ಒತ್ತಡದ ಜೀವನ ವಿಧಾನದಲ್ಲಿ ನಾವು ಹೆಚ್ಚಿನ ಸಮಯವನ್ನು ಮನೆಯೊಳಗೆ, ಕಚೇರಿ, ಕಂಪ್ಯೂಟರ್ ಮುಂದೆಯೇ ಕಳೆಯುತ್ತೇವೆ. ಹೊರಗಡೆ ಬರುವುದೇ ಅಪರೂಪ ಎನ್ನುವಂತಾಗಿದೆ. ಬೆಳಗ್ಗೆ ಬೇಗ ಎದ್ದು ಸೂರ್ಯೋದಯ ನೋಡುವುದು, ಸೂರ್ಯನ ಕಿರಣಗಳನ್ನು ಮೈಗೆ ತಾಗಿಸಿಕೊಳ್ಳುವ ಮಂದಿ ಈ ಆಧುನಿಕ ಕಾಲದಲ್ಲಿ ವಿರಳಾತಿ ವಿರಳ. ಬೆಳಗಿನ ಸೂರ್ಯನ ಕಿರಣಗಳು (Sunlight) ಮೈಗೆ ತಾಗುವುದರಿಂದ ಆರೋಗ್ಯಕ್ಕೆ ಒಳಿತು ಎಂಬುದು ಎಲ್ಲರಿಗೂ ತಿಳಿದಿದೆ. ಇದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಯಾವ ಸಂದರ್ಭದಲ್ಲಿ, ಎಷ್ಟು ಹೊತ್ತು ಸೂರ್ಯನ ಕಿರಣಗಳು ನಿಮ್ಮ ಮೈ ಮೇಲೆ ಬಿದ್ದರೆ ಉತ್ತಮ ಎಂಬ ಬಗ್ಗೆ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಳಗ್ಗೆ 25 ರಿಂದ 30 ನಿಮಿಷಗಳ ಕಾಲ (ಸೂರ್ಯೋದಯದ ನಂತರ ಮತ್ತು ಬೆಳಗ್ಗೆ 8 ಗಂಟೆಗೆ ಮೊದಲು) ಮತ್ತು ಸಂಜೆ (ಸೂರ್ಯಾಸ್ತದ ಸಮಯದಲ್ಲಿ) ಸೂರ್ಯನ ಕಿರಣ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯುರ್ವೇದ ತಜ್ಞ ಡಾ. ಡಿಕ್ಸಾ ಭಾವಸರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..
Advertisement
Advertisement
ವಿಟಮಿನ್ ಡಿ
ನೈಸರ್ಗಿಕ ಬೆಳಕು ʻವಿಟಮಿನ್ ಡಿʼಯ (vitamin D) ಶ್ರೀಮಂತ ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅದಕ್ಕಿಂತ ಹೆಚ್ಚಿನದು ಸಿಗುತ್ತದೆ. ʻವಿಟಮಿನ್ ಡಿʼ ಪ್ರತಿರಕ್ಷಣಾ ಮತ್ತು ಶಕ್ತಿಯನ್ನು ಹೆಚ್ಚಿಸುವ ಹಾರ್ಮೋನ್ ಆಗಿದ್ದು, ಅದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
Advertisement
ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣ
ಇದು ವಾಸೋಡಿಲೇಟರ್ ಆಗಿರುವ ನೈಟ್ರಿಕ್ ಆಕ್ಸೈಡ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತದ ಹರಿವು, ಆಮ್ಲಜನಕೀಕರಣವನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಭಾವಸರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!
Advertisement
ಮಾನಸಿಕ ಆರೋಗ್ಯ
ಪ್ರತಿದಿನ ಸೂರ್ಯನ ಬೆಳಕಿನಲ್ಲಿ ವ್ಯಾಯಾಮ ಮಾಡುವುದು ನಿಮಗೆ ಸಂತೋಷ ನೀಡುತ್ತದೆ. ನೈಸರ್ಗಿಕ ಬೆಳಕಿನಿಂದ ನ್ಯೂರೋಟ್ರಾನ್ಸ್ಮಿಟರ್ (ನರಕೋಶಗಳು) ದೇಹದಲ್ಲಿ ಸಿರೊಟೋನಿನ್ ಉತ್ಪಾದನೆಗೆ ಕಾರಣವಾಗುತ್ತದೆ. ಇದರಿಂದ ಆತಂಕ, ಖಿನ್ನತೆ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಭಾವಸರ್ ಹೇಳಿದ್ದಾರೆ.
ಉತ್ತಮ ನಿದ್ರೆ
ಸೂರ್ಯನ ಬೆಳಕಿನಲ್ಲಿ ನಾವು ಹೊತ್ತು ಕಳೆದಷ್ಟು ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು. ನೈಸರ್ಗಿಕ ಸೂರ್ಯನ ಬೆಳಕು ನಮ್ಮ ನಿದ್ರೆಗೆ ತುಂಬಾ ಸಹಕಾರಿ. ಹೊರಾಂಗಣದಲ್ಲಿ ಇರುವುದು ನಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
ಯಾವ್ಯಾವುದೋ ಹೊತ್ತಿನಲ್ಲಿ ಸೂರ್ಯನ ಬೆಳಕಿಗೆ ಮೈವೊಡ್ಡಿಕೊಳ್ಳುವುದು ಸರಿಯಲ್ಲ. ಇದು ಅಜಾಗರೂಕ ನಡೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಬೆಳಗ್ಗೆಯ ಎಳೆ ಬಿಸಿಲು ಮತ್ತು ಸಂಜೆ ಸೂರ್ಯಾಸ್ತದ ಬೆಳಕು ಆರೋಗ್ಯಕ್ಕೆ ಪೂರಕ ಎಂಬುದು ವೈದ್ಯರ ಅಭಿಪ್ರಾಯ.