ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸಿದ್ದ, ಈ ಬಾರಿ ಐಪಿಎಲ್ ಕಪ್ ಗುಜರಾತ್ ಪಾಲಾಗುವಂತೆ ಮಾಡಿದ ಸ್ಟಾರ್ ಸ್ಪಿನರ್ ರಶೀದ್ ಖಾನ್ ಅವರನ್ನು ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಮನೆಗೆ ಕರೆಯಿಸಿಕೊಳ್ಳುವುದಕ್ಕೂ ಒಂದು ಇಂಟ್ರಸ್ಟಿಂಗ್ ಸಂಗತಿ ಇದ್ದು, ಒಂದು ವೇಳೆ ಅಮೀರ್ ಮನೆಗೆ ರಶೀದ್ ಖಾನ್ ಹೋದರೆ, ಅಮೀರ್ ಆಸೆ ಈಡೇರಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ
ಐಪಿಎಲ್ ಫಿನಾಲೆ ವೇಳೆ ಅಮೀರಾ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ, ರಶೀದ್ ಖಾನ್ ಕೂಡ ಈ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗಾಗಿ ಅಮೀರ್ ಖಾನ್ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಅಲ್ಲದೇ, ಅವರೊಂದು ವಿಚಿತ್ರ ಬೇಡಿಕೆಯನ್ನು ಇಟ್ಟಿದ್ದಾರೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು
ರಶ್ಮೀದ್ ಖಾನ್ ಕೇವಲ ಕ್ರಿಕೆಟ್ ಆಡುವುದರಲ್ಲಿ ಮಾತ್ರ ಫೇಮಸ್ ಆಗಿಲ್ಲ. ರುಚಿ ರುಚಿಯಾಗಿ ಅಡುಗೆಯನ್ನೂ ಅವರು ಮಾಡುತ್ತಾರಂತೆ. ಅದರಲ್ಲೂ ಹಲವು ಬಗೆಯ ಅಡುಗೆ ಮಾಡುವುದರಲ್ಲಿ ರಶೀದ್ ಫೇಮಸ್. ಹಾಗಾಗಿ ತಮ್ಮ ಮನೆಗೆ ಬಂದು ಅಡುಗೆ ಮಾಡುವಂತೆ ಅಮೀರ್ ಕೇಳಿದ್ದಾರಂತೆ. ಯಾವ ರೀತಿಯ ಅಡುಗೆ ಮಾಡಿ ಬಡಿಸುತ್ತೀರಿ ಎಂದೂ ಕೇಳಿದ್ದಾರಂತೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ
ಅಮೀರ್ ಖಾನ್ ಆಸೆಗೆ ಇನ್ನೂ ರಶ್ಮೀದ್ ಉತ್ತರಿಸಿಲ್ಲ. ಆದರೆ, ಒಂದಿಲ್ಲೊಂದು ದಿನ ಅಮೀರ್ ಖಾನ್ ಅವರ ಮನೆಗೆ ರಶೀದ್ ಹೋಗುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಯಾಕೆಂದರೆ, ಅಮೀರ್ ಅವರ ನೆಚ್ಚಿನ ಫ್ಯಾನ್ ರಶೀದ್ ಖಾನ್ ಎನ್ನುವುದು ಗುಟ್ಟಾಗಿ ಉಳಿದಿಲ್ಲ.