ಶಿವಮೊಗ್ಗ: ಶವದ ಮೇಲೆ ರಾಜಕೀಯ ಮಾಡುವುದನ್ನು ಆರ್ ಎಸ್‍ಎಸ್ ಮತ್ತು ಭಜರಂಗ ದಳ ಬಿಡಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಶೀರ್ ಹತ್ಯೆ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಮುಸ್ಲಿಂ ಯುವಕ ಮೃತಪಟ್ಟಿದ್ದು ಇದಕ್ಕೆ ಯಾಕೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ. ಶವದ ಮೇಲೆ ರಾಜಕೀಯ ಮಾಡುವುದನ್ನು ಆರ್ ಎಸ್‍ಎಸ್ ಮತ್ತು ಭಜರಂಗ ದಳ ಬಿಡಬೇಕು ಎಂದಿದ್ದಾರೆ.
Advertisement
Advertisement
ದ್ವೇಷದ ರಾಜಕರಾಣ ಮತ್ತು ಕೋಮುವಾದಿ ಭಾವನೆಗಳನ್ನು ಕೆರಳಿಸಿರುವುದಕ್ಕೆ ಯಾವತ್ತು ಕೊನೆಯಿಲ್ಲ. ಇದರಿಂದ ಸಮಾಜಕ್ಕೆ ಹಾನಿಯಾಗುತ್ತದೆ. ಅಲ್ಲದೇ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತದೆ. ಯರೂ ಕೂಡ ಶವ ಮತ್ತು ಸತ್ತವನ ಮೇಲೆ ರಾಜಕಾರಣ ಮಾಡಲು ಹೋಗಬಾರದು. ಅದು ಬಿಟ್ಟು ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕು. ಒಟ್ಟಿನಲ್ಲಿ ಸಮಾಜದಲ್ಲಿ ಸಾಮರಸ್ಯ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ಎಲ್ಲಾ ಪಕ್ಷದವರು ಮಾಡಬೇಕು ಅಂದ್ರು.
Advertisement
Advertisement
ಬಿಜೆಪಿಯವರು ಒಬ್ಬರು ಸತ್ತ ತಕ್ಷಣ ಯಾಕೆ ಅಲ್ಲಿ ಪ್ರತಿಭಟನೆ ನಡೆಸುತ್ತಾರೆ. ಈವಾಗ ಮುಸ್ಲಿಂ ಒಬ್ಬ ಸತ್ತಿದ್ದಾನೆ ಅಲ್ವ. ಈವಾಗ ಯಾಕೆ ಅಲ್ಲಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಧಾರ್ಮಿಕ ಭಾನವೆಗಳನ್ನು ಕೆರಳಿಸರೋದ್ರಿಂದ ಯಾರಿಗೆ ಅನುಕೂಲವಾಗುತ್ತದೆ. ಇದರಿಂದ ಸಮಾಜಕ್ಕೆ ಹಾನಿಯಾಗುತ್ತದೆ. ಶಾಂತಿ, ನೆಮ್ಮದಿ ಇರೋದಿಲ್ಲ. ಹೀಗಾಗಿ ಇಂತವುಗಳನ್ನು ಬಿಟ್ಟು ಬಿಡಬೇಕು ಅಂದ್ರು.
ಕರಾವಳಿಯಲ್ಲಿ ಗಲಭೆಗೆ ಆರ್ ಎಸ್‍ಎಸ್, ಭಜರಂಗದಳವೇ ಕಾರಣ. ದ್ವೇಷ ರಾಜಕಾರಣದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಯಾವುದೇ ಸಂಘಟನೆ ನಿಷೇಧ ಮಾಡಲು ಸೂಕ್ತ ಸಾಕ್ಷಾಧಾರ ಬೇಕು. ಚಕ್ರವರ್ತಿ ಸೂಲಿಬೆಲೆ ಫೇಸ್‍ಬುಕ್ ಸ್ಟೇಟಸ್ ಹಾಕಿರುವುದು ಇದು ಸಹ ಕೋಮು ಭಾವನೆ ಕೆರಳಿಸುವ ಇನ್ನೂಂದು ದಾರಿ ಅಷ್ಟೆ ಎಂದು ಕಿಡಿಕಾರಿದ್ದಾರೆ.
https://youtu.be/ZWFlu1dmwi0
https://www.youtube.com/watch?v=prf8LAzRcus
https://www.youtube.com/watch?v=IlGszWsi80U