ಮುಂಬೈ: ಬಾಲಿವುಡ್ನ ಹಿರಿಯ ಗಾಯಕ, ಸಂಗೀತ ನಿದೇರ್ಶಕ ಬಪ್ಪಿ ಲಹರಿ ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
- Advertisement 2
ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 69 ವರ್ಷದ ಬಪ್ಪಿ ಲಹರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು
- Advertisement 3
Music composer and singer #BappiLahiri passes away at a Mumbai hospital this morning. Bappi Lahiri is known for delivering popular songs in several films of late 1970s-80s like Chalte Chalte, Disco Dancer & Sharaabi. pic.twitter.com/0ALlNL8vie
— All India Radio News (@airnewsalerts) February 16, 2022
- Advertisement 4
ಬಪ್ಪಿ ಲಹರಿ 1970-80ರ ದಶಕದಲ್ಲಿ ಬಾಲಿವುಡ್ನಲ್ಲಿ ಮಿಂಚಿದ ಹಾಡುಗಾರ. ಬಾಲಿವುಡ್ನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಅವರು, 1970-80ರ ದಶಕದಲ್ಲಿ ಸದ್ದು ಮಾಡಿದ್ದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಬಪ್ಪಿ ಲಹರಿಯವರ ಕಂಠದಲ್ಲಿ ಮೂಡಿಬಂದಿತ್ತು. ಇದನ್ನೂ ಓದಿ: 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ