ನವದೆಹಲಿ: ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸುತ್ತಿರುವವರೇ ಮುಸ್ಲಿಮರು ಎಂದು ಜನಸಂಖ್ಯೆ ನಿಯಂತ್ರಣ ಕುರಿತಂತೆ ಇತ್ತೀಚೆಗಷ್ಟೇ ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ನೀಡಿದ್ದ ಹೇಳಿಕೆಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ತಿರುಗೇಟು ನೀಡಿದ್ದಾರೆ.
Advertisement
ಹೈದರಾಬಾದ್‍ನಲ್ಲಿ (Hydrabad) ನಡೆದ ಸಭೆಯೊಂದರ ವೀಡಿಯೋವನ್ನು ಓವೈಸಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen) (ಎಐಎಂಐಎಂ) ಮುಖ್ಯಸ್ಥರು “ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಾಗಿ ಕಡಿಮೆಯಾಗುತ್ತಿದೆ. ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಕಾಂಡೋಮ್ (Condom) ಅನ್ನು ಹೆಚ್ಚಾಗಿ ಯಾರು ಹೆಚ್ಚಾಗಿ ಬಳಸುತ್ತಿರುವವರು ಯಾರು? ನಾವು, ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದು ಬೇಕಾಗಿಲ್ಲ ಎಂದು ಹೇಳಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ.
Advertisement
Live: Jalsa Rahmatul lil aalameen, Darussalam – Hyd | 2022 https://t.co/ibMrytkwbD#milad #Mawlid #ProphetForAll
— Asaduddin Owaisi (@asadowaisi) October 8, 2022
Advertisement
ನಾಗಪುರದಲ್ಲಿರುವ (Nagapura) ಆರ್‌ಎಸ್‍ಎಸ್ (RSS) ಕೇಂದ್ರ ಕಚೇರಿಯಲ್ಲಿ ನಡೆದ ವಿಜಯದಶಮಿ (Viajayadashami) ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ದೇಶದಲ್ಲಿರುವ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದರು. ಜನಸಂಖ್ಯೆಯಿಂದ ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದಿದ್ದರು. ಇದನ್ನೂ ಓದಿ: ಹಿಂದೂಗಳಿಂದ ಅಲ್ಪಸಂಖ್ಯಾತರಿಗೆ ಅಪಾಯವಿಲ್ಲ; ನೀವು ಭಯಪಡಬೇಕಾಗಿಲ್ಲ – ಮೋಹನ್ ಭಾಗವತ್
Advertisement
ವಿಶ್ವದಲ್ಲಿ ಎರಡು ರೀತಿಯಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದೆ. ಒಂದು ದೇಶದ ಸಂಪನ್ಮೂಲವಾಗಿ ಬಳಕೆಯಾಗುವ ಜನಸಂಖ್ಯೆಯ ಏರಿಕೆ. ಮತ್ತೊಂದು ದೇಶಕ್ಕೆ ಹೊರೆಯಾಗುವ ಜನಸಂಖ್ಯೆ. ಎರಡನೇ ಸ್ವರೂಪದ ಜನಸಂಖ್ಯೆ ಏರಿಕೆಯಾಗುತ್ತಲೇ ಇದ್ದರೆ ಅದು ಹೊರಲಾಗದ ಹೊರೆಯಾಗುತ್ತದೆ. ಒಬ್ಬ ಮಹಿಳೆ ಎಷ್ಟು ಮಕ್ಕಳನ್ನು ಹೆತ್ತಿದ್ದಾಳೆ ಎಂಬುದು ಆಕೆಯ ಮಾನಸಿಕ ಆರೋಗ್ಯ, ಜತೆಗೆ ಆರ್ಥಿಕ ಸ್ಥಿತಿಯನ್ನೂ ಬಾಧಿಸುತ್ತದೆ. ದೇಶದ ಪರಿಸರವನ್ನೂ ಬಾಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ: ಮೋಹನ್ ಭಾಗವತ್ ಪ್ರಶ್ನೆ
ಯಾವುದೇ ಕುಟುಂಬ ಏನು ಬಯಸುತ್ತದೆ ಎಂಬುದೂ ಜನಸಂಖ್ಯೆಯ ಏರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ರಾಷ್ಟ್ರೀಯ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಸ್ತುತವಾಗುವಂತೆ ಜನಸಂಖ್ಯೆಯನ್ನು ರೂಪಿಸಿ, ರಕ್ಷಿಸಬೇಕಾಗುತ್ತದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣ ನೀತಿ ಅತ್ಯಗತ್ಯ. ಆದರೆ ಜನಸಂಖ್ಯಾ ನಿಯಂತ್ರಣ ನೀತಿಯು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಸಮಾನವಾಗಿ ಅನ್ವಯವಾಗಬೇಕು ಎಂದು ಆಗ್ರಹಿಸಿದ್ದರು.