– ಮಹಿಳೆಯರ ಉಚಿತ ಬಸ್ ಪ್ರಯಾಣದ ಬಗ್ಗೆ ಮೋದಿ ಹೇಳಿಕೆಗೆ ದೆಹಲಿ ಸಿಎಂ ಟಾಂಗ್
ನವದೆಹಲಿ: ಪ್ರಧಾನಿ ಮೋದಿ (Narendra Modi) ಹಾಗೂ ಅವರ ಸಚಿವರು ವಿಮಾನಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾದರೆ, ದೇಶಾದ್ಯಂತ ಮಹಿಳೆಯರು ಯಾಕೆ ಉಚಿತ ಬಸ್ ಪ್ರಯಾಣ ಮಾಡಬಾರದು ಎಂದು ನವದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಪ್ರಶ್ನಿಸಿದ್ದಾರೆ.
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಮಧ್ಯಂತರ ಜಾಮೀನಿನ ಮೇಲೆ ಕೇಜ್ರಿವಾಲ್ ಹೊರಗಿದ್ದಾರೆ. ಉಚಿತ ಬಸ್ ಪ್ರಯಾಣ ಕುರಿತ ಮೋದಿ ಹೇಳಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ಕೇಜ್ರಿವಾಲ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ ಕೇಸ್ – ದೇಶದಲ್ಲೇ ಮೊದಲ ಬಾರಿಗೆ `ಎಎಪಿ’ ಅನ್ನು ಆರೋಪಿ ಎಂದು ಹೆಸರಿಸಿದ ಇಡಿ!
ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವುದನ್ನು ಪ್ರಧಾನಿ ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ. ದೇಶಾದ್ಯಂತ ಉಚಿತ ಬಸ್ ಪ್ರಯಾಣವನ್ನು ಪರಿಚಯಿಸಬೇಕೆಂದು ಮಹಿಳೆಯರು ಬಯಸುತ್ತಾರೆ. ಆದರೆ ಪ್ರಧಾನಿ ಮತ್ತು ಅವರ ಮಂತ್ರಿಗಳು ಉಚಿತ ವಿಮಾನ ಪ್ರಯಾಣವನ್ನು ಪಡೆಯಬಹುದಾದರೆ, ದೇಶಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಏಕೆ ಪಡೆಯಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಯವರ ಸಂದರ್ಶನದ ವೀಡಿಯೋ ಕ್ಲಿಪ್ ಅನ್ನು ನವದೆಹಲಿ ಸಿಎಂ ಹಂಚಿಕೊಂಡಿದ್ದಾರೆ. ಉಚಿತ ಬಸ್ ಪ್ರಯಾಣ ಕಲ್ಪಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ನನ್ನ ಮಗನನ್ನು ನಿಮ್ಮ ಕೈಗೆ ನೀಡುತ್ತಿದ್ದೇನೆ: ರಾಹುಲ್ ಗೆಲುವಿಗೆ ಜನರಲ್ಲಿ ಸೋನಿಯಾ ಗಾಂಧಿ ಮನವಿ
ಮೆಟ್ರೋ ಸೇವೆಯನ್ನು ಹೊಂದಿರುವ ನಗರದಲ್ಲಿ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆ ಚುನಾವಣೆಗಳನ್ನು ಗೆಲ್ಲುವ ಪ್ರಯತ್ನವಾಗಿದೆ. ಅದು ಮೆಟ್ರೋ ಸೇವೆಯನ್ನು ಪಡೆಯುವ 50% ಪ್ರಯಾಣಿಕರನ್ನು ತನ್ನತ್ತ ತೆಗೆದುಕೊಳ್ಳುತ್ತದೆ ಎಂದು ವೀಡಿಯೋದಲ್ಲಿ ಪ್ರಧಾನಿ ಮೋದಿ ವಿವರಿಸಿದ್ದಾರೆ.