ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?

Public TV
1 Min Read
Bappi Lahari

ಮುಂಬೈ: ಮಹಿಳೆಯರಿಗೆ ಚಿನ್ನಾಭರಣದ ಮೇಲೆ ಅತೀವ ಪ್ರೀತಿ. ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಮಹಿಳೆಯರೇ ಹೆಚ್ಚು ಚಿನ್ನಾಭರಣ ಧರಿಸುತ್ತಾರೆ. ಇದಕ್ಕೆ ಅಪವಾದವಾಗಿದ್ದರು ಬಾಲಿವುಡ್ ನ ಖ್ಯಾತ ಗಾಯಕ ಬಪ್ಪಿ ಲಹರಿ.

BAPPI LAHARI 1

ತಮ್ಮದೇ ಆದ ವಿಶಿಷ್ಟ ಗಾಯನದ ಮೂಲಕ ಕೇಳುಗರನ್ನು ಅವರು ಯಾವ ಪರಿ ಮಂತ್ರಮುಗ್ಧರನ್ನಾಗಿಸುತ್ತಿದ್ದರೋ, ಅಷ್ಟೇ ಅವರು ತಾವು ಧರಿಸುತ್ತಿದ್ದ ಚಿನ್ನಾಭರಣಗಳಿಂದ ಗಮನ ಸೆಳೆಯುತ್ತಿದ್ದರು. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ‘ನನಗೆ ಯಾಕಾದರೂ ರಾತ್ರಿ ಆಗತ್ತೋ? ಚಿನ್ನಾಭರಣಗಳನ್ನು ಬಿಚ್ಚಿಟ್ಟು ಮಲಗಿಕೊಳ್ಳಬೇಕಲ್ಲ ಎನ್ನುವ ಸಂಕಟ ಪ್ರತಿ ದಿನವೂ ಕಾಡುತ್ತದೆ’ ಎಂದಿದ್ದರು. ಆ ಮಟ್ಟಿಗೆ ಅವರು ಚಿನ್ನಾಭಿಮಾನಿ. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ

Bappi Lahari 2

ಕೊರಳ ತುಂಬಾ ಚಿನ್ನ, ಬೆರಳ ತುಂಬಾ ಚಿನ್ನ. ಮುಚ್ಚಿಟ್ಟಿದ್ದಕ್ಕಿಂತ ಅವರು ಚಿನ್ನಾಭರಣಗಳನ್ನು ಬಿಚ್ಚಿಟ್ಟಿದ್ದೇ ಹೆಚ್ಚು. ಅದು ಯಾವುದೇ ಶೋ ಆಗಿರಲಿ, ಕಾರ್ಯಕ್ರಮ ಎಲ್ಲಿಯೇ ಇರಲಿ, ಅದಕ್ಕೆ ತಕ್ಕಂತೆ ಅವರು ಚಿನ್ನಾಭರಣಗಳನ್ನು ಧರಿಸುತ್ತಿದ್ದರು. ರಿಯಾಲಿಟಿ ಶೋಗಳಲ್ಲಿ ತಮಗೆ ಕಾಡಿದ ಹಾಡುಗಾರನಿಗೆ ಅವರು ಸಾಕಷ್ಟು ಭಾರಿ ತಮ್ಮ ಮೈಮೇಲಿನ ಆಭರಣವನ್ನು ಬಿಚ್ಚಿಕೊಟ್ಟಿದ್ದೂ ಇದೆ.

BAPPI LAHARI

ಏಳು ದೊಡ್ಡ ಸರಗಳು, ಎಂಟು ಚಿಕ್ಕ ಸರ ಹಾಗೂ ದೊಡ್ಡದಾಗಿ ಲಾಕೆಟ್ ಹೊಂದಿರುವ ಎರಡು ಸರಗಳನ್ನು ಕೊರಳಿಗೆ ಹಾಕಿದರೆ, ಒಟ್ಟು ಹನ್ನೊಂದು ಉಂಗುರಗಳನ್ನು ಅವರು ಧರಿಸುತ್ತಿದ್ದರು. ಒಂದೊಂದು ಬಾರಿ ಚಿನ್ನ ಲೇಪಿತ ಬಟ್ಟೆಯನ್ನೇ ಹಾಕಿಕೊಂಡು ಬಂದು ಅಚ್ಚರಿ ಮೂಡಿಸುತ್ತಿದ್ದರು. ಇವುಗಳನ್ನು ಕಾಯಲೆಂದೇ ಅವರು ಇಬ್ಬರು ಅಂಗರಕ್ಷಕರನ್ನೂ ಇಟ್ಟುಕೊಂಡಿದ್ದರು. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

ಸ್ವತಃ ಬಪ್ಪಿ ಲಹರಿ ಅವರೇ 2014ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್‍ನಲ್ಲಿ 967 ಗ್ರಾಂ ಚಿನ್ನ, 8.9 ಕೆ. ಜಿ. ಬೆಳ್ಳಿ, 4 ಕೋಟಿ ರೂ. ಮೌಲ್ಯದ ವಜ್ರವಿದೆ ಎಂದು ಹೇಳಿದ್ದರು. 2022ರ ಹೊತ್ತಿಗೆ ಈ ತೂಕ ಎಷ್ಟಾಗಿರಬಹುದು ಎಂದು ಯೋಚಿಸಿ.

Share This Article
Leave a Comment

Leave a Reply

Your email address will not be published. Required fields are marked *