ಪ್ರಭಾಸ್ (Prabhas) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ‘ಸಲಾರ್’ ಚಿತ್ರದ ಗೆಲುವು. ಭರ್ತಿ 700 ಕೋಟಿಯನ್ನು ಗಳಿಸಿ ಮತ್ತೆ ಡಾರ್ಲಿಂಗ್ ಹೀರೋಗೆ ಆನೆ ಬಲ ನೀಡಿದೆ. ಮೂರು ಸೋಲಿನಿಂದ ಒದ್ದಾಡುತ್ತಿದ್ದ ಡಾರ್ಲಿಂಗ್ ಅದೇ ಖುಷಿಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎರಡು ತಿಂಗಳು ಯಾರಿಗೂ ಸಿಗಲ್ಲ ಎಂದು ಘೋಷಿಸಿದ್ದಾರೆ. ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್? 2 ತಿಂಗಳು ಏನು ಮಾಡಲಿದ್ದಾರೆ?
‘ಸಲಾರ್’ (Salaar) ಇದೊಂದು ಗೆಲುವು ಬೇಕಾಗಿತ್ತು. ಒಂದಲ್ಲ ಎರಡಲ್ಲ. ಭರ್ತಿ ನಾಲ್ಕೈದು ಸಿನಿಮಾ ಮಕಾಡೆ ಮಲಗಿದೆ. ಅಂದರೆ ಹೆಚ್ಚು ಕಮ್ಮಿ ಐದು ವರ್ಷ ಪ್ರಭಾಸ್‌ಗೆ ಗೆಲುವು ದಕ್ಕಿರಲಿಲ್ಲ. ಗೆಲುವನ್ನು ಪಕ್ಕಕ್ಕಿಡಿ. ಈ ಸಿನಿಮಾಗಳಿಂದ ಅವರು ಅತಿ ಹೆಚ್ಚು ಟೀಕೆ ಎದುರಿಸಬೇಕಾಯಿತು. ಹೀಗಾಗಿ ಪ್ರಶಾಂತ್ ನೀಲ್ (Prashanth Neel) ಮೇಲೆ ಭರವಸೆ ಇಟ್ಟಿದ್ದರು. ಕೊನೆಗೂ ನೀಲ್ ಕೈ ಬಿಡಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ನೀಲ್ ಮ್ಯಾಜಿಕ್ ಕೆಲಸ ಮಾಡಿತ್ತು. ಬರೋಬ್ಬರಿ 700 ಕೋಟಿಯನ್ನು ಗಳಿಸಿತು. ಹೊಂಬಾಳೆ ಸಂಸ್ಥೆ ಮೀಸೆ ತಿರುವಿತು. ಪ್ರಭಾಸ್ ಮೈ ಕೊಡವಿ ಎದ್ದು ನಿಂತರು. ಇದೇ ಖುಷಿಯಲ್ಲಿ ಯುರೋಪ್‌ಗೆ ಹಾರಲಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಸಮಂತಾ
ಚಿಕಿತ್ಸೆ ಸಿನಿಮಾ ಮಂದಿಗೆ ಇದು ಹೊಸದಲ್ಲ. ಶೂಟಿಂಗ್ ಸಮಯದಲ್ಲಿ ಯಾವ್ಯಾವುದೋ ಕಾರಣಕ್ಕೆ ಏಟು ಬಿದ್ದಿರುತ್ತವೆ. ಅದನ್ನು ಆ ಕ್ಷಣಕ್ಕೆ ಸರಿ ಮಾಡಿಕೊಂಡು ಮತ್ತೆ ಕ್ಯಾಮೆರಾ ಮುಂದೆ ನಿಂತಿರುತ್ತಾರೆ. ಆದರೆ ಅದು ಸಾಕಾಗಲ್ಲ. ಅದಕ್ಕೆ ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಬೇಕು. ಅದಕ್ಕಾಗಿಯೇ ಪ್ರಭಾಸ್ 2 ತಿಂಗಳು ವಿಶ್ರಾಂತಿ ತೆಗೆದುಕೊಂಡು ಬರಲು ವಿಮಾನ ಏರಲಿದ್ದಾರೆ. ಇದೇನು ತೀರಾ ಗಂಭೀರ ಆಪರೇಷನ್ ಅಲ್ಲ. ಕೆಲವು ದಿನ ರೆಸ್ಟ್ ಮಾಡಿ. ಮತ್ತೆ ‘ಕಲ್ಕಿ’- ‘ರಾಜಾಸಾಬ್’ ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ.
‘ಸಲಾರ್’ ಬಳಿಕ ಬರಲಿರುವ ‘ಕಲ್ಕಿ’ ಮತ್ತು ‘ರಾಜಾಸಾಬ್’ ಅದೆಷ್ಟರ ಮಟ್ಟಿಗೆ ಕೈ ಹಿಡಿಯುತ್ತೆ ಎಂದು ಕಾದುನೋಡಬೇಕಿದೆ.