ಕನ್ನಡದಲ್ಲಿ ಇಬ್ಬರು ಸೂಪರ್ ಸ್ಟಾರ್ ಗಳು ಬಾಲ್ಯದಿಂದಲೇ ಪರಿಚಯ ಅಂತಿದ್ದರೆ ಅದು ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರಿಗೆ ಕ್ರೆಡಿಟ್ ಸೇರಬೇಕು. ಇಬ್ಬರೂ ಬಾಲ್ಯದಿಂದಲೇ ಸ್ನೇಹಿತರು. ಅಪ್ಪು ಬಾಲ್ಯದಲ್ಲಿ ಇರುವಾಗ ಅದೆಷ್ಟೋ ಬಾರಿ ಸುದೀಪ್ ಅವರನ್ನು ಭೇಟಿ ಮಾಡಿದ್ದು ಇದೆ. ಒಟ್ಟಿಗೆ ಆಡಿದ್ದೂ ಇದೆ. ಅದರಲ್ಲೂ ಸುದೀಪ್ ಅವರು ತಂದೆ ನಡೆಸಿಕೊಡುತ್ತಿದ್ದ ಸರೋವರ ಹೋಟೆಲ್ ಗೆ ಡಾ.ರಾಜ್ ಕುಮಾರ್ ಅವರು ಖಾಯಂ ಗೆಸ್ಟ್. ಹಾಗಾಗಿ ಅಪ್ಪನ ಜೊತೆಯೂ ಅಪ್ಪು ಅಲ್ಲಿಗೆ ಬರುತ್ತಿದ್ದರು.
ಅಪ್ಪು ಅವರನ್ನು ಸುದೀಪ್ ಅವರು ಎಷ್ಟು ಗೌರವಿಸುತ್ತಿದ್ದರೋ, ಅಷ್ಟೇ ಗೌರವವನ್ನು ಸುದೀಪ್ ಅವರಿಗೆ ಅಪ್ಪು ನೀಡುತ್ತಿದ್ದರು. ಹೀಗಾಗಿಯೇ ಅಪ್ಪುವನ್ನು ಗೌರವಿಸುವುದಕ್ಕಾಗಿ ಅನೇಕ ಚಿತ್ರಮಂದಿರಗಳಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಗಳನ್ನು ಚಿತ್ರತಂಡ ಹಾಕಿದೆ. ಫ್ಯಾನ್ಸ್ ಕೂಡ ಇಬ್ಬರ ಕಟೌಟ್ ಗೂ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಕಟೌಟ್ ಗಳು ಈ ಜೋಡಿಯದ್ದೇ ಚಿತ್ರಮಂದಿರದ ಮುಂದೆ ಎದ್ದು ನಿಂತಿವೆ. ಹಾಗಾಗಿ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ
ಸಾಮಾನ್ಯವಾಗಿ ಸಿನಿಮಾದಲ್ಲಿ ನಟರು ಇದ್ದರೆ ಅವರ ಕಟೌಟ್ ಹಾಕುವುದು ವಾಡಿಕೆ. ಪುನೀತ್ ರಾಜ್ ಕುಮಾರ್ ಅವರಿಗೂ ವಿಕ್ರಾಂತ್ ರೋಣ ಸಿನಿಮಾಗೂ ಸಂಬಂಧವೇ ಇಲ್ಲದಿದ್ದರೂ, ನಟನ ಗೌರವಾರ್ಥ ಸಾಕಷ್ಟು ಕಟೌಟ್ ಗಳನ್ನು ವಿಕ್ರಾಂತ್ ರೋಣ ತಂಡ ಹಾಕುವ ಮೂಲಕ ನಮನ ಸಲ್ಲಿಸಿದೆ. ಈ ನಡೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಂತಸ ತಂದಿದೆ. ಹೀಗಾಗಿ ವಿಕ್ರಾಂತ್ ರೋಣ ತಂಡಕ್ಕೆ ಮತ್ತು ಸುದೀಪ್ ಅವರಿಗೆ ಅಭಿಮಾನಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.