ಚೆನ್ನೈ/ಮುಂಬೈ: 16ನೇ ಆವೃತ್ತಿಯ ಐಪಿಎಲ್ ಪ್ಲೇ ಆಫ್ (IPL Playoffs) ಪಂದ್ಯ ಆರಂಭಗೊಂಡಿದ್ದು, ಪ್ಲೇ ಆಫ್‌ನಲ್ಲಿ ಬೌಲಿಂಗ್ ಮಾಡುವ ಪ್ರತಿಯೊಂದು ಡಾಟ್ ಬಾಲ್‌ಗೆ (Dot Ball) 500 ಗಿಡಗಳನ್ನು (500 Trees) ನೆಡುವುದಾಗಿ ಬಿಸಿಸಿಐ (BCCI) ಮಹತ್ತರ ನಿರ್ಧಾರ ಪ್ರಕಟಿಸಿದೆ.
ಪಂದ್ಯಾವಳಿಯ ಅಧಿಕೃತ ಪ್ರಸಾರಕರು ಅದಕ್ಕಾಗಿ ವಿಶೇಷ ಗ್ರಾಫಿಕ್ ಅನ್ನು ಡಿಜಿಟಲ್ ಸ್ಕೂರ್ ಬೋರ್ಡ್‌ನಲ್ಲಿ ಪ್ರದರ್ಶಿಸುತ್ತಿದ್ದಾರೆ, ಡಾಟ್ ಬಾಲ್‌ಗಳನ್ನು ಕಪ್ಪುಯ ಬದಲಾಗಿ ʻಗಿಡದʼ ಚಿತ್ರಗಳನ್ನು ತೋರಿಸಲಾಗುತ್ತಿದೆ.
Advertisement
Advertisement
ಮಂಗಳವಾರ ನಡೆಯುತ್ತಿರುವ ಸಿಎಸ್‌ಕೆ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಪ್ರತಿ ಡಾಟ್ ಬಾಲ್ ಮಾಡಿದಾಗಲೆಲ್ಲಾ ಡಾಟ್ ಬದಲಿಗೆ ಗಿಡದ ಚಿತ್ರದ ಗ್ರಾಫಿಕ್‌ಗಳನ್ನ ತೋರಿಸಲಾಗುತ್ತಿದೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಬಳಿಕ ಮತ್ತೆ ಐಪಿಎಲ್‍ನಲ್ಲಿ ಬ್ಯಾಟ್ ಬೀಸುವ ಸೂಚನೆ ಕೊಟ್ಟ ಗೇಲ್
Advertisement
ಏಕೆ ಈ ನಿರ್ಧಾರ?
ಪ್ರತಿ ಐಪಿಎಲ್‌ನಲ್ಲೂ ಅಭಿಮಾನಿಗಳಿಗೆ ಮನರಂಜನೆ ಸಿಗುವಂತೆ ಮಾಡುವ ಬಿಸಿಸಿಐ ಪರಿಸರ ಕಾಳಜಿ ದೃಷ್ಟಿಯಿಂದ ಗಿಡಗಳನ್ನ ನೆಡುವ ನಿರ್ಧಾರಕ್ಕೆ ಬಂದಿದೆ. ಪರಿಸರ ಸಂರಕ್ಷಣೆಗಾಗಿ ತನ್ನ ಕೈಲಾದಷ್ಟು ಸೇವೆ ಮಾಡಲು ಭಾರತದಾದ್ಯಂತ ಗಿಡಗಳನ್ನು ನೆಡುವ ಮಹತ್ತರ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.
Advertisement
ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದೆ. ಇದನ್ನೂ ಓದಿ: IPL 2023: ಶುಭಮನ್ ಗಿಲ್ ಶತಕದಾಟ, ಗುಜರಾತ್ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ