೂರ್ 51 ರನ್ (109 ಎಸೆತ, 6 ಬೌಂಡರಿ) ಗಳಿಸಿ ಔಟಾದರು. ಕೊನೆಯಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನವಿಲ್ಲದೇ ಭಾರತ 69.4 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು.
Advertisement
Advertisement
ಇನ್ನೂ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಟಾಪ್ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಜಡೇಜಾ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 3ನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 44 ಓವರ್‌ಗಳಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.
ಉಸ್ಮಾನ್ ಖವಾಜ 13 ರನ್, ಸ್ಟೀವ್ ಸ್ಮಿತ್ (Steve Smith) 34 ರನ್, ಟ್ರಾವಿಸ್ ಹೆಡ್ (Travis Head) 18 ರನ್ ಹಾಗೂ ಡೇವಿಡ್ ವಾರ್ನರ್ ಕೇವಲ 1 ರನ್ ಗಳಿಸಿ ಔಟಾದರು. ಮಾರ್ಕಸ್ ಲಾಬುಶೇನ್ 41 ರನ್ (118 ಎಸೆತ, 3 ಬೌಂಡರಿ), ಕ್ಯಾಮರೂನ್ ಗ್ರೀನ್ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಇದನ್ನೂ ಓದಿ: ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ
2ನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ 2 ಪ್ರಮುಖ ವಿಕೆಟ್ ಕಿತ್ತರೆ, ಸಿರಾಜ್ ಹಾಗೂ ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್ ಆಸ್ಟ್ರೇಲಿಯಾ – 469/10
ಮೊದಲ ಇನ್ನಿಂಗ್ಸ್ ಭಾರತ – 296/10