ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಬಾಗಲಕೋಟೆ ಜಿಲ್ಲೆಯ ಬದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇತ್ತ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಸಿಎಂ ಕಣಕ್ಕಿಳಿದಿದ್ದಾರೆ.
ಸಿಎಂ ಬದಾಮಿಯಲ್ಲಿ ಕಣಕ್ಕಿಳಿಯಲು ಜಾತಿ ಲೆಕ್ಕಾಚಾರವೇ ಮೂಲ ಕಾರಣ ಎನ್ನಲಾಗಿದೆ. ಆದ್ರೆ ಜಾತಿ ಸಮೀಕ್ಷೆ ನಡೆಸಿದ ಕಾಂಗ್ರೆಸ್ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ. ಬದಾಮಿ ಕ್ಷೇತ್ರದ ಹಿರಿಯ ನಾಯಕರಲ್ಲಿ ಜಾತಿ ಲೆಕ್ಕಾಚಾರದ ಪೂರ್ಣ ಮಾಹಿತಿ ಲಭ್ಯವಿದೆ ಅಂತಾ ಹೇಳಲಾಗ್ತಿದ್ದು, ಈ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
ಹೊಸ ಜಾತಿ ಲೆಕ್ಕಾಚಾರ ಈ ಕೆಳಗಿನಂತಿದೆ ಎಂದು ಹೇಳಲಾಗ್ತಿದೆ:
ಕುರುಬ-49,600, ಲಿಂಗಾಯತ-20,299, ಎಸ್‍ಸಿ-29,900, ವಾಲ್ಮೀಕಿ-19,500, ಮುಸ್ಲಿಂ-19,000, ದೇವಾಂಗ(ನೇಕಾರ)-15,500, ಗಾಣಿಗ-10,500, ಕ್ಷತ್ರೀಯ ಮರಾಠ-5,700, ವಿಶ್ವಕರ್ಮ-4,600, ರೆಡ್ಡಿ-3,800, ಉಪ್ಪಾರ-2,700, ಕಬ್ಬಲಿಗ-2,650, ಗೊಲ್ಲ-2,250, ಕ್ರಿಶ್ಚಿಯನ್-1450 ಮತ್ತು ಇತರೆ-27,000.
Advertisement
ಕುರುಬ ಸಮುದಾಯದ ಅತಿ ಹೆಚ್ಚು ಮತಗಳನ್ನು ಹೊಂದಿರುವ ಬದಾಮಿ ಕ್ಷೇತ್ರದಲ್ಲಿ ಸರಳವಾಗಿ ಜಯ ಸಾಧಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಇದೇ ಆಧಾರದ ಮೇಲೆಯೇ ಬಿಜೆಪಿ ಸಹ ದಲಿತ ನಾಯಕ, ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಎಸ್‍ಸಿ, ಲಿಂಗಾಯತ ಮತ್ತು ವಾಲ್ಮೀಕಿ ಸಮುದಾಯದ ಮತಗಳ ಕ್ರೂಡಿಕರಣವಾದ್ರೆ ಶ್ರೀರಾಮುಲು ಸರಳ ಬಹುಮತದಿಂದ ಗೆಲುವು ಸಾಧಿಸ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.
Advertisement
ಈ ಹಿಂದೆ ಹೇಳಲಾಗ್ತಿದ್ದ 2011ರ ಜನಗಣತಿಯ ಆಧಾರದಲ್ಲಿ ದಾಖಲಾಗಿರುವ ಮಾಹಿತಿ ಹೀಗಿತ್ತು.
Advertisement
ಮತದಾರರ ಸಂಖ್ಯೆ ಎಷ್ಟಿದೆ?
ಕ್ಷೇತ್ರದ ಒಟ್ಟು ಮತದಾರರು- 2,12,184
ಪುರುಷ ಮತದಾರರು -1,07,074
ಮಹಿಳಾ ಮತದಾರರು – 1,05,110
ಬದಾಮಿ ಕ್ಷೇತ್ರದ ಜಾತಿವಾರು ಲೆಕ್ಕಾಚಾರ
ಕುರುಬ – 46 ಸಾವಿರ
ಗಾಣಿಗ – 26 ಸಾವಿರ
ಲಿಂಗಾಯತ – 32 ಸಾವಿರ (ಪಂಚಮಸಾಲಿ. ಬಣಜಿಗ)
ನೇಕಾರ – 17 ಸಾವಿರ
ಪ. ಜಾತಿ ಪಂಗಡ – 25 ಸಾವಿರ
ಅಲ್ಪ ಸಂಖ್ಯಾತರು – 12 ಸಾವಿರ
ಮರಾಠಾ ಕ್ಷತ್ರೀಯ – 9 ಸಾವಿರ
ವಾಲ್ಮೀಕಿ – 13 ಸಾವಿರ
ಬಂಜಾರ – 6 ಸಾವಿರ
ರೆಡ್ಡಿ – 10 ಸಾವಿರ
ಇತರರು – 16 ಸಾವಿರ
2013ರ ಫಲಿತಾಂಶ ಏನಿತ್ತು?
2013ರ ಚುನಾವಣೆಯಲ್ಲಿ ಬಿಬಿ ಚಿಮ್ಮನಕಟ್ಟಿ 15,113 ಮತಗಳ ಅಂತರದಿಂದ ಜಯಗಳಿಸಿದ್ದರು. ಚಿಮ್ಮನಕಟ್ಟಿ 57,446(41.3%) ಮತಗಳನ್ನು ಪಡೆದಿದ್ದರೆ ಜೆಡಿಎಸ್ ನ ಮಹಾಂತೇಶ್ ಗುರುಪಾದಪ್ಪ ಅವರು 42,333(30.4%) ಮತಗಳನ್ನು ಪಡೆದಿದ್ದರು. ಕಲ್ಲಪ್ಪ ಪಟ್ಟಣಶೆಟ್ಟಿ ಅವರು 30,310(21.8%) ಮತಗಳನ್ನು ಗಳಿಸಿದ್ದರು.